For Quick Alerts
ALLOW NOTIFICATIONS  
For Daily Alerts

ಸರ್ಕಾರಿ, ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ಉಚಿತ ಪರೀಕ್ಷೆಗೆ 'ಸುಪ್ರೀಂ' ಸೂಚನೆ

|

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಾಣು ಪರೀಕ್ಷೆ ಉಚಿತವಾಗಿ ಮಾಡಬೇಕು ಎಂದು ಭಾರತದ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಆದೇಶ ನೀಡಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಸರ್ಕಾರಿ ಹಾಗೂ ಖಾಸಗಿ ಲ್ಯಾಬ್ ನಲ್ಲಿ ಉಚಿತ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದಿದೆ.

ಆದಾಯ ತೆರಿಗೆ, ಜಿಎಸ್ ಟಿ, ಕಸ್ಟಮ್ಸ್ ರೀಫಂಡ್ ಗೆ ಮುಂದಾದ ಐಟಿ ಇಲಾಖೆಆದಾಯ ತೆರಿಗೆ, ಜಿಎಸ್ ಟಿ, ಕಸ್ಟಮ್ಸ್ ರೀಫಂಡ್ ಗೆ ಮುಂದಾದ ಐಟಿ ಇಲಾಖೆ

COVID- 19ಗೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗಳನ್ನು ಮಾನ್ಯತೆ ಪಡೆದ ಸರ್ಕಾರದ ಪ್ರಯೋಗಾಲಯಗಳಲ್ಲಿ ಅಥವಾ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಮಾಡಬೇಕು. ಈ ಸಂಬಂಧವಾಗಿ ಅಗತ್ಯ ನಿರ್ದೇಶನವನ್ನು ಕೇಂದ್ರ ಸರ್ಕಾರವು ತಕ್ಷಣವೇ ನೀಡಬೇಕು ಎಂದು ಸೂಚಿಸಿದೆ ಸುಪ್ರೀಂ ಕೋರ್ಟ್.

ಸರ್ಕಾರಿ, ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ಉಚಿತ ಪರೀಕ್ಷೆ: 'ಸುಪ್ರೀಂ'

ಜಾಗತಿಕವಾಗಿ ಕೊರೊನಾ ಸೋಂಕಿತರ ಸಂಖ್ಯೆ ಹದಿನಾಲ್ಕು ಲಕ್ಷ ದಾಟಿದೆ. ಸಾವಿನ ಸಂಖ್ಯೆ ಎಂಬತ್ಮೂರು ಸಾವಿರ ದಾಟಿದೆ. ಇನ್ನು ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಐದು ಸಾವಿರ ನಾನೂರಕ್ಕೂ ಹೆಚ್ಚು ಪ್ರಕರಣ ಹಾಗೂ ಸಾವಿನ ಸಂಖ್ಯೆ ನೂರಾ ಅರವತ್ತು ದಾಟಿದೆ. ಇನ್ನು ದೇಶಾದ್ಯಂತ ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

English summary

Supreme Court Directs To Free Corona Test In Government, Private Labs

Supreme Court Wednesday directed union government to issue order for free Corona test in government and private labs.
Story first published: Wednesday, April 8, 2020, 19:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X