ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿದ್ದಾರೆ. ಸುಮಾರು 2 ವರ್ಷದ 2 ದಿನಗಳ ಮಟ್ಟಿಗೆ ಅವರನ್ನು ನೇಮಿಸಲಾಗಿದ್ದು,ಬರೋಬ್ಬರಿ 6.20 ಕೋಟಿ ಸಂಭಾವನೆ (ಸಹಾಯಧನ) ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ)ರಡಿ ನೇಮಕ ಮಾಡಿಕೊಳ್ಳಲಾಗಿದೆ. ಈ ಸೋಪ್ ಅನ್ನು 1916ರಲ್ಲಿ ಮೈಸೂರಿನ ರಾಜ ಕೃಷ್ಣ ರಾಜ ಒಡೆಯರ್ IV ಬೆಂಗಳೂರಿನಲ್ಲಿ ಸರ್ಕಾರಿ ಸೋಪ್ ಕಾರ್ಖಾನೆಯನ್ನು ಸ್ಥಾಪಿಸಿದಾಗಿನಿಂದ ತಯಾರಿಸಲಾಗುತ್ತಿದೆ.

ಆರು ಕೋಟಿ ರೂಪಾಯಿ
ನಟಿ ತಮನ್ನಾ ಭಾಟಿಯಾ ಅವರು ಈಗ ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್‌ನ ಅಂಬಾಸಡರ್ ಆಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಅವರು ಎರಡು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ, ಇದಕ್ಕಾಗಿ ತಮನ್ನಾ ಅವರಿಗೆ 6.20 ಕೋಟಿ ನೀಡಲಾಗಿದೆ.
ಇವರು ಹಲವಾರು ಬ್ಯೂಟಿ ಹಾಗೂ ಸ್ಕಿನ್ ಕೇರ್ ಬ್ರ್ಯಾಂಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಇನ್ಮುಂದೆ ಮೈಸೂರು ಸ್ಯಾಂಡಲ್ ಸೋಪ್ ಜಾರೀರಾತುವಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟೀಕೆಗಳು
ದೀಪಿಕಾ ಪಡುಕೋಣೆ, ಹರ್ಷಿಕಾ ಪೂಣಚ್ಚ, ಆಶಿಕಾ ರಂಗನಾಥ್, ನಭಾ ನಟೇಶ್, ಶ್ರದ್ಧಾ ಶ್ರೀನಾಥ್ ಮುಂತಾದವರು ಕನ್ನಡದ ಹಿನ್ನೆಲೆ ಇರುವವರಿಗೆ ಅವಕಾಶವನ್ನು ನೀಡಬೇಕಿತ್ತು.ಮೈಸೂರು ಸ್ಯಾಂಡಲ್ ಸೋಪ್ ಎನ್ನುವುದು ಕರ್ನಾಟಕದ ಅತಿ ಪುರಾತನ ಹಾಗೂ ಹೆಮ್ಮೆಯ ಬ್ರ್ಯಾಂಡ್. ಇದಕ್ಕೆ ಸ್ಥಳೀಯ ಕಲಾವಿದರನ್ನೇ ಪ್ರೋತ್ಸಾಹಿಸಬೇಕೆಂಬ ನಿರೀಕ್ಷೆ ಜನರಲ್ಲಿ ಇದೆ. ತಮನ್ನಾ ಭಾಟಿಯಾ ತಮಿಳು-ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಕರ್ನಾಟಕದ ನೆಲ-ನಿಯಮಗಳನ್ನು ಪ್ರತಿನಿಧಿಸುವಂತಹ ಆಯ್ಕೆಯೆಂದಾಗಲೇ ಈ ಬಗ್ಗೆ ಬೇಸರ ವ್ಯಕ್ತವಾಗುತ್ತಿದ್ದೇವೆ.
