ಭಾರತದ ಅತೀ ದೊಡ್ಡ ಬಾಟಲ್ ನೀರು ತಯಾರಕರು, ಸರಬರಾಜುದಾರರು ಆದ ಬಿಸ್ಲೇರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ಬಹುತೇಕ ಷೇರುಗಳನ್ನು ಖರೀದಿ ಮಾಡಲು ಟಾಟಾ ಗ್ರೂಪ್ ನಡುವೆ ಮಾತುಕತೆ ನಡೆದಿದೆ. ಆದರೆ ಈ ಮಾತುಕತೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಪ್ರಮುಖವಾಗಿ ಮೌಲ್ಯದ ಲೆಕ್ಕಾಚಾರದ ಆಧಾರದಲ್ಲಿ ಈ ಮಾತುಕತೆಯನ್ನು ಕೈಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾರತದ ಅತೀ ದೊಡ್ಡ ಸಂಸ್ಥೆಗಳಲ್ಲಿ ಒಂದಾದ ಟಾಟಾ ಗ್ರೂಪ್ ಬಿಸ್ಲೇರಿಯನ್ನು ಖರೀದಿ ಮಾಡುವ ಮಾತುಕತೆಯನ್ನು ನಡೆಸಿದೆ. ವಹಿವಾಟಿನ ಬಗ್ಗೆ ಎಲ್ಲ ಅಂತಿಮ ಮಾತುಕತೆಯನ್ನು ನಡೆಸಲಾಗಿತ್ತು. ಬಿಸ್ಲೇರಿ ಮಾಲೀಕರು ಈ ಡೀಲ್ ಮೂಲಕ ಸುಮಾರು 8,258 ಕೋಟಿ ರೂಪಾಯಿ (1 ಬಿಲಿಯನ್ ಡಾಲರ್) ಪಡೆಯುವ ಅಂದಾಜು ಮಾಡಿದ್ದರು. ಆದರೆ ಉಭಯ ಸಂಸ್ಥೆಗಳ ನಡುವಿನ ಈ ಮಾತುಕತೆಯು ಸ್ಥಗಿತವಾಗಿದೆ.

ಡೀಲ್ ಮುರಿದುಬಿದ್ದದ್ದು ಯಾಕೆ?
ಪ್ರಮುಖವಾಗಿ ಮೌಲ್ಯದ ವಿಚಾರದಲ್ಲಿ ಉಭಯ ಸಂಸ್ಥೆಗಳು ಒಂದು ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗದ ಕಾರಣದಿಂದಾಗಿ ಈ ಮಾತುಕತೆ ಅಥವಾ ಡೀಲ್ ಮುರಿದು ಬಿದ್ದಿದೆ. ಆದರೆ ಟಾಟಾ ಗ್ರೂಪ್ ಹಾಗೂ ಬಿಸ್ಲೇರಿ ನಡುವಿನ ಮಾತುಕತೆ ಮತ್ತೆ ಮುಂದುವರಿಯುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಟಾಟಾ ಗ್ರೂಪ್ ಮತ್ತು ಬಿಸ್ಲೇರಿಯ ಪ್ರತಿನಿಧಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ವೆಬ್‌ಸೈಟ್‌ನಲ್ಲಿನ ಮಾಹಿತಿ ಪ್ರಕಾರ 1949ರಲ್ಲಿ ಬಿಸ್ಲೇರಿಯ ಮೂಲ ಆರಂಭವಾಗಿದೆ. ಸಾಫ್ಟ್ ಡ್ರಿಕ್ ತಯಾರಕ ಸಂಸ್ಥೆಯಾದ ಪಾರ್ಲೆ ಗ್ರೂಪ್ ಅನ್ನು ಜಯಂತಿಲಾಲ್ ಚೌಹಾಣ್ ಆರಂಭಿಸಿದ್ದಾರೆ. ಈ ಸಂಸ್ಥೆ 1969ರಲ್ಲಿ ಇಟಾಲಿಯನ್ ಉದ್ಯಮಿಗಳಿಂದ ಬಿಸ್ಲೇರಿಯನ್ನು ಡೀಲ್ ಮಾಡಿಕೊಂಡಿದೆ. ಈ ಸಂಸ್ಥೆಯಲ್ಲಿನ ಶೇಕಡ 60ರಷ್ಟು ಷೇರು ಭಾರತದಲ್ಲಿದೆ. ಈ ಸಂಸ್ಥೆಯು ಹ್ಯಾಂಡ್ ಸ್ಯಾನಿಟೈಜರ್ ಅನ್ನು ಕೂಡಾ ಉತ್ಪಾದನೆ ಮಾಡುತ್ತದೆ.
ಟಾಟಾ ಗ್ರೂಪ್‌ಗೆ ಸ್ಟೇಕ್ ಮಾರಾಟ ಮಾಡುವ ಮಾತುಕತೆಯನ್ನು ಬಿಸ್ಲೇರಿ ಮೊದಲು ನಡೆಸಿದೆ ಎಂದು ನವೆಂಬರ್ 2022ರಲ್ಲಿ ಒಂದು ಸಂದರ್ಶನದಲ್ಲಿ ಬಿಸ್ಲೇರಿ ಚೇರ್‌ಮನ್ ರಮೇಶ್ ಚೌಹಾಣ್ ಮಾಹಿತಿ ನೀಡಿದ್ದರು. ಈ ಡೀಲ್‌ನಿಂದಾಗಿ ಟಾಟಾ ಗ್ರೂಪ್ ಭಾರತದಲ್ಲಿ ತನ್ನ ವಿಸ್ತಾರವನ್ನು ಹೆಚ್ಚಿಸಲು ಇನ್ನಷ್ಟು ಸಹಾಯವಾಗುತ್ತಿತ್ತು. ಈಗಾಗಲೇ ಹಿಮಾಲಯನ್ ನ್ಯಾಚುರಲ್ ಮಿನರಲ್ ವಾಟರ್ ಮತ್ತು ಟಾಟಾ ವಾಟರ್ ಪ್ಲಸ್ ಬ್ರ್ಯಾಂಡ್ ಅನ್ನು ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ ಲಿಮಿಟೆಡ್ ಹೊಂದಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications