ಬೆಂಗಳೂರಿನ ಎಐ ಸ್ಟಾರ್ಟಪ್ ದಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ ಸುಚನಾ ಸೇಠ್ ಅವರ ವಿಚ್ಛೇದಿತ ಪತಿ ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ತನ್ನ ನಾಲ್ಕು ವರ್ಷದ ಮಗುವನ್ನು ಹತ್ಯೆಗೈದ ಆರೋಪ ಹೊತ್ತಿರುವ ಸಿಇಒ ಸುಚನಾ ಸೇಠ್ ಬಗ್ಗೆ ಕೆಲವು ಆಘಾತಕಾರಿ ವಿಷಯಗಳು ಹೊರಬಿದ್ದಿದೆ.
ತನಿಖೆಯ ಭಾಗವಾಗಿ ಶನಿವಾರ ಗೋವಾದ ಕ್ಯಾಲಂಗುಟ್ ಪೊಲೀಸರ ಮುಂದೆ ಸುಚನಾ ಪತಿ ಹಾಜರಾಗಿದ್ದಾರೆ. ಈ ನಡುವೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ 4 ವರ್ಷದ ಮಗನನ್ನು ಹತ್ಯೆಗೈದ ಆರೋಪ ಹೊತ್ತಿರುವ ಸೇಠ್ ಆತ್ಮಹತ್ಯೆ ಮಾಡುವ ಮೊದಲು ಮಗನನ್ನು ಕೊಂದಿದ್ದಾಳೆ.

ಮಗನನ್ನು ಉಸಿರುಗಟ್ಟಿಸಿ ಕೊಂದಿರುವ ಸುಚನಾ ನಂತರ ಮಗುವಿನ ಶವವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಬೆಂಗಳೂರಿಗೆ ಪರಾರಿಯಾಗಲು ಯತ್ನಿಸಿದ್ದಾಳೆ. ಈ ಸಂದರ್ಭದಲ್ಲಿ ಜನವರಿ 8 ರಂದು ರಾಜ್ಯದ ಚಿತ್ರದುರ್ಗದಲ್ಲಿ ಪೊಲೀಸರು ಸುಚನಾಳನ್ನು ಬಂಧಿಸಿದ್ದಾರೆ.
ಬಯಲಾಯ್ತು ಐದು ಆಘಾತಕಾರಿ ವಿಷಯ!
1. ಸುಚನಾ ಸೇಠ್ ಅವರ ವಿಚ್ಛೇದಿತ ಪತಿ ವೆಂಕಟ್ ರಾಮನ್ ಅವರ ವಕೀಲರು ಗೋವಾ ಪೊಲೀಸರಿಗೆ ಕಳೆದ ಐದು ಭಾನುವಾರಗಳಿಂದ ತಮ್ಮ ಮಗುವನ್ನು ಭೇಟಿಯಾಗಲು ಸುಚನಾ ತನ್ನ ಪತಿಗೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನದ ಪ್ರಕ್ರಿಯೆಗಳು ನಡೆಯುತ್ತಿವೆ ಮತ್ತು ನ್ಯಾಯಾಲಯವು ಭೇಟಿ ನೀಡುವ ಹಕ್ಕುಗಳನ್ನು ನೀಡಿದ್ದರೂ, ಸೇಠ್ ತಮ್ಮ ಮಗನನ್ನು ಭೇಟಿಯಾಗಲು ಬಿಟ್ಟಿಲ್ಲ ಎಂದು ರಾಮನ್ ಹೇಳಿದ್ದಾರೆ. ಸುಚನಾ ಸೇಠ್ ಮತ್ತು ವೆಂಕಟ್ ರಾಮನ್ 2010 ರಲ್ಲಿ ವಿವಾಹವಾಗಿದ್ದು ಮಗು 2018 ರಲ್ಲಿ ಜನಿಸಿದೆ.
2. ತಮ್ಮ ಮಗುವನ್ನು ಕೊಂದ ಆರೋಪ ಹೊತ್ತಿರುವ ಸುಚನಾ, ತನ್ನ ಪತಿ ರಾಮನ್ ಸೇಠ್ ಎದುರು ಬಂದಾಗ ಆತನ ಮೇಲೆಯೇ ಆರೋಪ ಹೊರಿಸಿದ್ದಾಳೆ. ಆಕೆಯ ಪರಿಸ್ಥಿತಿಗೆ ರಾಮನ್ ಕಾರಣ ಎಂದು ಸೇಠ್ ಹೇಳಿಕೊಂಡಿದ್ದಾಳೆ. ನಾನು ಪೊಲೀಸ್ ಕಸ್ಟಡಿಯಲ್ಲಿದ್ದೇನೆ, ಅವನು ಮಾತ್ರ ಆರಾಮವಾಗಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ರಾಮನ್ ಹೇಳಿಕೆ ದಾಖಲಿಸುವ ವೇಳೆ ಕಲಂಗುಟ್ ಪೊಲೀಸ್ ಠಾಣೆಯಲ್ಲಿ ಈ ಮಾತುಕತೆ ನಡೆದಿದೆ.
