ನವದೆಹಲಿ, ಮಾರ್ಚ್ 15: ಗ್ಲೋಬಲ್ ಇಂಜಿನಿಯರಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ ಡಿಜಿಟಲ್ ಸೇವಾ ಸಂಸ್ಥೆ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್, ಸುಕನ್ಯಾ ಸದಾಶಿವನ್ ಅವರನ್ನು ತನ್ನ ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (COO) ನೇಮಕ ಮಾಡಿರುವುದಾಗಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
"ನೂತನ ಸಿಇಒ ಸುಕನ್ಯಾ ಸದಾಶಿವನ್ ಅವರು ತಮ್ಮ ಹೊಸ ಜವಬ್ದಾರಿಯ ಮೂಲಕ , ಟಾಟಾ ಟೆಕ್ನಾಲಜೀಸ್‌ನ ಬೆಳವಣಿಗೆ ಮತ್ತು ಅದರ ರೂಪಾಂತರದಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಾಥಮಿಕವಾಗಿ ಆಂತರಿಕ ಡಿಜಿಟಲ್ ಮತ್ತು ಐಟಿ ವ್ಯವಸ್ಥೆಗಳನ್ನು ಬಲಪಡಿಸುವುದರ ಬಗ್ಗೆ ಗಮನಹರಿಸುತ್ತಾರೆ" ಎಂದು ಟಾಟಾ ಟೆಕ್ನಾಲಜೀಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸುಕನ್ಯಾ ಅವರು ಟಾಟಾ ಟೆಕ್ನಾಲಜೀಸ್‌ಗೆ ಸೇವಾ ವಲಯದ ಬಗ್ಗೆ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿದ್ದು ಈ ಹಿಂದೆ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ (TCS) ವಿವಿಧ ಹಿರಿಯ ನಾಯಕತ್ವದ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದರು.ಟಾಟಾ ಟೆಕ್ನಾಲಜೀಸ್‌ಗೆ ಸೇರ್ಪಡೆಗೂ ಮುನ್ನ, ಸುಕನ್ಯಾ ಅವರು TCS ನಲ್ಲಿ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಮಾಹಿತಿ ಅಧಿಕಾರಿ ಹುದ್ದೆಯನ್ನು ನಿರ್ವಹಿಸುತ್ತಿದರು.
"ತಂತ್ರಜ್ಞಾನ ಮತ್ತು ಸೇವಾ ಉದ್ಯಮದಲ್ಲಿ ಸುಕನ್ಯಾ ಅವರ ಅಸಾಧಾರಣ ಜ್ಞಾನ ಮತ್ತು ಅನುಭವದ ಆಳವು ನಮ್ಮ ನಾಯಕತ್ವದ ತಂಡಕ್ಕೆ ಪ್ರಚಂಡ ಆಸ್ತಿಯಾಗಿದೆ. ಅವರ ಒಳನೋಟ ಮತ್ತು ಮಾರ್ಗದರ್ಶನವು ನಮ್ಮ ತಂಡದ ಬೆಳವಣಿಗೆಯ ಜೊತೆಗೆ ಮುಂದಿನ ಹಂತಕ್ಕೆ ಸಿದ್ಧವಾಗಲು ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ. ಎಂದು ಟಾಟಾ ಟೆಕ್ನಾಲಜೀಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾರೆನ್ ಹ್ಯಾರಿಸ್ ಹೇಳಿದ್ದಾರೆ.
ಹೊಸ ಸೇವಾ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಅವರು ಪ್ರಾಕ್ಟೀಸ್ ಟೀಮ್ ಜೊತೆ ಕೆಲಸ ಮಾಡುತ್ತಾರೆ. ಅಲ್ಲದೆ ವ್ಯವಹಾರಗಳಲ್ಲಿ ನಡೆಯುತ್ತಿರುವ ರೂಪಾಂತರವನ್ನು ವೇಗಗೊಳಿಸಲು ಡಿಜಿಟಲ್ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಡಿಜಿಟಲ್ ಇನ್ಫಾರ್ಮಶನ್ ಆಫೀಸ್ ಮಾರ್ಗದರ್ಶನ ನೀಡುತ್ತಾರೆ. ಪುಣೆಯಿಂದ ಹೊರಗಿರುವ ಅವರು ನೇರವಾಗಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾರೆನ್ ಹ್ಯಾರಿಸ್ ವಾರೆನ್ ಹ್ಯಾರಿಸ್‌ಗೆ ರಿಪೋರ್ಟ್ ಮಾಡುತ್ತಾರೆ. ಗ್ಲೋಬಲ್ ಡೆಲಿವರಿ, ಪ್ರಾಕ್ಟೀಸ್ ಸಂಸ್ಥೆ ಮತ್ತು ಡಿಜಿಟಲ್ ಮಾಹಿತಿ ಕಚೇರಿ ತಂಡಗಳು ಸುಕನ್ಯಾ ಅವರಿಗೆ ರಿಪೋರ್ಟ್ ಮಾಡುತ್ತದೆ.
ನೂತನ COO ಸುಕನ್ಯಾ ಸದಾಶಿವನ್ ಪ್ರತಿಕ್ರಿಸಿದ್ದು, " ಎಂಜಿನಿಯರಿಂಗ್ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಟಾಟಾ ಟೆಕ್ನಾಲಜೀಸ್‌ಗೆ ಸೇರ್ಪಡೆಗೊಂಡು ಕೊಡುಗೆ ನೀಡಲು ನನಗೆ ಒಂದು ರೋಮಾಂಚಕ ಅವಕಾಶ ದೊರಕಿದೆ. ಕಾರ್ಯಾಚರಣೆಯ ಉತ್ಕೃಷ್ಟತೆಯನ್ನು ಹೆಚ್ಚಿಸಲು, ಗ್ರಾಹಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಕಂಪನಿಯ ಕಾರ್ಯತಂತ್ರದ ಬೆಳವಣಿಗೆಯ ಉಪಕ್ರಮಗಳನ್ನು ಬೆಂಬಲಿಸಲು ನನ್ನ ಅನುಭವವನ್ನು ಬಳಸಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ಅಲ್ಲದೆ ಟಾಟಾ ಟೆಕ್ನಾಲಜೀಸ್‌ನ ಇಂಜಿನಿಯರಿಂಗ್ ಮತ್ತಷ್ಟು ಬೆಟರ್ ವರ್ಲ್ಡ್ ನ್ನು ಸಾಧಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ" ಎಂದು ಹೇಳಿದ್ದಾರೆ.


Click it and Unblock the Notifications