ಸೂಪರ್ ಸೀನಿಯರ್ ಸಿಟಿಜನ್ ಅಂದ್ರೆ 80 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು.ಇವರಿಗೆ ಆದಾಯ ತೆರಿಗೆ ಕಾಯ್ದೆ 1965ರ ಸೆಕ್ಷನ್ 194P ಅಡಿಯಲ್ಲಿ ಸೂಪರ್ ಸೀನಿಯರ್ ಸಿಟಿಜನ್ ಎಂದು ಪರಿಗಣಿಸಿದ್ದಾರೆ.ಇವರಿಗೆ ಕಷ್ಟಕ್ಕೆ ನೇರವಾಗಲು ಎಂದು ಹಲವಾರು ಬ್ಯಾಂಕ್‌ಗಳು ಹಾಗೂ ಅಂಚೆ ಕಚೇರಿಗಳು ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ.ಅದರಲ್ಲೂ ಕೆಲವು ಬ್ಯಾಂಕುಗಳು FD ಗಳ ಮೇಲಿನ ಬಡ್ಡಿದರದ ವಿಷಯದಲ್ಲಿ ಅವರಿಗೆ ಹೆಚ್ಚು ಪ್ರಯೋಜನಗಳನ್ನು ಒದಗಿಸುತ್ತವೆ.ಯಾವೆಲ್ಲಾ ಬ್ಯಾಂಕ್‌ಗಳಲ್ಲಿ ಇವರಿಗೆ ಎಷ್ಟು ಬಡ್ಡಿ ದರಗಳನ್ನು ನೀಡುತ್ತೀವೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು,ಸೂಪರ್ ಹಿರಿಯ ನಾಗರಿಕರಿಗೆ SBI, RBL ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್‌ಗಳಿಂದ FD ಗಳ ಮೇಲಿನ ಹೆಚ್ಚಿನ ದರಗಳನ್ನು ನೀಡುತ್ತವೆ.ಸೂಪರ್ ಹಿರಿಯ ನಾಗರಿಕರಿಗೆ FD ಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ಒದಗಿಸುವ ಉನ್ನತ ಭಾರತೀಯ ಬ್ಯಾಂಕ್‌ಗಳ ಪಟ್ಟಿಗಳ ವಿವರ ಈ ಕೆಳಗಿನಂತೆ ಇದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಎಸ್‌ಬಿಐ ಪ್ಯಾಟ್ರನ್ಸ್ ಎಫ್‌ಡಿ ಯೋಜನೆಯನ್ನು ಸೂಪರ್ ಸೀನಿಯರ್ಸ್ ನಾಗರಿಕರಿಗಾಗಿ ಮಾತ್ರ (80 ವರ್ಷ ಮೇಲ್ಪಟ್ಟವರು) ಪ್ರಾರಂಭಿಸಲಾಗಿದೆ.ಹಿರಿಯ ನಾಗರಿಕರಿಗೆ ನೀಡುವ ಬಡ್ಡಿ ದರಗಳಿಗಿಂತ 10 ಬೇಸಿಸ್ ಪಾಯಿಂಟ್‌ಗಳು (bps) ಹೆಚ್ಚಾಗಿ ನೀಡುತ್ತದೆ. 2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಯ ಸೂಪರ್ ಸೀನಿಯರ್ ಸಿಟಿಜನ್ FD ಗಳಿಗೆ ಶೇ.7.60ರಷ್ಟು ಬಡ್ಡಿದರವನ್ನು ನೀಡುತ್ತದೆ.
ಎಸ್‌ಬಿಐ ವೆಬ್‌ಸೈಟ್ ಪ್ರಕಾರ,ಎಸ್‌ಬಿಐ ಪ್ಯಾಟ್ರನ್ಸ್' ಯೋಜನೆಯಡಿಯಲ್ಲಿ ಸೂಪರ್ ಹಿರಿಯ ನಾಗರಿಕರಿಗೆ ಹಿರಿಯ ನಾಗರಿಕರಿಗೆ ಅನ್ವಯವಾಗುವ ಕಾರ್ಡ್ ದರಗಳಿಗಿಂತ 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿನ ಬಡ್ಡಿದರವನ್ನು ನೀಡಲಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಿಎನ್‌ಬಿ ಸೂಪರ್ ಹಿರಿಯ ನಾಗರಿಕರಿಗೆ 400 ದಿನಗಳ ಅವಧಿಗೆ ಶೇ.8.10ರಷ್ಟು ಬಡ್ಡಿದರವನ್ನು ನೀಡುತ್ತದೆ.
ಪಿಎನ್‌ಬಿ ವೆಬ್‌ಸೈಟ್ ಪ್ರಕಾರ 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಹಿರಿಯ ನಾಗರಿಕರು ಎಲ್ಲಾ ಮೆಚ್ಯೂರಿಟಿ ಬಕೆಟ್‌ಗಳಲ್ಲಿ ಅನ್ವಯವಾಗುವ ಕಾರ್ಡ್ ದರಕ್ಕಿಂತ 80 ಬೇಸಿಸ್ ಪಾಯಿಂಟ್‌ಗಳ ಹೆಚ್ಚುವರಿ ಬಡ್ಡಿದರಗಳನ್ನು ನೀಡುತ್ತದೆ.
