ಸನ್ ಫಾರ್ಮಾದಿಂದ ಕೊರೊನಾಗೆ 35 ರು.ಗೆ ಒಂದರಂತೆ ಮಾತ್ರೆ

ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಮಂಗಳವಾರ (ಆಗಸ್ಟ್ 4, 2020) ಫ್ಲೂ ಗಾರ್ಡ್ (Faviparavir 200 mg) ಘೋಷಣೆ ಮಾಡಿದೆ. ಇದು ಒಂದು ಮಾತ್ರೆಗೆ 35 ರುಪಾಯಿ ಆಗುತ್ತದೆ. ಸಣ್ಣ ಮಟ್ಟದಿಂದ ಮಧ್ಯಮ ಹಂತದ ತನಕ ಕೊರೊನಾ ಬಾಧೆಗೆ ಒಳಗಾದವರಿಗೆ ಭಾರತದಲ್ಲಿ ಚಿಕಿತ್ಸೆ ನೀಡಲು ಈ ಮಾತ್ರೆ ಬಳಸಬಹುದು.

Faviparavir ಮೂಲತಃ ಜಪಾನ್ ನ ಫ್ಯೂಜಿಫಿಲಂ ಹೋಲ್ಡಿಂಗ್ಸ್ ಕಾರ್ಪೊರೇಷನ್ ಅಭಿವೃದ್ಧಿಪಡಿಸಿದೆ. ಕೊರೊನಾ ವೈರಾಣು ಚಿಕಿತ್ಸೆಗಾಗಿ Avigan ಬ್ರ್ಯಾಂಡ್ ಹೆಸರಲ್ಲಿ ಇದರ ಬಳಕೆ ಮಾಡಲಾಗುತ್ತಿದೆ. ಸಣ್ಣ ಮಟ್ಟದಿಂದ ಮಧ್ಯಮ ಹಂತದ ತನಕ ಕೊರೊನಾ ಬಾಧೆಗೆ ತುತ್ತಾದವರಿಗೆ ಬಾಯಿ ಮೂಲಕ ನೀಡುವುದಕ್ಕೆ ಭಾರತದಲ್ಲಿ ಅನುಮತಿ ಸಿಕ್ಕಿರುವ ಏಕೈಕ ವೈರಾಣು ನಿರೋಧಕ Faviparavir.

ಸನ್ ಫಾರ್ಮಾದಿಂದ ಕೊರೊನಾಗೆ 35 ರು.ಗೆ ಒಂದರಂತೆ ಮಾತ್ರೆ

ಈ ವಾರದಿಂದ FluGuard ಮಾರ್ಕೆಟ್ ನಲ್ಲಿ ಖರೀದಿಗೆ ದೊರೆಯುತ್ತದೆ. ಕೈಗೆಟುಕುವ ಬೆಲೆಯಲ್ಲಿ ಈ ಮಾತ್ರೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ. ಸನ್ ಫಾರ್ಮಾ ಎಂಬುದು ವಿಶ್ವದಲ್ಲಿ ನಾಲ್ಕನೇ ಅತಿ ದೊಡ್ಡ ಸ್ಪೆಷಾಲಿಟಿ ಜೆನರಿಕ್ ಫಾರ್ಮಾಸ್ಯುಟಿಕಲ್ ಕಂಪೆನಿ ಮತ್ತು ಭಾರತ ಟಾಪ್ ಫಾರ್ಮಾ ಕಂಪೆನಿ.

ಗ್ಲೆನ್ ಮಾರ್ಕ್, ಸಿಪ್ಲಾ ಹಾಗೂ ಹೆಟೆರೋ ಲ್ಯಾಬ್ಸ್ ಕೂಡ Faviparavir ಅಭಿವೃದ್ಧಿ ಅಥವಾ ಮಾರಾಟ ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+