3. ತನ್ನ ಮಗನನ್ನು ಕರೆದುಕೊಂಡು ಹೋಗುವ ಹಿಂಸಾತ್ಮಾಕ ವ್ಯಕ್ತಿಯಂತೆ ನನ್ನನ್ನು ಸುಚನಾ ನೋಡುತ್ತಿದ್ದಳೆ ಎಂದು ರಾಮನ್ ಹೇಳಿಕೆಯಲ್ಲಿ ಬಹಿರಂಗಪಡಿಸಿದರು. 2023 ರಲ್ಲಿ ವಿಚ್ಛೇದನದ ಪ್ರಕ್ರಿಯೆ ಆರಂಭವಾಗಿದ್ದು, ನ್ಯಾಯಾಲಯವು ಆರಂಭದಲ್ಲಿ ರಾಮನ್‌ಗೆ ಮಗನೊಂದಿಗೆ ವೀಡಿಯೊ ಕರೆಗಳ ಮೂಲಕ ಮಾತ್ರ ಮಾತನಾಡಲು ಅವಕಾಶ ನೀಡಿತ್ತು. ಆದರೆ ಕ್ರಮೇಣ ಸೇಠ್ ವಿಡಿಯೋ ಕರೆ ಕೂಡಾ ಮಾಡಲು ಬಿಡುತ್ತಿರಲಿಲ್ಲ.
ಡಿಸೆಂಬರ್ 10, 2023 ರಂದು ರಾಮನ್ ಕೊನೆಯ ಬಾರಿಗೆ ತಮ್ಮ ಮಗನನ್ನು ಭೇಟಿಯಾಗಿದ್ದಾರೆ. ಜನವರಿ 7 ರಂದು, ತಮ್ಮ ಮಗನನ್ನು ಕರೆದುಕೊಂಡು ಹೋಗಲು ರಾಮನ್ ಕರೆದ ಸ್ಥಳಕ್ಕೆ ಹೋಗಿದ್ದರು, ಆದರೆ ಅದಾಗಲೇ ಸೇಠ್ ತನ್ನ ಮಗನೊಂದಿಗೆ ಗೋವಾಗೆ ತೆರಳಿದ್ದಳು. ರಾಮನ್ ಮೆಸೇಜ್, ಇಮೇಲ್ ಕಳುಹಿಸಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಮನ್ ವಕೀಲರು ಹೇಳಿದ್ದಾರೆ. ಅದೇ ದಿನ, ರಾಮನ್ ಜಕಾರ್ತಾಗೆ ತೆರಳಿದರು.
"ವಿಚ್ಛೇದನ ಪ್ರಕರಣ 2023 ರಲ್ಲಿ ಪ್ರಾರಂಭವಾಗಿದೆ. ಆರಂಭದಲ್ಲಿ ನ್ಯಾಯಾಲಯವು ರಾಮನ್‌ಗೆ ನ್ಯಾಯಾಲಯದಲ್ಲಿ ವೀಡಿಯೊ ಕರೆ ಮೂಲಕ ತನ್ನ ಮಗನೊಂದಿಗೆ ಮಾತನಾಡಲು ಅವಕಾಶ ನೀಡಿತು. ನವೆಂಬರ್ 20, 2023 ರಂದು, ನ್ಯಾಯಾಲಯವು ರಾಮನ್‌ಗೆ ವಾರಕ್ಕೊಮ್ಮೆ, ಭಾನುವಾರದಂದು ತನ್ನ ಮಗನನ್ನು ಭೇಟಿ ಮಾಡಲು ಅನುಮತಿ ನೀಡಿತು. ನ್ಯಾಯಾಲಯವು ರಾಮನ್ ಪರವಾಗಿ ತೀರ್ಪು ನೀಡುತ್ತಿದೆ ಎಂದು ಅವಳು ಭಾವಿಸಿದ್ದಳು," ಎಂದು ರಾಮನ್ ವಕೀಲರು ಹೇಳಿದರು.
4. ಸುಚನಾ ಬೆಂಗಳೂರಿನಿಂದ ಗೋವಾಕ್ಕೆ ಏಕಮುಖ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧದ ನಂತರ ರಸ್ತೆ ಮಾರ್ಗವಾಗಿ ಬರುವ ಎಲ್ಲ ಯೋಜನೆಯನ್ನು ಮೊದಲೇ ಮಾಡಿಕೊಂಡಿದ್ದರು. ಅಂದರೆ ಇದು ಪೂರ್ವ ಯೋಜಿತ ಕೃತ್ಯ ಎಂದು ಪೊಲೀಸರು ಹೇಳಿದ್ದಾರೆ.
5. ಸುಚನಾಳ ಮಗನ ದೇಹವಿದ್ದ ಸೂಟ್‌ಕೇಸ್‌ನೊಳಗೆ ಸೇಠ್‌ನ ಒಂದು ಚೀಟಿಯೂ ಸಿಕ್ಕಿದೆ. ಇದರಲ್ಲಿ ಸುಚನಾಳ ಮಾನಸಿಕ ಸ್ಥಿತಿ ಮತ್ತು ಕೊಲೆಗೆ ಸಂಭವನೀಯ ಉದ್ದೇಶದ ಬಗ್ಗೆ ಮಾಹಿತಿಯಿದೆ. ಇನ್ನು ಮುಂದೆ ತನ್ನಿಂದ ಸಹಿಸಲಾಗದು ಎಂದು ಉಲ್ಲೇಖಿಸಲಾಗಿದೆ. ತನ್ನ ಮಗನನ್ನು ತನ್ನ ವಶಕ್ಕೆ ನೀಡುವಂತೆ ನ್ಯಾಯಾಲಯ ಮತ್ತು ಆಕೆಯ ಪತಿಯಿಂದ ಒತ್ತಡ ಇರುವುದನ್ನು ಚೀಟಿಯಲ್ಲಿ ಬರೆಯಲಾಗಿದೆ. ಸೇಠ್ ತನ್ನ ಮಾಜಿ ಪತಿ ಹಿಂಸಾತ್ಮಾಕ ವ್ಯಕ್ತಿ ಮತ್ತು ತಮ್ಮ ಮಗನ ಮೇಲೆ ಕೆಟ್ಟ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದ್ದಾರೆ.


Click it and Unblock the Notifications