ಪ್ರಧಾನ ಮಂತ್ರಿ ನರೇಂದ್ರ ಮೋದಿ ಜುಲೈ 13-14ರಂದು ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ವ್ಯಾವಹಾರಿಕ ಸಂಬಂಧ, ದ್ವಿಪಕ್ಷೀಯ ಸಂಬಂಧಕ್ಕೆ ಪ್ರಧಾನಿ ಮೋದಿಯ ಈ ಫ್ರಾನ್ಸ್ ಭೇಟಿಯೂ ಪ್ರಮುಖ ಪ್ರಭಾವ ಉಂಟು ಮಾಡಲಿದೆ. ಈ ನಡುವೆ ಭಾರತದಲ್ಲಿ ಪ್ರಸ್ತುತ ಕಾರ್ಯನಿರ್ವಹಣೆ ಮಾಡುತ್ತಿರುವ ಫ್ರೆಂಚ್ ಕಂಪನಿಗಳ ಬಗ್ಗೆ ನಾವು ತಿಳಿಯೋಣ.
ಈಗಾಗಲೇ ಹಲವಾರು ಅತೀ ದೊಡ್ಡ ಫ್ರೆಂಚ್ ಕಂಪನಿಗಳು ಭಾರತದಲ್ಲಿ ತನ್ನ ಅಂಗಸಂಸ್ಥೆಗಳನ್ನು ಹೊಂದಿದೆ. ಇನ್ನು ಕೆಲವು ಜಾಯಿಂಟ್ ವೆಂಚರ್‌ಗಳು ಮತ್ತು ಫ್ರೆಂಚ್ ಕಂಪನಿಗಳ ಸಂಪರ್ಕ ಕಚೇರಿಗಳು ಭಾರತದಲ್ಲಿದೆ. ಪ್ರಸ್ತುತ ಭಾರತದಲ್ಲಿ ಫ್ರೆಂಚ್ ಸ್ಟಾಕ್ ಮಾರುಕಟ್ಟೆ ಸೂಚ್ಯಂಕದಲ್ಲಿರುವ 40 ಕಂಪನಿಗಳ ಪೈಕಿ 39 ಕಂಪನಿಗಳು ಭಾರತದಲ್ಲಿದೆ. 50ರಿಂದ 70ರಷ್ಟು ಎಸ್‌ಎಂಇಗಳು ಕೂಡಾ ಭಾರತದಲ್ಲಿದೆ. ಪ್ರಮುಖವಾಗಿ ಫಾರ್ಮಾ- ಕೆಮಿಕಲ್ ವಲಯದಲ್ಲಿ ಫ್ರೆಂಚ್ ಕಂಪನಿಗಳು ಅಧಿಕವಾಗಿದೆ.

ಭಾರತದಲ್ಲಿರುವ ಪ್ರಮುಖ ಫ್ರೆಂಚ್ ಕಂಪನಿಗಳಿವು
ಬಿಎನ್‌ಪಿ ಪರಿಬಾಸ್, ಕ್ಯಾಪ್ಜೆಮಿನಿ, ಹವಾಸ್, ಸೊಡೆಕ್ಸೊ: ಸೇವಾ ವಲಯ
ಅರ್ಕೆಮಾ, ಲೋರಿಯಲ್, ಸನೋಫಿ, ಟೋಟಲ್ ಎನರ್ಜಿಸ್: ಫಾರ್ಮಾಮೆಡಿಕಲ್ - ಕೆಮಿಕಲ್
ಏರ್‌ಬಸ್, ಡಸಾಲ್ಟ್, ಯುರೋಕಾಪ್ಟರ್, ಸಫ್ರಾನ್, ಥೇಲ್ಸ್: ಏರೋಸ್ಪೇಸ್
ಬೊಂಗ್ರೇನ್, ಡ್ಯಾನೋನ್, ಲ್ಯಾಕ್ಟಾಲಿಸ್, ಲೆಸಾಫ್ರೆ, ಪೆರ್ನೋಡ್ ರಿಕಾರ್ಡ್: ಕೃಷಿ-ಆಹಾರ
ಕ್ರೂಜೆಟ್, ಒಬರ್ತೂರ್, ಸಫ್ರಾನ್, ಎಸ್‌ಟಿಮೈಕ್ರೊಎಲೆಕ್ಟ್ರಾನಿಕ್ಸ್, ಥೇಲ್ಸ್: ಎಲೆಕ್ಟ್ರಾನಿಕ್ಸ್
ಅಲ್ಸ್ಟಾಮ್, ಸೆರ್ಮೆಕ್ಸ್, ಲೆಗ್ರಿಸ್ ಗ್ರೂಪ್, ಪೊಕ್ಲೈನ್, ಸೈಡೆಲ್: ಕನ್‌ಸ್ಟ್ರಷನ್ ಮೆಕಾನಿಕಲ್
ಹ್ಯಾಗರ್, ಲೆಗ್ರಾಂಡ್, ಷ್ನೇಯ್ಡರ್ ಎಲೆಕ್ಟ್ರಿಕ್: ಎಲೆಕ್ಟ್ರೀಕಲ್ ಕಾಂಪೊನೆಂಟ್
ಫೌರೆಸಿಯಾ, ಮೈಕೆಲಿನ್, ಪ್ಲಾಸ್ಟಿಕ್ ಓಮ್ನಿಯಮ್, ರೆನಾಲ್ಟ್, ವ್ಯಾಲಿಯೋ: ಆಟೋಮೊಬೈಲ್
ಭಾರತದಲ್ಲಿರುವ ಫ್ರೆಂಚ್ ರಾಯಭಾರ ಕಚೇರಿಯ ಪ್ರಕಾರ ಭಾರತದಲ್ಲಿರುವ ಫ್ರೆಂಚ್ ಕಂಪನಿಗಳು ಭಾರತದಲ್ಲಿ ಸುಮಾರು 300,000 ಮಂದಿಯನ್ನು ಉದ್ಯೋಗಿಗಳಾಗಿ ನೇಮಕ ಮಾಡಿಕೊಂಡಿದೆ. ಹಾಗೆಯೇ ಸುಮಾರು 20 ಬಿಲಿಯನ್ ಡಾಲರ್ ವಹಿವಾಟು ಇದೆ. ಕನಿಷ್ಠ ಸ್ಟಾಕ್ ಹೂಡಿಕೆ 19 ಬಿಲಿಯನ್ ಡಾಲರ್ ಆಗಿದೆ.
ಭಾರತದಲ್ಲಿ ಫ್ರಾನ್ಸ್ ಹೂಡಿಕೆ
ವಿದೇಶಿ ನೇರ ಹೂಡಿಕೆಯ ವಿಚಾರಕ್ಕೆ ಬಂದಾಗ ಫ್ರಾನ್ಸ್ ಅತೀ ಅಮೂಲ್ಯವಾದ ಕೊಡುಗೆಯನ್ನು ನೀಡಿದ ದೇಶವಾಗಿದೆ. ಸುಮಾರು 1000ಕ್ಕೂ ಅಧಿಕ ಫ್ರೆಂಚ್ ಸಂಸ್ಥೆಗಳು ಈಗಾಗಲೆ ಭಾರತದಲ್ಲಿದೆ. ಫ್ರಾನ್ಸ್ ಭಾರತದಲ್ಲಿನ 11ನೇ ಅತೀ ದೊಡ್ಡ ವಿದೇಶಿ ಹೂಡಿಕೆ ದೇಶವಾಗಿದೆ. 2000ರ ಏಪ್ರಿಲ್‌ನಿಂದ 2022ರ ಡಿಸೆಂಬರ್‌ವರೆಗೆ ಫ್ರಾನ್ಸ್ ಭಾರತದ ಮೇಲೆ ಸುಮಾರು 10.49 ಬಿಲಿಯನ್ ಡಾಲರ್ ಹೂಡಿಕೆಯನ್ನು ಮಾಡಿದೆ.
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ಡೇಟಾದ ಪ್ರಕಾರ ಭಾರತಕ್ಕೆ ಬರುವ ಒಟ್ಟು ಎಫ್‌ಡಿಐನಲ್ಲಿ ಶೇಕಡ 1.68ರಷ್ಟು ಫ್ರಾನ್ಸ್ ಎಫ್‌ಡಿಐ ಆಗಿದೆ. ಪ್ರಮುಖವಾಗಿ ಸೇವಾ ವಲಯಕ್ಕೆ (ಶೇಕಡ 18.05) ಅಧಿಕವಾಗಿ ಹೂಡಿಕೆ ಮಾಡಲಾಗುತ್ತಿದೆ. ಫ್ರಾನ್ಸ್ ಹೂಡಿಕೆ ವಿಚಾರದಲ್ಲಿ ಸಿಮೆಂಟ್ & ಜಿಪ್‌ಸಮ್ ಪ್ರೊಡೆಕ್ಟ್ಸ್ (ಶೇಕಡ 9.29) ಎರಡನೇ ಹಂತದ್ದಲ್ಲಿದೆ. ಅದರ ನಂತರದ ಸ್ಥಾನದಲ್ಲಿ ಏರ್ ಟ್ರಾನ್ಸ್‌ಪೋರ್ಟ್ (ಶೇಕಡ 7.59), ವಿವಿಧ ಕೈಗಾರಿಕೆಗಳು (ಶೇಕಡ 7.24) ಮತ್ತು ಪೆಟ್ರೋಲಿಯಂ & ನ್ಯಾಚುರಲ್ ಗ್ಯಾಸ್ (ಶೇಕಡ 7.10) ರಷ್ಟಿದೆ.


Click it and Unblock the Notifications