ಆರ್‌ಬಿಎಲ್ ಬ್ಯಾಂಕ್
ಸೂಪರ್ ಸೀನಿಯರ್ ಸಿಟಿಜನ್ ಎಫ್‌ಡಿಗಳಿಗೆ 500 ದಿನಗಳ ಅವಧಿಗೆ ಶೇ.8.75 ಬಡ್ಡಿದರವನ್ನು ನೀಡುತ್ತದೆ.
ಆರ್‌ಬಿಎಲ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಹಿರಿಯ ನಾಗರಿಕರು (60 ವರ್ಷದಿಂದ 80 ವರ್ಷಕ್ಕಿಂತ ಕಡಿಮೆ) ವಾರ್ಷಿಕವಾಗಿ ಶೇ.0.50 ಹೆಚ್ಚುವರಿ ಬಡ್ಡಿದರಕ್ಕೆ ಅರ್ಹರಾಗಿರುತ್ತಾರೆ ಮತ್ತು ಸೂಪರ್ ಹಿರಿಯ ನಾಗರಿಕರು (80 ವರ್ಷ ಮತ್ತು ಮೇಲ್ಪಟ್ಟವರು) ವಾರ್ಷಿಕವಾಗಿ ಶೇ.0.75 ಹೆಚ್ಚುವರಿ ಬಡ್ಡಿದರಕ್ಕೆ ಅರ್ಹರಾಗಿರುತ್ತಾರೆ. ಹಿರಿಯ ನಾಗರಿಕರು/ಸೂಪರ್ ಹಿರಿಯ ನಾಗರಿಕರ ದರಗಳು ಅನಿವಾಸಿ ಸ್ಥಿರ ಠೇವಣಿಗಳಿಗೆ (ಎನ್‌ಆರ್‌ಇ/ಎನ್‌ಆರ್‌ಒ) ಅನ್ವಯಿಸುವುದಿಲ್ಲ.
ಇಂಡಿಯನ್ ಬ್ಯಾಂಕ್
ವಿಶೇಷ ಸ್ಥಿರ ಠೇವಣಿಯ ಮೇಲೆ ಇಂಡ್ ಸೂಪರ್ ಮೇಲೆ ಅತ್ಯಧಿಕ ಬಡ್ಡಿದರವನ್ನು ನೀಡಲಾಗುತ್ತದೆ ಇದು 400 ದಿನಗಳ ಅವಧಿಗೆ ಶೇ.8.05 ಬಡ್ಡಿಯನ್ನು ನೀಡುತ್ತದೆ.
ಇಂಡಿಯನ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಸೂಪರ್ ಸೀನಿಯರ್ ಸಿಟಿಜನ್‌ಗಾಗಿ ವಿಶೇಷ ಅವಧಿ ಠೇವಣಿ ಖಾತೆ (80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ) ಎಲ್ಲಾ ಠೇವಣಿ ಬಕೆಟ್‌ಗಳಿಗೆ ಸಾಮಾನ್ಯ ಹಿರಿಯ ನಾಗರಿಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಹೆಚ್ಚುವರಿ ದರಕ್ಕಿಂತ ಶೇ.0.25 ಹೆಚ್ಚಿನ ಬಡ್ಡಿದರವನ್ನು ನೀಡುತ್ತಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಹಿರಿಯ ನಾಗರಿಕರಿಗೆ ಅನ್ವಯವಾಗುವ ಹೆಚ್ಚುವರಿ ದರ ಶೇ 0.75ರಷ್ಟು ಆಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವೆಬ್‌ಸೈಟ್ ಪ್ರಕಾರ ಸೂಪರ್ ಹಿರಿಯ ನಾಗರಿಕರಿಗೆ ಅನ್ವಯವಾಗುವ ಹೆಚ್ಚುವರಿ ದರ ಅಂಶವು ಮೇಲೆ ಸಾಮಾನ್ಯ ದರಕ್ಕಿಂತ ಶೇ.0.75 ಹೆಚ್ಚಾಗಿದೆ (ನಿವಾಸಿ ಹಿರಿಯ ನಾಗರಿಕರಿಗೆ ಅನ್ವಯವಾಗುವ ದರಕ್ಕಿಂತ ಶೇ.0.25). ಅತಿ ಹಿರಿಯ ಅವಧಿ ಠೇವಣಿಗಳ ಮೇಲಿನ ಹೆಚ್ಚುವರಿ ದರವು 01.12.2022 ರಂದು ಅಥವಾ ನಂತರ ತೆರೆಯಲಾದ/ನವೀಕರಿಸಿದ ಅವಧಿ ಠೇವಣಿಗಳಿಗೆ ಅನ್ವಯವಾಗುತ್ತದೆ.
ಹಿರಿಯ ನಾಗರಿಕರಿಗೆಂದೇ ವಿಶೇಷ ಎಫ್‌ಡಿ ಯೋಜನೆಗಳು ಹಲವಾರು ಬ್ಯಾಂಕ್‌ನಲ್ಲಿ ಇವೆ. ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯ ಗಳಿಸಬಹುದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications