ಸತತ ಪ್ರಯತ್ನ ಹಾಗೂ ಕಠಿಣ ಪಿರಶ್ರಮ ಪಟ್ಟರೆ ಏನನ್ನಾದ್ರೂ ಸಾಧಿಸ ಬಹುದು ಎಂಬುದಕ್ಕೆ ಹಲವರು ಉದಾಹರಣೆ ಆಗಿ ನಿಲ್ಲುತ್ತಾರೆ. ಇಂತಹ ಸಾಧಕರ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಸಾಧಕ ನೆರೆಯ ಆಂಧ್ರಾ ಮೂಲದ ಉದ್ಯಮಿ.
ಬಾಲ್ಯದಲ್ಲಿಸಾಧಕರಿಗೆ ಶಾಲೆಗೆ ಹೋಗಬೇಕೆಂದರೆ ಬಹಳ ದೂರ ಹೋಗಬೇಕಾಗಿತ್ತು. ಮನೆಯಲ್ಲಿ ಸಾಕಷ್ಟು ಬಡತನವಿತ್ತು. ತಂದೆಗೆ ಸೈಕಲ್ ಕೊಡಿಸಲು ಆಗಲಿಲ್ಲ. ಎಷ್ಟೇ ಸವಾಲುಗಳು ಎದುರಾದರೂ ಇವರು ಛಲ ಬಿಡಲಿಲ್ಲ. ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ. ಇದಾದ ನಂತರ ಹೋಮಿಯೋಪತಿಯಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಹೈದರಾಬಾದ್‌ಗೆ ಹೋದರು. ಅವರೇ ಜೂಪಲ್ಲಿ ರಾಮೇಶ್ವರ್ ರಾವ್..

ರಾವ್ ಅವರ ಜೀವನ ಹೈದರಾಬಾದ್‌ನಲ್ಲಿ ದೊಡ್ಡ ತಿರುವು ಪಡೆಯಿತು. ಆಗ ರಿಯಲ್ ಎಸ್ಟೇಟ್ ವ್ಯಾಪಾರ ಜೋರಾಗಿತ್ತು. ಕೇವಲ 50,000 ರೂ.ಗಳನ್ನು ಹೈದರಾಬಾದ್‌ನಲ್ಲಿರುವ ಜಮೀನಿನಲ್ಲಿ ಹೂಡಿಕೆ ಮಾಡಿದರು. ಆ ಒಂದು ನಿರ್ಧಾರ ಅವರ ಜೀವನದ ದಿಕ್ಕನ್ನೆ ಬದಲಿಸಿತು. ಇಲ್ಲಿಂದಲೇ ಇವರು ರಿಯಲ್ ಎಸ್ಟೇಟ್ ಉದ್ಯಮಿಯಾಗಲು ದಾರಿ ಮಾಡಿಕೊಟ್ಟಿತು.
ಜೂಪಲ್ಲಿ ರಾಮೇಶ್ವರ್ ರಾವ್ ಅವರು ಮಹಾ ಸಿಮೆಂಟ್ ಮತ್ತು ಮೈ ಹೋಮ್ ಕನ್ ಸ್ಟ್ರಕ್ಷನ್ ಕಂಪನಿಯ ಮಾಲೀಕರಾಗಿದ್ದಾರೆ. ಇವರು ಆಂಧ್ರಪ್ರದೇಶದ ಮಹಬೂಬ್‌ನಗರ ಜಿಲ್ಲೆಯ ಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಕೃಷಿಕರಾಗಿದ್ದರು. ಅವರು ತಮ್ಮ ಬಾಲ್ಯದಲ್ಲಿ ಅತ್ಯಂತ ಬಡತನ ಕಂಡ ಇವರು, ಇಂದು ದೇಶದ ಶ್ರೀಮಂತರಲ್ಲಿ ಒಬ್ಬರು.
ರಾವ್ ಅವರು ಹೋಮಿಯೋಪತಿ ಅಧ್ಯಯನವನ್ನು ಮುಗಿಸಿದ ನಂತರ ಹೈದರಾಬಾದ್‌ಗೆ ಬಂದು ಕ್ಲಿನಿಕ್ ತೆರೆದರು. ತನ್ನ ಹೋಮಿಯೋಪತಿ ಚಿಕಿತ್ಸಾಲಯದಿಂದ ಬರುವ ಆದಾಯದಿಂದ ತನ್ನ ಕನಸುಗಳನ್ನು ನನಸಾಗಿಸಲು ಸಾಧ್ಯವಿಲ್ಲ ಎಂದು ಅವರು ಅರಿತುಕೊಂಡರು. ಆದ್ದರಿಂದ ಅವರು ತಮ್ಮ ಕ್ಲಿನಿಕ್ ಅನ್ನು ತೊರೆದು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈ ಹಾಕಿದರು.

1981 ರಲ್ಲಿ, ರಾಮೇಶ್ವರ ರಾವ್ ಅವರು ರಿಯಲ್ ಎಸ್ಟೇಟ್ ಕಂಪನಿ ಮೈ ಹೋಮ್ ಕನ್‌ಸ್ಟ್ರಕ್ಷನ್ ಅನ್ನು ಸ್ಥಾಪಿಸಿದರು. ಇದು ಶೀಘ್ರವಾಗಿ ಹೈದರಾಬಾದ್ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿತು. ಅವರು ವಾಣಿಜ್ಯ ಕಟ್ಟಡಗಳನ್ನು ಯಶಸ್ವಿಯಾಗಿ ನಿರ್ಮಿಸಿದ್ದು, ಅವರ ಸ್ಥಾನವನ್ನು ಬಲಪಡಿಸಿತು. ಇದಲ್ಲದೇ ಸಿಮೆಂಟ್ ವ್ಯಾಪಾರಕ್ಕೆ ಕಾಲಿಟ್ಟರು. ಹಾಗೆ ಮಾಡುವ ಮೂಲಕ ಅವರು ಮಹಾ ಸಿಮೆಂಟ್‌ನ್ನು ಹುಟ್ಟು ಹಾಕಿದರು.
ಈಗ ಈ ಕಂಪನಿ 4,000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಇಂದು ಜುಪಲ್ಲಿ ರಾಮೇಶ್ವರ್ ರಾವ್ ಅವರ ನಿವ್ವಳ ಮೌಲ್ಯ 11,400 ಕೋಟಿ ರೂ.ಗಳಾಗಿದ್ದು, ಇದು ಅವರ ಪರಿಶ್ರಮ ಸಿಕ್ಕ ಪ್ರತಿಫಲವಾಗಿದೆ.


Click it and Unblock the Notifications