SC Verdict on Demonetisation: ನೋಟು ಅಪನಗದೀಕರಣ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ

ನೋಟು ಅಪನಗದೀಕರಣ ನಡೆದು ಸುಮಾರು 6 ವರ್ಷಗಳು ಕಳೆದಿದೆ. 2016ರಲ್ಲಿ ಕೇಂದ್ರ ಸರ್ಕಾರವು ದಿಡೀರ್ ಆಗಿ 1000 ರೂಪಾಯಿ ಹಾಗೂ 500 ರೂಪಾಯಿಯ ನೋಟನ್ನು ಬ್ಯಾನ್ ಮಾಡಿದೆ. ಈ ಅಪನಗದೀಕರಣ ಸಂಬಂಧಿಸಿದ ಎರಡು ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಜನವರಿ 2, 2023ರಂದು ನೀಡಿದ್ದು ನೋಟು ಬ್ಯಾನ್ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.

ಕೇಂದ್ರ ಸರ್ಕಾರವು ನೋಟನ್ನು ಅಪನಗದೀಕರಣ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿಯ್ನನು ಸಲ್ಲಿಸಲಾಗಿದೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ತೀರ್ಪನ್ನು ನ್ಯಾಯಾಂಗದ ಚಳಿಗಾಲದ ರಜೆ ಅವಧಿ ಮುಗಿದ ಮೊದಲ ದಿನವೇ ಪ್ರಕಟ ಮಾಡಿದೆ.

4-1 ಬಹುಮತದ ಆಧಾರದಲ್ಲಿ ಸುಪ್ರೀಂ ಕೋರ್ಟ್ 2016ರ ಅಪನಗದೀಕರಣವ ಅನುಮೋದನೆ ಮಾಡಿದೆ. ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿಆರ್ ಗವಾಯ್, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಪೀಠ ಈ ತೀರ್ಪನ್ನು ನೀಡಿದೆ. ಐವರ ಪೈಕಿ ನ್ಯಾಯಮೂರ್ತಿ ಬಿವಿ ನಾಗರತ್ನ ಈ ತೀರ್ಪಿಗೆ ವಿರೋಧವಾಗಿದ್ದಾರೆ.

Demonetisation: ನೋಟು ಅಪನಗದೀಕರಣ ಎತ್ತಿ ಹಿಡಿದ ಸುಪ್ರೀಂ

ಈ ನೋಟು ಅಪನಗದೀಕರಣದ ವಿರುದ್ಧವಾಗಿ ಸುಮಾರು 58 ಅರ್ಜಿಗಳು ಸಲ್ಲಿಸಲಾಗಿದೆ. ಈ ಅರ್ಜಿಗಳಲ್ಲಿ ಹೆಚ್ಚಿನವುಗಳು ಅಪನಗದೀಕರಣದ ಸಿಂಧುತ್ವವನ್ನು ಪ್ರಶ್ನೆ ಮಾಡಿರುವ ಅರ್ಜಿಗಳಾಗಿದೆ. ಇನ್ನು ಕೆಲವು ನೋಟು ಬದಲಾವಣೆ ದಿನವನ್ನು ವಿಸ್ತರಣೆ ಮಾಡುವುದಕ್ಕೆ ಸಂಬಂಧಿಸಿದೆ.

