ಹೆಸರಾಂತ ಇ-ಕಾಮರ್ಸ್ ಫ್ಲಾಟ್ಫಾರ್ಮ್ಗಳಾದ ಅಮೆಜಾನ್ ( Amazon, Flipkart) ಮತ್ತು ಫ್ಲಿಪ್ಕಾರ್ಟ್ಗೆ(Flipkart)ಸಂಕಷ್ಟ ಶುರುವಾಗಿದೆ. ಹೌದು, ಅಮೆಜಾನ್, ಫ್ಲಿಪ್ಕಾರ್ಟ್ ಅವ್ಯವಹಾರಗಳ ಕುರಿತು ಸಿಸಿಐ ನಡೆಸುತ್ತಿರುವ ತನಿಖೆಗೆ ಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಕರ್ನಾಟಕದ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದೆ
ನ್ಯಾಯಾಲಯದ ಮುಂದೆ ಇಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಪೀಠದ ಮುಂದೆ ಈ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಲಾಗಿತು. ನ್ಯಾಯೋಚಿತ ವ್ಯಾಪಾರ ನಿಯಂತ್ರಕ ಸಂಸ್ಥೆಯಾದ ಸಿಸಿಐ ತನ್ನ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿರುದ್ಧ ವಾದವನ್ನು ಮಂಡಿಸಿದ್ದರು.

ಅಮೆಜಾನ್, ಫ್ಲಿಪ್ಕಾರ್ಟ್ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಎಲ್ಲ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ವರ್ಗಾಯಿಸಲಾಗುವುದು. ಒಂದು ವೇಳೆ ಯಾವುದೇ ವರ್ಗವಾದ ಅರ್ಜಿಗಳು ಇತ್ಯರ್ಥವಾಗದೇ ಹೋದಲ್ಲಿ,ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಹೆಚ್ಚಿನ ಸಮಯ ಪಡೆದು ಪ್ರಕರಣವನ್ನು ಕೂಡಲೇ ಮುಗಿಸಬೇಕು ಎಂದು ಸಲಹೆಯನ್ನು ನೀಡಲಾಗಿದೆ.
ಸಿಸಿಐ ಸುಪ್ರೀಂ ಕೋರ್ಟ್‌ಗೆ ತೆರಳಿದ ನಂತರ ಈ ವಿಷಯದ ಕುರಿತು ಇನ್ನೂ ಐದು ಅರ್ಜಿಗಳನ್ನು ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿದೆ ಎಂದು ತಿಳಿಸಿದಾಗ ನ್ಯಾಯಮೂರ್ತಿಗಳಾದ ಎಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಅವರನ್ನೂ ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲು ಸೂಚನೆಯನ್ನು ನೀಡಿತು.
ಇನ್ನೂ ಕರ್ನಾಟಕ ಹೈಕೋರ್ಟ್ ಸೇರಿದಂತೆ ಯಾವುದೇ ಹೈಕೋರ್ಟ್‌ಗಳಲ್ಲಿ ಇಂತಹ ಪ್ರಕರಣಗಳು ಬಾಕಿ ಇದ್ದಲ್ಲಿ ಆ ಕೋರ್ಟ್ಗಳು ನೀಡುವ ಆದೇಶಗಳು ಅಂತಿಮವಾಗಿರುತ್ತವೆ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಈ ಹಿಂದೆ ಎರಡು ಡಜನ್‌ಗೂ ಹೆಚ್ಚು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ಏಕ ನ್ಯಾಯಾಧೀಶ ಪೀಠಕ್ಕೆ ವರ್ಗಾಯಿಸಲು ಸಿಸಿಐನಿಂದ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಅಟಾರ್ನಿ ಜನರಲ್ಗೆ ಸೂಚಿಸಿತ್ತು.ಇದಕ್ಕೆ ಸಂಬಂಧಿಸಿದಂತೆ ಸಿಸಿಐ ತನ್ನ ನಿರ್ಧಾರವನ್ನು ಕೂಡ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಇ - ಕಾಮರ್ಸ್ ಪ್ಲಾಟ್ಫಾರ್ಮ್ಗಳು ತಮ್ಮ ವಿರುದ್ಧ ನಡೆಸಲಾಗುತ್ತಿರುವ ತನಿಖೆ ರದ್ದು ಮಾಡಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ವಿಚಾರಣೆಯ ವೇಳೆ ಸಿಸಿಐ ತನಿಖೆಯನ್ನು ಎತ್ತಿಹಿಡಿದ ಕೋರ್ಟ್, ಅರ್ಜಿಗಳನ್ನು ವಜಾಗೊಳಿಸಿತ್ತು. ಸಿಸಿಬಿ ವಿರುದ್ಧ ತನಿಖೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ರಿಟ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತು.
ಪ್ರಕರಣ ಏನು?
ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಸ್ಮಾರ್ಟ್ಫೋನ್ಗಳು ಮತ್ತು ಇತರ ವಸ್ತುಗಳ ವ್ಯವಹಾರದಲ್ಲಿ ಕೆಲವರ ಜೊತೆ ಕೈಜೋಡಿಸಿವೆ ಎಂಬ ಆರೋಪವಿದೆ. ಆದರೆ ಮಾರಾಟವು ನ್ಯಾಯ ಸಮ್ಮತವಾಗಿಲ್ಲ.ಭಾರತದ ಸ್ಪರ್ಧಾತ್ಮಕ ಕಾನೂನುಗಳನ್ನು ಉಲ್ಲಂಘಿಸಿವೆ ಎಂದು ದೆಹಲಿಯ ಸಣ್ಣ ಮತ್ತು ಮಧ್ಯಮ ವ್ಯಾಪಾರ ಮಾಲೀಕರನ್ನು ಪ್ರತಿನಿಧಿಸುವ ವ್ಯಾಪಾರ್ ಮಹಾಸಂಘ (ಡಿವಿಎಂ)ಎರಡು ಅತಿದೊಡ್ಡ ಇ-ಕಾಮರ್ಸ್ ಕಂಪನಿಗಳ ವಿರುದ್ಧ ಸಿಸಿಐಗೆ ದೂರು ನೀಡಿತ್ತು. ಇದಕ್ಕೆ ಸಿಸಿಐ ಎರಡು ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿತ್ತು.ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಕಂಪನಿಗಳು ಉದ್ಯಮ ನಡೆಸುವ ರೀತಿ ಸರಿಯಿಲ್ಲ ಎಂದು ಹೇಳಿದೆ. ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ತಮ್ಮ ಫ್ಲಾಟ್ಫಾರ್ಮ್ನಲ್ಲಿ ನೀಡಲಾದ ಹೆಚ್ಚಿನ ರಿಯಾಯಿತಿಗಳು ಕೆಲವರ ಕೈ ಸೇರುವಂತೆ ಮಾಡಲಾಗಿದೆ ಎಂದು ಆರೋಪವಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications