ಭಾರತದ ಅತೀ ದೊಡ್ಡ ಬಾಟಲ್ ನೀರು ತಯಾರಕರು, ಸರಬರಾಜುದಾರರು ಆದ ಬಿಸ್ಲೇರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಖರೀದಿ ಮಾಡುವ ಡೀಲ್ ಬಗ್ಗೆ ನಡೆಸುತ್ತಿದ್ದ ಮಾತುಕತೆಯನ್ನು ನಿಲ್ಲಿಸಲಾಗಿದೆ ಎಂದು ಮಾರ್ಚ್ 18, 2023ರ ಶನಿವಾರ ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ಸ್ ಮಾಹಿತಿ ನೀಡಿದೆ. ಈ ಡೀಲ್ ನಡೆಯುತ್ತಿದ್ದರೆ, ಟಾಟಾ ಸಂಸ್ಥೆಯು ಚಹಾದಿಂದ ಹಿಡಿದು ಸ್ಟೀಲ್ ಉತ್ಪಾದನಾ ವಲಯದವರೆಗೂ ತನ್ನ ಬಾಹುವನ್ನು ವಿಸ್ತಾರ ಮಾಡಿದ್ದಂತೆ ಆಗುತ್ತಿತ್ತು.
ಭಾರತದ ಅತೀ ದೊಡ್ಡ ಬಾಟಲ್ ನೀರು ತಯಾರಕರು, ಸರಬರಾಜುದಾರರು ಆದ ಬಿಸ್ಲೇರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಖರೀದಿ ಮಾಡುವ ಡೀಲ್ ಬಗ್ಗೆ ನಡೆಸುತ್ತಿದ್ದ ಮಾತುಕತೆಯನ್ನು ನಿಲ್ಲಿಸಲಾಗಿದೆ ಎಂದು ಮಾರ್ಚ್ 18, 2023ರ ಶನಿವಾರ ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ಸ್ ಮಾಹಿತಿ ನೀಡಿದೆ. ಈ ಡೀಲ್ ನಡೆಯುತ್ತಿದ್ದರೆ, ಟಾಟಾ ಸಂಸ್ಥೆಯು ಚಹಾದಿಂದ ಹಿಡಿದು ಸ್ಟೀಲ್ ಉತ್ಪಾದನಾ ವಲಯದವರೆಗೂ ತನ್ನ ಬಾಹುವನ್ನು ವಿಸ್ತಾರ ಮಾಡಿದ್ದಂತೆ ಆಗುತ್ತಿತ್ತು.

ಈ ಹಿಂದೆಯೇ ಈ ಬಿಸ್ಲೇರಿ ಖರೀದಿ ಮಾತುಕತೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ, ಡೀಲ್ ಕೈಬಿಡಲಾಗಿದೆ ಎಂದು ಮಾಹಿತಿ ಲಭ್ಯವಾಗಿತ್ತು. ಈಗ ಟಾಟಾ ಗ್ರೂಪ್ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದೆ. "ಬಿಸ್ಲೇರಿಯನ್ನು ಖರೀದಿ ಮಾಡುವ ಬಗ್ಗೆ ನಡೆಯುತ್ತಿದ್ದ ಮಾತುಕತೆಯ ಬಗ್ಗೆ ಸಂಸ್ಥೆಯು ಅಪ್‌ಡೇಟ್ ನೀಡಲು ಬಯಸುತ್ತದೆ. ಈ ಮಾತುಕತೆಯನ್ನು ಅರ್ಧಕ್ಕೆ ಕೈಬಿಡಲಾಗಿದೆ. ಸಂಸ್ಥೆಯು ಬಿಸ್ಲೇರಿಯೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ, ಮಾತುಕತೆಯನ್ನು ಮುಂದುವರಿಸುತ್ತಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ," ಎಂದು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ ತಿಳಿಸಿದೆ.
