ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಜಾರಿಗೆ ಬಂದ ನಂತರ, ಬೆಂಗಳೂರು ನಗರದ ಅಭಿವೃದ್ಧಿಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಲ್ಲೂ ಇತ್ತೀಚೆಗೆ ಜಿಬಿಎ ಆರಂಭಿಸಿದ ಬೀದಿನಾಯಿಗಳ ಕಲ್ಯಾಣ ಯೋಜನೆ, ಇದೀಗ ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇತ್ತೀಚೆಗೆ ಬೀದಿನಾಯಿಗಳ ಕಲ್ಯಾಣ ಯೋಜನೆ (Stray Dog Welfare Scheme) ನಂತರ ನಗರದಲ್ಲಿ ಬೀದಿನಾಯಿಗಳನ್ನು ದತ್ತು ಪಡೆಯುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ನಗರದಲ್ಲಿ ಇತ್ತೀಚೆಗೆ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು, ಈಗಾಗಲೇ ಬೀದಿನಾಯಿಗಳಿಂದ ತೊಂದರೆಗೊಳಗಾದ ಹಲವಾರು ಪ್ರಕರಣಗಳು ದಾಖಲಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಮಹತ್ವದ ಕ್ರಮ ಕೈಗೊಂಡಿತ್ತು. ಅದಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಗರದ ಐದು ನಗರ ಪಾಲಿಕೆಗಳೊಂದಿಗೆ ಜೊತೆಗೂಡಿ, ವ್ಯವಸ್ಥಿತ ಬೀದಿನಾಯಿಗಳ ದತ್ತು ಕಾರ್ಯಕ್ರಮ ಕೈಗೊಂಡಿತ್ತು. ಈ ಮೂಲಕ ಈಗಾಗಲೇ ಕೆಲವು ವಾರಗಳಲ್ಲಿ ಹಲವಾರು ಬೀದಿ ನಾಯಿಗಳಿಗೆ ಶಾಶ್ವತ ಮನೆ ಸಿಕ್ಕಿದೆ.
ಏನಿದು ಬೀದಿನಾಯಿ ಕಲ್ಯಾಣ ಯೋಜನೆ?
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜಾರಿಗೆ ತಂದಿರುವ ಬೀದಿನಾಯಿಗಳ ಕಲ್ಯಾಣ ಯೋಜನೆ ಒಂದು ವ್ಯವಸ್ಥಿತ ಕಾರ್ಯಕ್ರಮವಾಗಿದೆ. ಈ ಮೂಲಕ ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆಯನ್ನು ನಿಯಂತ್ರಿಸುವುದು, ದತ್ತು ಮೂಲಕ ಅವುಗಳಿಗೆ ಶಾಶ್ವತ ಮನೆ ಸಿಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ಎಲ್ಲಾ ನಾಯಿಗಳಿಗೆ ವ್ಯಾಕ್ಸಿನೇಷನ್ ಮಾಡುವುದು, ಅವಶ್ಯಕ ಲಸಿಕೆಗಳನ್ನು ನೀಡುವುದು. ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಬೃಹತ್ ಬೆಂಗಳೂರು ಪ್ರಾಧಿಕಾರ (GBA) ನಗರದಲ್ಲಿ ಬೀದಿ ನಾಯಿಗಳ ಕಲ್ಯಾಣಕ್ಕಾಗಿ ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಲೇ ಇದೆ. ಈ ಮೂಲಕ ಬೀದಿ ನಾಯಿಗಳ ದತ್ತು ಸ್ವೀಕಾರವನ್ನು ಹೆಚ್ಚಿಸುವುದೇ ಇದರ ಮುಖ್ಯ ಗುರಿ. ನಗರದ ಮಹಾನಗರ ಪಾಲಿಕೆಗಳ ಸಹಯೋಗದಲ್ಲಿ ಜಾರಿಗೊಳಿಸಿದ ಒಂದು ವ್ಯವಸ್ಥಿತ ದತ್ತು ಕಾರ್ಯಕ್ರಮದಿಂದ ಇತ್ತೀಚಿನ ವಾರಗಳಲ್ಲಿ ಹಲವು ನಾಯಿಗಳು ಶಾಶ್ವತ ಮನೆಗಳನ್ನು ಕಂಡುಕೊಂಡಿವೆ ಎಂದು GBA ಅಧಿಕಾರಿಗಳು ಇದೀಗ ತಿಳಿಸಿದ್ದಾರೆ.
ಅಲ್ಲದೇ ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ವ್ಯಾಪ್ತಿಯ ನಿವಾಸಿ ಸುಜಯಾ ಜಗದೀಶ್ ಎಂಬವರು 20 ಬೀದಿ ನಾಯಿಗಳನ್ನು ದತ್ತು ಪಡೆದು ಇದಕ್ಕೆ ಮಾದರಿಯಾಗಿದ್ದಾರೆ. ನಗರದಲ್ಲಿ ಇಂತಹ ದತ್ತು ಪಡೆಯುವವರ ಸಂಖ್ಯೆ ಹೆಚ್ಚುತ್ತಿದ್ದು, ಜವಾಬ್ದಾರಿಯುತ ಸಾಕುಪ್ರಾಣಿ ಮಾಲೀಕತ್ವ ಹಾಗೂ ಮಾನವೀಯ ಜನಸಂಖ್ಯಾ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿರುವುದನ್ನು ಇದು ತೋರಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ದತ್ತು ಅಭಿಯಾನವು ಪ್ರಾಣಿ ಹಿಂಸೆ ತಡೆ ಕಾಯಿದೆ, 1960 ಮತ್ತು ಪ್ರಾಣಿ ಜನನ ನಿಯಂತ್ರಣ (ABC) ನಿಯಮಗಳು, 2023 ರ ಅನ್ವಯದಲ್ಲಿ ಬರುತ್ತದೆ. ಆದ್ದರಿಂದ ದತ್ತು ನೀಡುವ ಮುನ್ನ, ಪ್ರತಿ ನಾಯಿಗೂ ಕಡ್ಡಾಯವಾಗಿ ರೇಬಿಸ್ ವಿರೋಧಿ ಲಸಿಕೆ (ARV), ಅಗತ್ಯ ಆರೋಗ್ಯ ಲಸಿಕೆ, ಆರೋಗ್ಯ ತಪಾಸಣೆ ಹಾಗೂ ಗುರುತು ಪಟ್ಟಿಯನ್ನು ಸಹ ನೀಡಲಾಗುತ್ತದೆ.


Click it and Unblock the Notifications