ತಮನ್ನಾ ಭಾಟಿಯಾ ಅವರು ದೇಶದಾದ್ಯಂತ ಜನಪ್ರಿಯತೆ ಗಳಿಸಿರುವ ನಟಿ. ಅವರು ಸೌಂದರ್ಯ, ಅಭಿನಯ ಹಾಗೂ ನೃತ್ಯದ ಮೂಲಕ ಹೆಚ್ಚಿನ ಅಭಿಮಾನಿಗಳ ಬಳಗವಿದೆ. ಇವರು ವಿಶೇಷ ಹಾಡುಗಳ (special appearances) ಮೂಲಕ ಅವರು ವಿವಿಧ ಭಾಷಾ ಚಿತ್ರರಂಗಗಳಲ್ಲೂ ಗಮನ ಸೆಳೆದಿದ್ದಾರೆ.
ತಮನ್ನಾ ಭಾಟಿಯಾದ ಜನಪ್ರಿಯತೆ
ಪ್ಯಾನ್ ಇಂಡಿಯಾ ಹಿರಿತನ
ತಮನ್ನಾ ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡ ಚಿತ್ರರಂಗಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ದೇಶದಾದ್ಯಂತ ಅವರು ಪರಿಚಿತ ಮುಖವಾಗಿದ್ದಾರೆ.
ವಿಶೇಷ ಹಾಡುಗಳಲ್ಲಿ ಅವರ ನೃತ್ಯ ಫೇಮಸ್
ಜಾಗ್ವಾರ್ (2016): ಈ ಕನ್ನಡ ಚಿತ್ರದಲ್ಲಿ 'ಸಾಮ್‌ಸಂಗ್' ಹಾಡಿನಲ್ಲಿ ತಮನ್ನಾ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು.
ಕೆಜಿಎಫ್: ಚಾಪ್ಟರ್ 1(2018): 'ಜೋಕೆರ್' ಹಾಡಿನಲ್ಲಿ ಅವರು ಹಾಡಿಗೆ ಹೆಜ್ಜೆ ಹಾಕಿದ ದೃಶ್ಯಗಳು ಅಭಿಮಾನಿಗಳಿಂದ ಪ್ರಶಂಸೆ ಪಡೆದವು.
'ರೇಡ್ 2' (2024): ಇತ್ತೀಚೆಗೆ ಈ ಹಿಂಡಿ ಚಿತ್ರದಲ್ಲಿ ಅವರು ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಅದರ ಗ್ಲಾಮರ್ ಹಾಗೂ ನೃತ್ಯಶೈಲಿಗೆ ಪ್ರಶಂಸೆ ಬಂದಿದೆ.
ಬ್ಯೂಟಿ ಇಮೇಜ್ ಮಾತ್ರ ಕಡಿಮೆನೇ ಆಗಿಲ್ಲ
ತಮನ್ನಾ ಹಲವಾರು ಸೌಂದರ್ಯ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಡರ್ ಆಗಿದ್ದು, ಅವರ ಬ್ಯೂಟಿ ಇಮೇಜ್ ಮಾತ್ರ ಕಡಿಮೆನೇ ಆಗಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ನಂತಹ ಬ್ರ್ಯಾಂಡ್ ಅವರ ಜೊತೆ ಸಹಕರಿಸುತ್ತಿರುವುದು ವಾಣಿಜ್ಯ ದೃಷ್ಟಿಯಿಂದ ಮಾತ್ರ.
ಸಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್
ತಮನ್ನಾ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಹೊಸ ಪ್ರೋಡಕ್ಟ್ ಅಥವಾ ಬ್ರ್ಯಾಂಡ್‌ಗಳ ಪ್ರಚಾರಕ್ಕೆ ಇವರ ಬೇಡಿಕೆ ಜಾಹೀರಾತು ಕ್ಷೇತ್ರದಲ್ಲಿ ಹೆಚ್ಚಾಗಿ ಇದೆ.
ಸ್ಯಾಂಡಲ್ ಸೋಪ್ ತನ್ನ ಹೊಸ ಬ್ರ್ಯಾಂಡ್ ರಾಯಭಾರಿಯಾಗಿ ನಟಿ ತಮನ್ನಾಗೆ ಕೋಟಿ ಕೋಟಿ ಸಂಭಾವನೆ ನೀಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಉಂಟಾಗಿದೆ ಮುಂದೆ ಏನೆಲ್ಲಾ ಆಗುತ್ತದೆ ಎಂಬುವುದನ್ನು ಕಾದುಮನೋಡಬೇಕಿದೆ.


Click it and Unblock the Notifications