ಈ ಡೀಲ್ ಬಗ್ಗೆ ಅಧಿಕ ಮಾಹಿತಿ ತಿಳಿಯಿರಿ
ನವೆಂಬರ್ 2022ರಲ್ಲಿ ಆದ ವರದಿ ಪ್ರಕಾರ ಟಾಟಾ ಗ್ರೂಪ್ ಮತ್ತು ಬಿಸ್ಲೇರಿ ಇಂಟರ್‌ನ್ಯಾಷನಲ್ ನಡುವೆ ಸುಮಾರು 6,000-7,000 ಕೋಟಿ ರೂಪಾಯಿಯ ಡೀಲ್ ನಡೆಸುತ್ತಿದೆ. ಇದು ಬಿಸ್ಲೇರಿಯನ್ನು ಟಾಟಾ ಗ್ರೂಪ್ ಖರೀದಿ ಮಾಡುವ ಡೀಲ್ ಆಗಿದೆ ಎಂದು ವರದಿಯಾಗಿದೆ. ಇನ್ನು ಈ ಬಗ್ಗೆ ಮಾಹಿತಿ ನೀಡಿದ ಬಿಸ್ಲೇರಿ ಇಂಟರ್‌ನ್ಯಾಷನಲ್‌ನ ಚೇರ್‌ಮನ್ ರಮೇಶ್ ಚೌಹಾಣ್, "ನಾನು ಟಾಟಾದಲ್ಲಿನ ಸಂಸ್ಕೃತಿಗೆ ನೀವು ಮೌಲ್ಯ, ಏಕತೆಯನ್ನು ಇಷ್ಟಡುತ್ತಿದೆ. ಬಿಸ್ಲೇರಿ ಖರೀದಿಸಲು ಇತರರು ತೋರಿದ ಆಸಕ್ತಿಗಿಂತ ಅಧಿಕ ಆಸಕ್ತಿಯನ್ನು ಟಾಟಾ ತೋರಿದೆ," ಎಂದು ಹೇಳಿದ್ದಾರೆ.
ಬಿಸ್ಲೇರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ಬಹುತೇಕ ಷೇರುಗಳನ್ನು ಖರೀದಿ ಮಾಡಲು ಟಾಟಾ ಗ್ರೂಪ್ ನಡುವೆ ನಡೆಯುತ್ತಿದ್ದ ಮಾತುಕತೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಪ್ರಮುಖವಾಗಿ ಮೌಲ್ಯದ ಲೆಕ್ಕಾಚಾರದ ಆಧಾರದಲ್ಲಿ ಈ ಮಾತುಕತೆಯನ್ನು ಕೈಬಿಡಲಾಗಿದೆ ಎಂದು ಈ ಹಿಂದೆ ವರದಿಯಾಗಿದೆ. ಪ್ರಮುಖವಾಗಿ ಮೌಲ್ಯದ ವಿಚಾರದಲ್ಲಿ ಉಭಯ ಸಂಸ್ಥೆಗಳು ಒಂದು ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗದ ಕಾರಣದಿಂದಾಗಿ ಈ ಮಾತುಕತೆ ಅಥವಾ ಡೀಲ್ ಮುರಿದು ಬಿದ್ದಿದೆ ಎಂದು ಮಾಹಿತಿ ಲಭಿಸಿತ್ತು.
ಟಾಟಾ ಗ್ರೂಪ್ ಮತ್ತು ಬಿಸ್ಲೇರಿಯ ಪ್ರತಿನಿಧಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು. ಈಗ ಟಾಟಾ ಗ್ರೂಪ್ ಅಧಿಕೃತ ಹೇಳಿಕೆಯ ಮೂಲಕ ವರದಿ ಸ್ಪಷ್ಟಪಡಿಸಿದೆ. ಬಿಸ್ಲೇರಿಯು ಸುಮಾರು 1 ಬಿಲಿಯನ್ ಡಾಲರ್‌ನ ಡೀಲ್ ನಡೆಸಲು ಮುಂದಾಗಿದೆ. ಆದರೆ ಈ ಮೌಲ್ಯಕ್ಕೆ ಸಂಬಂಧಿಸಿ ಟಾಟಾ ಗ್ರೂಪ್ ಒಪ್ಪಿಗೆ ಸೂಚಿಸಿಲ್ಲ. ಈ ಹಿನ್ನೆಲೆಯಿಂದಾಗಿ ಡೀಲ್ ಮುರಿದುಬಿದ್ದಿದೆ ಎಂಬ ಮಾಹಿತಿಯಿದೆ. ಪ್ರಸ್ತುತ ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ಸ್ ಹಿಮಾಲಯನ್ ನ್ಯಾಚುರಲ್ ಮಿನರಲ್ ವಾಟರ್ ಮತ್ತು ಟಾಟಾ ವಾಟರ್ ಪ್ಲಸ್ ಬ್ರ್ಯಾಂಡ್ ಅನ್ನು ಹೊಂದಿದೆ.


Click it and Unblock the Notifications