Adani shares fall: ಹಿಂಡನ್‌ಬರ್ಗ್ ಪ್ರಕರಣ ವಿಚಾರಣೆ ಮುಂದೂಡಿದ ಸುಪ್ರೀಂ, ಅದಾನಿ ಷೇರು ಕುಸಿತ

ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇನ್ನೂ 10 ದಿನಗಳವರೆಗೆ ಮುಂದೂಡಿದೆ. ಇದಾದ ಬಳಿಕ ಶುಕ್ರವಾರ ಅದಾನಿ ಗ್ರೂಪ್ ಷೇರುಗಳ ಬೆಲೆ ಮಿಶ್ರಿತವಾಗಿ ವಹಿವಾಟು ನಡೆಸುತ್ತಿದೆ. ಅಕ್ಟೋಬರ್ 30, 2023, ಸೋಮವಾರದಂದು ಸುಪ್ರೀಂ ಕೋರ್ಟ್ ಈ ವಿಷಯವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ಅದಾನಿ - ಹಿಂಡನ್‌ಬರ್ಗ್ ವಿವಾದದಲ್ಲಿ ಸೆಬಿಯ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಳ್ಳಬೇಕಿತ್ತು. ಇದು ಯುಎಸ್‌ ಮೂಲದ ಹಿಂಡನ್‌ಬರ್ಗ್ ಗೌತಮ್ ಅದಾನಿ ನೇತೃತ್ವದ ಅದಾನಿ ಸಂಸ್ಥೆಗಳು ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂಬ ಆರೋಪವಾಗಿದೆ. ಈ ಪ್ರಕರಣಕ್ಕೆ ಸಂಬಂಧಿತ ತನಿಖಾ ವರದಿ ಇದಾಗಿದೆ.

 ಹಿಂಡನ್‌ಬರ್ಗ್ ಪ್ರಕರಣ ವಿಚಾರಣೆ ಮುಂದೂಡಿದ, ಅದಾನಿ ಷೇರು ಕುಸಿತ

ಜನವರಿ 24, 2023 ರಂದು, ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗುಂಪಿನ ವಿರುದ್ಧ ಸ್ಟಾಕ್ ಮ್ಯಾನಿಪುಲೇಷನ್ ಮತ್ತು ಅಕೌಂಟಿಂಗ್ ವಂಚನೆ ಆರೋಪಗಳನ್ನು ಮಾಡಿದೆ. ಈಗ ಈ ಪ್ರಕರಣ ವಿಚಾರಣೆ ಮುಂದೂಡಿದ ಬಳಿಕ, ಅದಾನಿ ಗ್ರೂಪ್‌ನ ಸ್ಟಾಕ್‌ಗಳು ಕೆಲವು ಇಳಿದರೆ, ಕೆಲವು ಏರಿಕೆಯಾಗಿದೆ.

ಅದಾನಿ ಸ್ಟಾಕ್ ಹೇಗಿದೆ?

ಅಕ್ಟೋಬರ್ 20 ರಂದು ಈ ಸಮಯಕ್ಕೆ ಅದಾನಿ ಗ್ರೂಪ್‌ನ ಅದಾನಿ ಎಂಟರ್‌ಪ್ರೈಸಸ್ ಶೇಕಡ 0.30 ರಷ್ಟು ಕುಸಿತ ಕಂಡಿದೆ, ಅದಾನಿ ಪೋರ್ಟ್ಸ್ ಶೇಕಡ 0.069 ನಷ್ಟು ಇಳಿಕೆಯಾಗಿದೆ. ಅದಾನಿ ಟೋಟಲ್ ಗ್ಯಾಸ್ ಸುಮಾರು ಶೇಕಡ 0.33 ರಷ್ಟು ಕುಗ್ಗಿದೆ. ಆದರೆ ಈ ನಡುವೆ ಅದಾನಿ ಗ್ರೀನ್‌ ಶೇಕಡ 1.56 ರಷ್ಟು ಇಳಿಕೆಯನ್ನು ಕಂಡಿದೆ. ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇಕಡ 0.44 ರಷ್ಟು ಏರಿಕೆಯಾಗಿದೆ.

