ಪ್ರಸ್ತುತ ಸ್ಥಳೀಯ ಮಾರುಕಟ್ಟೆಯಲ್ಲಿ ನಿಯಮಿತ ಪ್ರಮಾಣದಲ್ಲಿ ಸಕ್ಕರೆ ಲಭ್ಯತೆಯಿದೆ. ಇದರ ಪರಿಣಾಮವಾಗಿ ಕಳೆದ ಮೂರು ವಾರಗಳಿಂದ ನಿರಂತರವಾಗಿ ಸಕ್ಕರೆ ದರ ಏರಿಕೆಯಾಗುತ್ತಿದೆ. ಇನ್ನು ತಿಂಗಳುಗಳಲ್ಲೇ ಸಕ್ಕರೆ ಬೆಲೆಯು ಸಾರ್ವಕಾಲಿಕವಾಗಿ ಏರಿಕೆಯಾಗುವ ಸಾಧ್ಯತೆಯಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸಕ್ಕರೆ ಉತ್ಪಾದನೆ ಪ್ರಮಾಣದ ಅಂದಾಜನ್ನು ಕೂಡಾ ಕಡಿತಗೊಳಿಸಲಾಗಿದೆ. 2022-23ರ ವ್ಯವಸಾಯ ವರ್ಷಕ್ಕೆ (ಅಕ್ಟೋಬರ್-ಸೆಪ್ಟೆಂಬರ್) ಸಕ್ಕರೆ ಉತ್ಪಾದನೆ ಪ್ರಮಾಣ ಅಂದಾಜು ಕುಗ್ಗಿಸಲಾಗಿದೆ ಎಂದು ಅಖಿಲ ಭಾರತ ಸಕ್ಕರೆ ವಹಿವಾಟು ಸಂಸ್ಥೆಯು ಮಾಹಿತಿ ನೀಡಿದೆ.
"ಅಖಿಲ ಭಾರತ ಸಕ್ಕರೆ ವಹಿವಾಟು ಸಂಸ್ಥೆ (All India Sugar Trade Association) 2022-23ನೇ ವ್ಯವಸಾಯ ವರ್ಷದಲ್ಲಿನ ಸಕ್ಕರೆ ಉತ್ಪಾದನೆ ಅಂದಾಜನ್ನು ಕಡಿತಗೊಳಿಸಿದೆ. ಸಂಸ್ಥೆಯು ಸಕ್ಕರೆ ಉತ್ಪಾದನೆ ಪ್ರಮಾಣದ ಅಂದಾಜನ್ನು 34.5 ಮಿಲಿಯನ್ ಟನ್‌ನಿಂದ 33.5 ಮಿಲಿಯನ್ ಟನ್‌ಗೆ ಇಳಿಕೆ ಮಾಡಲಾಗಿದೆ," ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣವು ಹವಾಮಾನ ವೈಪರೀತ್ಯವಾಗಿದೆ ಎಂದು ಕೂಡಾ ಉಲ್ಲೇಖಿಸಿದ್ದಾರೆ.

"ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಾಗಿದೆ. ಈ ಹಿಂದೆ ಎಥೆನಾಲ್ ಉತ್ಪಾದನೆಗೆ ಬೇಕಾಗುವ ಸಕ್ಕರ ಸೇರಿದಂತೆ ಒಟ್ಟಾಗಿ 38.6 ಮಿಲಿಯನ್ ಟನ್ ಉತ್ಪಾದನೆಯ ಅಂದಾಜು ಮಾಡಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆ ಬಂದ ಬಳಿಕ ಸಕ್ಕರೆ ಉತ್ಪಾದನೆಯಲ್ಲಿ 200,000-300,000 ಟನ್‌ಗಳಷ್ಟು ಕಡಿತ ಉಂಟಾಗುವ ಸಾಧ್ಯತೆಯಿದೆ. ಒಪೆಕ್ ಅನಿರೀಕ್ಷಿತವಾಗಿ ಕಚ್ಚಾ ತೈಲ ಉತ್ಪಾದನೆ ಕಡಿತ ಮಾಡುವುದಾಗಿ ಇತ್ತೀಚೆಗೆ ಘೋಷಣೆ ಮಾಡಿದೆ. ಅದಾ ಬಳಿಕ ಈಗಾಗಲೇ ಎಥೆನಾಲ್ ಬೆಲೆಯು ಗಗನಕ್ಕೇರಿದೆ. ಈ ನಡುವೆ ಸಕ್ಕರೆ ಬೆಳೆಯನ್ನು ಜೈವಿಕ ಇಂಧನ ಮಿಶ್ರಣಕ್ಕೆ ಉಪಯೋಗಿಸಲಾಗುತ್ತಿದೆ.
