ಟಾಟಾ ಸಮೂಹದಿಂದ ಏರ್ ಇಂಡಿಯಾಗೆ ಬಿಡ್ಡಿಂಗ್ ಸಾಧ್ಯತೆ

ಟಾಟಾ ಸಮೂಹದಿಂದ ಸೋಮವಾರ ಏರ್ ಇಂಡಿಯಾಗೆ ಆಸಕ್ತಿ ವ್ಯಕ್ತಪಡಿಸಿರುವ (EoI) ಸಾಧ್ಯತೆ ಇದೆ. ಈ ದಿನ ಆಸಕ್ತಿ ವ್ಯಕ್ತಪಡಿಸುವುದಕ್ಕೆ ಸಂಜೆ 5 ಗಂಟೆ ತನಕ ಗಡುವಿತ್ತು. ಮಾಹಿತಿ ಪ್ರಕಾರ, ಟಾಟಾ ಗ್ರೂಪ್ ಏರ್ ಏಷ್ಯಾವನ್ನು ಪ್ರಮುಖವಾಗಿ ಬಳಸಿಕೊಳ್ಳಲಿದ್ದು, ಅದರಲ್ಲಿ ಪ್ರಮುಖವಾದ ಷೇರಿನ ಪಾಲನ್ನು ಹೊಂದಿದೆ.

ಕಳೆದ ಆಗಸ್ಟ್ ನಲ್ಲಿ ಟಾಟಾ ಸನ್ಸ್ ವಕ್ತಾರರು ಮಾಧ್ಯಮಕ್ಕೆ ಮಾಹಿತಿ ನೀಡಿ, ಬಿಡ್ಡಿಂಗ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದ್ದುದನ್ನು ತಿಳಿಸಿದ್ದರು. ಇತರ ಹಣಕಾಸು ಸಹಭಾಗಿಯನ್ನು ಜತೆಗೂಡಿಸಿಕೊಳ್ಳುವ ಆಲೋಚನೆ ಇಲ್ಲ ಅಂತಲೂ ಹೇಳಿದ್ದರು. ಇನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ಗೆ ಪ್ರತ್ಯೇಕವಾಗಿ ಬಿಡ್ಡಿಂಗ್ ಮಾಡುವುದಕ್ಕೆ ಇತರ ಏರ್ ಲೈನ್ಸ್ ಗಳು ಆಸಕ್ತಿ ವ್ಯಕ್ತಪಡಿಸಿವೆ ಎನ್ನಲಾಗಿದೆ.

ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಏರ್ ಇಂಡಿಯಾಗೆ ಬಿಡ್ಡಿಂಗ್ ಮಾಡುವ ಮುನ್ನ ಟಾಟಾ ಗ್ರೂಪ್ ನಿಂದ ಪ್ರಮುಖ ಕಾನೂನು ಸಂಸ್ಥೆ ಹಾಗೂ ತಜ್ಞರ ಜತೆಗೆ ಮಾತುಕತೆ ನಡೆಸಲಾಗಿದೆ.

ಟಾಟಾ ಸಮೂಹದಿಂದ ಏರ್ ಇಂಡಿಯಾಗೆ ಬಿಡ್ಡಿಂಗ್ ಸಾಧ್ಯತೆ

ಈ ಮಧ್ಯೆ ಯುಎಸ್ ಮೂಲದ ಇಂಟರ್ ಅಪ್ಸ್ ಕಂಪೆನಿಯ ಅಧ್ಯಕ್ಷ ಲಕ್ಷ್ಮೀ ಪ್ರಸಾದ್ ಘೋಷಣೆ ಮಾಡಿದಂತೆ, ಅವರ ಕಂಪೆನಿ ಕೂಡ ಏರ್ ಇಂಡಿಯಾಗೆ ಇಂದು ಬಿಡ್ ಮಾಡಲಾಗುತ್ತದೆ ಎನ್ನಲಾಗಿತ್ತು. ಇಂಟರ್ ಅಪ್ಸ್ ಕಂಪೆನಿಯು ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಕಂಪೆನಿ. ಉದ್ಯಮದ ಅವಕಾಶಗಳನ್ನು ಹುಡುಕುವುದು ಮತ್ತು ಅದರಲ್ಲಿ ಹೂಡಿಕೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ನೇರವಾಗಿ ಅಥವಾ ಷೇರುದಾರರು, ಸಹವರ್ತಿಗಳು ಹಾಗೂ ಗ್ರಾಹಕರ ಪರವಾಗಿ ಹೂಡಿಕೆಯನ್ನು ಮಾಡುತ್ತದೆ.

ಏರ್ ಇಂಡಿಯಾ ಖರೀದಿಗೆ ಆಸಕ್ತಿ ವ್ಯಕ್ತಪಡಿಸುವುದಕ್ಕೆ ಇಂದು ಕೊನೆ ದಿನ. ಡಿಸೆಂಬರ್ 29ನೇ ತಾರೀಕಿನ ಸಂಜೆ 5 ಗಂಟೆಯೊಳಗೆ ಫಿಸಿಕಲ್ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಹ ಬಿಡ್ಡರ್ ಗಳಿಗೆ 2021ರ ಜನವರಿ 5ರಂದು ಮಾಹಿತಿ ನೀಡಲಾಗುತ್ತದೆ.

ಐನೂರು ಉದ್ಯೋಗಿಗಳು ಇರುವ ಏರ್ ಇಂಡಿಯಾದ ಸಿಬ್ಬಂದಿ ಗುಂಪು ಸಹ ಸಂಸ್ಥೆಯ ಖರೀದಿಗೆ ಆಸಕ್ತಿ ವ್ಯಕ್ತಪಡಿಸುವ ಸಾಧ್ಯತೆ ಇದೆ. ಅಂದ ಹಾಗೆ, ಮಾರ್ಚ್ 31, 2019ಕ್ಕೆ ಏರ್ ಇಂಡಿಯಾದ ಒಟ್ಟು ಸಾಲ ಪ್ರಾವಿಷನಲ್ ಆಗಿ 58,351.93 ಕೋಟಿ ರುಪಾಯಿ ಇತ್ತು. ಏರ್ ಇಂಡಿಯಾದಲ್ಲಿ ಇರುವ ಸರ್ಕಾರದ ಶೇಕಡಾ ನೂರರಷ್ಟು ಪಾಲನ್ನು ಮಾರಾಟಕ್ಕೆ ಇಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+