ಈ ನಡುವೆ ಅದಾನಿ ವಿಲ್ಮಾರ್ ಷೇರುಗಳು ಶೇಕಡ 0.89 ನಷ್ಟು ಕುಸಿದಿದೆ. ಅದಾನಿ ಗ್ರೂಪ್‌ನ ಸಿಮೆಂಟ್ ಸ್ಟಾಕ್ ಅಂಬುಜಾ ಸಿಮೆಂಟ್ಸ್ ಸಹ ಶೇಕಡ 1.70 ನಷ್ಟು ಇಳಿಕೆಯಾಗಿದೆ. ಈ ನಡುವೆ ಅದಾನಿ ಸಂಸ್ಥೆಯ ಇನ್ನೊಂದು ಸಿಮೆಂಟ್ ಸ್ಟಾಕ್ ಆದ ಎಸಿಸಿ ಶೇಕಡ 3.29 ರಷ್ಟು ಕುಸಿತಗೊಂಡಿದೆ. ಸಂಸ್ಥೆಯ ಮಾಧ್ಯಮ ಸ್ಟಾಕ್ ಆದ ಎನ್‌ಡಿಟಿವಿ ಶೇಕಡ 0.38ರಷ್ಟು ಇಳಿದಿದೆ. ಅದಾನಿ ಪವರ್ ಶೇಕಡ 2.02 ರಷ್ಟು ನಷ್ಟ ಕಂಡಿದೆ.

ಗಮನಾರ್ಹವಾಗಿ, ಅದಾನಿ ಸಮೂಹದ ಷೇರುಗಳು ಹೂಡಿಕೆದಾರರ ಗಮನದಲ್ಲಿ ಉಳಿಯಲು ಮತ್ತೊಂದು ಕಾರಣವೆಂದರೆ ಮಾಧ್ಯಮ ವರದಿಯು ಗೌತಮ್ ಅದಾನಿ ನೇತೃತ್ವದ ಭಾರತೀಯ ಸಂಘಟಿತ ಸಂಸ್ಥೆಯು ಎಸಿಸಿ ಲಿಮಿಟೆಡ್ ಮತ್ತು ಅಂಬುಜಾ ಸಿಮೆಂಟ್ಸ್ ಲಿಮಿಟೆಡ್‌ನ ಸ್ವಾಧೀನಕ್ಕೆ ಸಂಬಂಧಿಸಿದಂತೆ 3.5 ಬಿಲಿಯನ್ ಡಾಲರ್ ಸಾಲಗಳನ್ನು ಮರುಹಣಕಾಸು ಮಾಡುವ ಬಗ್ಗೆ ನಿರ್ಣಾಯಕ ಒಪ್ಪಂದವನ್ನು ಮಾಡಿಕೊಳ್ಳಲು ನೋಡುತ್ತಿದೆ ಎಂಬ ವರದಿಯಾಗಿದೆ.

ಆರೋಪ ನಿರಾಕರಿಸಿದ ಅದಾನಿ ಗ್ರೂಪ್

ಅದಾನಿ ಗ್ರೂಪ್ ಮಾರುಕಟ್ಟೆಯಲ್ಲಿ ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದೆ, ಮೋಸದ ವಹಿವಾಟುಗಳನ್ನು ನಡೆಸಿದೆ ಮತ್ತು ಇತರ ಹಣಕಾಸಿನ ವಂಚನೆಗಳನ್ನು ಮಾಡಿದೆ ಎಂದು ಆರೋಪಿಸಿ ಜನವರಿ ತಿಂಗಳಿನಲ್ಲಿ ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಮಾಡಿದೆ. ಆದರೆ ಗೌತಮ್ ಅದಾನಿ ಮಾತ್ರ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+