ಇನ್ನು ಕಮೋಟಿಡಿ ಮಾರ್ಕೇಟ್‌ನಲ್ಲಿ ಕಚ್ಚಾ ಸಕ್ಕರೆ ಫ್ಯೂಚರ್ಸ್ ಏಪ್ರಿಲ್‌ನಲ್ಲಿ ಪ್ರತಿ ಪೌಂಡ್‌ಗೆ 23.5 ಡಾಲರ್‌ಗೆ ತಲುಪಿದೆ. ಈ ಬೆಲೆಯು ಅಕ್ಟೋಬರ್ 2016ರ ಬಳಿಕದ ಅತೀ ಗರಿಷ್ಠ ಬೆಲೆಯಾಗಿದೆ. ಬೇಡಿಕೆ ಹೆಚ್ಚಳ ಉತ್ಪಾದನೆ ಕೊರತೆಯಿಂದಾಗಿ ಈ ಬೆಲೆ ಏರಿಕೆ ಕಂಡು ಬಂದಿದೆ. ಕಳೆದ ಒಂದು ವರ್ಷದಲ್ಲಿ ಕಚ್ಚಾ ಸಕ್ಕರೆ ಬೆಲೆಯು ಸುಮಾರು ಶೇಕಡ 16ರಷ್ಟು ಏರಿಕೆ ಕಂಡಿದೆ. ಇನ್ನು ಕಳೆದ ಒಂದು ತಿಂಗಳಿನಲ್ಲಿಯೇ ಕಚ್ಚಾ ಸಕ್ಕರೆ ಬೆಲೆಯು ಶೇಕಡ 13.27ರಷ್ಟು ಹೆಚ್ಚಳವಾಗಿದೆ. ಈ ನಡುವೆ ಮುಂದಿನ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ದರ ಏರಿಕೆಯಾಗುವ ಸಾಧ್ಯತೆಯಿದೆ.
ಹಣದುಬ್ಬರದ ಮೇಲಿನ ಪ್ರಭಾವ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗರಿಷ್ಠ ಮಟ್ಟದ ಹಣದುಬ್ಬರದ ದರಕ್ಕಿಂತ ಅಧಿಕವಾಗಿ ಭಾರತದಲ್ಲಿ ಹಣದುಬ್ಬರ ದರವು ಇದೆ. ಈ ಹಣದುಬ್ಬರಿಂದಾಗಿ ಮುಂದಿನ ದಿನಗಳಲ್ಲಿ ಹಾಲು ಹಾಗೂ ಸಕ್ಕರೆ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯದಿಂದಾಗಿ ಉತ್ಪಾದನೆಯಲ್ಲಿ ಕಡಿತ ಉಂಟಾಗುವ ನಿರೀಕ್ಷೆಯಿದೆ. ಈ ಎಲ್ಲ ಬೆಳವಣಿಗೆಯ ನಡುವೆ ಕೇಂದ್ರ ಬ್ಯಾಂಕ್ ಈಗಾಗಲೇ ಏರಿಕೆ ಮಾಡಿರುವ ರೆಪೋ ದರವನ್ನು ಗರಿಷ್ಠ ಮಟ್ಟದಲ್ಲೇ ಉಳಿಸಿಕೊಳ್ಳುವಂತೆ ಮಾಡಲಿದೆ.
"ಭಾರತದಲ್ಲಿ ಸಕ್ಕರೆ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಮಹಾರಾಷ್ಟ್ರದಲ್ಲಿ ಮತ್ತು ಕರ್ನಾಟಕದಲ್ಲಿ ಹಿಂದೆಂದಿಗಿಂತಲೂ ಅತೀ ಶೀಘ್ರವಾಗಿಯೇ ಸಕ್ಕರೆ ಉತ್ಪಾದನಾ ಮಿಲ್‌ಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿಯೂ ಕೂಡಾ ಸಕ್ಕರೆ ಸರಬರಾಜಿಗೆ ಕೆಲವು ನಿರ್ಬಂಧಗಳು ಹೇರುವ ಸಾಧ್ಯತೆಯು ಕೂಡಾ ಇದೆ," ಎಂದು ಕೃಷಿ ವಹಿವಾಟು ನಡೆಸುವ ತಜ್ಞರು ಮಾಹಿತಿ ನೀಡಿದ್ದಾರೆ.
ಇನ್ನು ಈ ಹಿಂದೆ 2022ರಲ್ಲಿ ಕೇಂದ್ರ ಸರ್ಕಾರವು ಜೂನ್ 1 ರಿಂದ ಸಕ್ಕರೆ ರಫ್ತಿನ ಮೇಲೆ ನಿರ್ಬಂಧವನ್ನು ವಿಧಿಸಿ ಆದೇಶವನ್ನು ಹೊರಡಿಸಿದೆ. ಪ್ರಮುಖವಾಗಿ ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರವು ರಫ್ತಿನ ಮೇಲೆ ನಿರ್ಬಂಧವನ್ನು ವಿಧಿಸಿದೆ. ಇಂತಹ ಕ್ರಮವನ್ನು ಕೇಂದ್ರ ಸರ್ಕಾರ ಮತ್ತೆ ಕೈಗೊಳ್ಳಬಹುದು.


Click it and Unblock the Notifications