ನೋಟು ಬದಲಾವಣೆ ದಿನ ವಿಸ್ತರಣೆ ಮಾಡಲಾಗದು

1000 ರೂಪಾಯಿ ಹಾಗೂ 500 ರೂಪಾಯಿಯ ನೋಟನ್ನು ಬ್ಯಾನ್ ಮಾಡಿದ ಬಳಿಕ ನೋಟು ಬದಲಾವಣೆ ಮಾಡಿಕೊಳ್ಳಲು ಸುಮಾರು 52 ದಿನಗಳ ಗಡುವನ್ನು ನೀಡಲಾಗಿತ್ತು. ಈ ದಿನವನ್ನು ಮತ್ತೆ ವಿಸ್ತರಣೆ ಮಾಡಲಾಗದು ಎಂದು ಕೂಡಾ ಸುಪ್ರೀಂ ಕೋರ್ಟ್ ತಿಳಿಸಿದೆ. ಹಾಗೆಯೇ 1978ರಲ್ಲಿಯೂ ನೋಟು ಅಪನಗದೀಕರಣ ಮಾಡಲಾಗಿದೆ. ಆ ಸಂದರ್ಭದಲ್ಲಿ ನೋಟು ಬದಲಾವಣೆ ಮಾಡಲು 3 ದಿನಗಳ ಅವಧಿ ನೀಡಲಾಗಿತ್ತು. ಬಳಿಕ ಗಡುವನ್ನು 5 ದಿನಕ್ಕೆ ವಿಸ್ತರಣೆ ಮಾಡಲಾಗಿತ್ತು ಎಂದು ವಿವರಿಸಿದೆ.

ಜನರಲ್ಲಿರುವ ನಗದು ಪ್ರಮಾಣ ಸಾರ್ವಕಾಲಿಕ ಏರಿಕೆ

ಕೇಂದ್ರ ಸರ್ಕಾರವು 500 ರೂಪಾಯಿ ಹಾಗೂ 1 ಸಾವಿರ ರೂಪಾಯಿಯ ನೋಟನ್ನು ಅಪನಗದೀಕರಣ ಮಾಡಿ ಆರು ವರ್ಷಗಳು ಆಗಿದೆ. ಆದರೆ ಜನರಲ್ಲಿರುವ ನಗದು ಪ್ರಮಾಣವು ಈ ವರ್ಷದಲ್ಲಿ ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಅಕ್ಟೋಬರ್ 21, 2022ರವರೆಗಿನ ಲೆಕ್ಕಾಚಾರದ ಪ್ರಕಾರ ಜನರ ಕೈಯಲ್ಲಿರುವ ನಗದು ಸಾರ್ವಕಾಲಿಕ ಏರಿಕೆಯಾಗಿದ್ದು, ಪ್ರಸ್ತುತ 30.88 ಲಕ್ಷ ಕೋಟಿ ರೂಪಾಯಿ ನಗದು ಇದೆ. ನವೆಂಬರ್ 4, 2016ರಲ್ಲಿ ಜನರ ಕೈಯಲ್ಲಿರುವ ನಗದು ಪ್ರಮಾಣ 17.97 ಲಕ್ಷ ಕೋಟಿ ರೂಪಾಯಿ ಆಗಿತ್ತು. ಆದರೆ 2022ರಲ್ಲಿ ಈ ನಗದು ಪ್ರಮಾಣ 2016ಕ್ಕೆ ಹೋಲಿಕೆ ಮಾಡಿದಾಗ ಸುಮಾರು ಶೇಕಡ 72ರಷ್ಟು ಅಥವಾ 12.91 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ.

ಕೇಂದ್ರ ಸರ್ಕಾರವು 2016ರ ನವೆಂಬರ್ 8ರಂದು 500 ರೂಪಾಯಿ ಹಾಗೂ 1 ಸಾವಿರ ರೂಪಾಯಿ ನೋಟನ್ನು ಅಪನಗದೀಕರಣ ಮಾಡಿದ ಬಳಿಕ, 2016ರ ನವೆಂಬರ್ 25ರಲ್ಲಿ ಜನರ ಬಳಿ ಸುಮಾರು 9.11 ಲಕ್ಷ ಕೋಟಿ ರೂಪಾಯಿ ಇತ್ತು. ಆ ಮೌಲ್ಯದಿಂದ ಪ್ರಸ್ತುತ ಜನರ ಕೈಯಲ್ಲಿರುವ ಇರುವ ನಗದು ಪ್ರಮಾಣವು ಸುಮಾರು ಶೇಕಡ 239ರಷ್ಟು ಏರಿಕೆಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+