ಕೊರೊನಾ ಬಗ್ಗೆ ಅಚ್ಚರಿಯ ಅಂಕಿ- ಅಂಶ ತೆರೆದಿಟ್ಟ ಸರ್ಕಾರ

ಕೊರೊನಾ ಪಾಸಿಟಿವ್ ಆಗಿರುವುದು ಯಾವ ವಯಸ್ಸಿನವರಿಗೆ ಹೆಚ್ಚು? ಹೀಗೊಂದು ಪ್ರಶ್ನೆ ನಿಮಗೇನಾದರೂ ಬಂದಿದೆಯಾ? ಆದರೆ ಆ ಪ್ರಶ್ನೆ ಬಂದಿದೆಯೋ ಬಿಟ್ಟಿದೆಯೋ ಉತ್ತರವಂತೂ ಬಂದಿದೆ. ಭಾರತದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ ಶೇಕಡಾ 42ರಷ್ಟು 21ರಿಂದ 40ರ ವಯಸ್ಸಿನ ಮಧ್ಯೆ ಇರುವವರು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್ ತಿಳಿಸಿದ್ದಾರೆ.

ಯಾವ ವಯಸ್ಸಿನವರ ಪ್ರಮಾಣ ಎಷ್ಟಿದೆ ಎಂಬ ವಿವರ ಹೀಗಿದೆ: 0- 20 ವರ್ಷದವರು 9%, 21- 40 ವರ್ಷದವರು 42%, 41- 60 ವರ್ಷದವರು 33%, 60 ವರ್ಷ ಮೇಲ್ಪಟ್ಟವರು 17% ಇದ್ದಾರೆ. ಇನ್ನು ದೇಶದ ಒಟ್ಟು ಕೊರೊನಾ ಪ್ರಕರಣಗಳ ಪೈಕಿ 30%ರಷ್ಟು ಒಂದೇ ಸ್ಥಳಕ್ಕೆ ತಳುಕು ಹಾಕಿಕೊಂಡಿದೆ. 17 ರಾಜ್ಯಗಳಲ್ಲಿ ಕಂಡುಬಂದಿರುವ 1023 ಕೊರೊನಾ ಪಾಸಿಟಿವ್ ಪ್ರಕರಣಗಳು ತಬ್ಲಿಘಿ ಜಮಾತ್ ಸಮಾವೇಶಕ್ಕೆ ತಳುಕು ಹಾಕಿಕೊಂಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೊರೊನಾ ಬಗ್ಗೆ ಅಚ್ಚರಿಯ ಅಂಕಿ- ಅಂಶ ತೆರೆದಿಟ್ಟ ಸರ್ಕಾರ

ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇವೆ. ಇನ್ನು ದಿನಕ್ಕೆ ಹತ್ತು ಸಾವಿರ ಮಂದಿಗೆ ಕೊರೊನಾ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+