ಟಾಟಾ ಗ್ರೂಪ್ ತೈವಾನೀಸ್ ಕಂಪನಿಯಾದ ವಿಸ್ಟ್ರಾನ್ ಮೂಲಕ ಬೆಂಗಳೂರಿನ ಹೊರಗಿರುವ ನರಸಾಪುರ ಕಾರ್ಖಾನೆಯನ್ನು ಸ್ವಾಧೀನಪಡಿಸಿಕೊಂಡಿದೆ. ಇಲ್ಲಿಯೇ ಭಾರತದ ಆಪಲ್‌ನ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿದೆ ಎಂದು ವರದಿಯು ಉಲ್ಲೇಖಿಸಿದೆ. ಆಪಲ್ ಸಿಇಒ ಟಿಮ್ ಕುಕ್ ಏಪ್ರಿಲ್‌ನಲ್ಲಿ ಮುಂಬೈಗೆ ಆಗಮಿಸಿದ ಬಳಿಕ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್‌ರನ್ನು ಭೇಟಿಯಾಗಿದ್ದಾರೆ.
ಈಗ ಟಾಟಾ ಗ್ರೂಪ್ ಐಫೋನ್ ಅನ್ನು ಉತ್ಪಾದಿಸುತ್ತಿದೆ ಎಂದು ವರದಿಯಾಗಿದೆ. ಎಲೆಕ್ಟ್ರಾನಿಕ್ಸ್ ತಯಾರಿಕೆಗಾಗಿ ಟಾಟಾ ಸಮೂಹದ ಯೋಜನೆಗಳು, ಪಾಲುದಾರಿಕೆಗೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಉದ್ದೇಶಗಳ ಕುರಿತು ಇಬ್ಬರು ಚರ್ಚೆ ನಡೆಸಿದ್ದಾರೆ ವರದಿಯಾಗಿದೆ. ಇನ್ನು ವಿಸ್ಟ್ರಾನ್ ಸಂಪೂರ್ಣವಾಗಿ ಬೆಂಗಳೂರಿನ ತನ್ನ ಪ್ರದೇಶವನ್ನು ತೊರೆಯುತ್ತದೆಯೇ ಎಂಬುವುದು ಖಚಿತವಾಗಿಲ್ಲ.
ಈ ನಡುವೆ ಕೆಲವು ಟಾಟಾ ಅಧಿಕಾರಿಗಳು ಈಗಾಗಲೇ ಬೆಂಗಳೂರಿನ ವಿಸ್ಟ್ರಾನ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಕಾರ್ಯಾಚರಣೆಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಭಾರತದಲ್ಲಿ ತನ್ನ ಉತ್ಪಾದನೆಯನ್ನು ವಿಸ್ತರಣೆ ಮಾಡಲು ಮತ್ತು ವಿಶ್ವಾಸಾರ್ಹ ಭಾರತೀಯ ಕಂಪನಿಗಳನ್ನು ಉತ್ಪಾದನೆಯಂತಹ ನಿರ್ಣಾಯಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಆಪಲ್‌ಗೆ ಸರ್ಕಾರ ಪ್ರೋತ್ಸಾಹ ನೀಡಿದೆ ಎಂದೂ ವರದಿಯಾಗಿದೆ.

ಪ್ರಮುಖವಾಗಿ ಆಪಲ್ ಸಂಸ್ಥೆಯು ಚೀನಾದ ಹೊರಗೆ ದೊಡ್ಡ ಉತ್ಪಾದನಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಸಹಕಾರ, ಪ್ರೋತ್ಸಾಹ ನೀಡುತ್ತಿದೆ ಎಂದು ವರದಿ ಹೇಳುತ್ತದೆ. ಇನ್ನು ಈ ಬಗ್ಗೆ ಟಾಟಾ ಸಂಸ್ಥೆಯಾಗಲಿ ಅಥವಾ ಆಪಲ್ ಸಂಸ್ಥೆಯಾಗಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಭಾರತದಲ್ಲಿ ಆಪಲ್ ಸ್ಟೋರ್ ಆರಂಭ
ಆಪಲ್ ಸಂಸ್ಥೆ ಇತ್ತೀಚೆಗೆ ಮುಂಬೈನಲ್ಲಿ ಭಾರತದ ತನ್ನ ಮೊದಲ ಸ್ಟೋರ್ ಅನ್ನು ಆರಂಭ ಮಾಡಿದೆ. ಅದಾದ ಬಳಿಕ ನವದೆಹಲಿಯಲ್ಲಿ ಏಪ್ರಿಲ್ 20ರಂದು ಎರಡನೇ ಸ್ಟೋರ್ ಅನ್ನು ಆರಂಭ ಮಾಡಲಿದೆ. ಮೊಲದ ಸ್ಟೋರ್ ಅನ್ನು ಸಿಇಒ ಟಿಮ್ ಕುಕ್ ಉದ್ಘಾಟನೆ ಮಾಡಿದ್ದಾರೆ. ಎರಡನೇ ಸ್ಟೋರ್ ಅನ್ನು ಕೂಡಾ ಸಿಇಒ ಟಿಮ್ ಕುಕ್ ತೆರೆದು, ಗ್ರಾಹಕರನ್ನು ಸ್ವಾಗತಿಸಿದ್ದಾರೆ.
ಪಾಲುದಾರರ ಸಹಯೋಗದೊಂದಿಗೆ ಕಳೆದ 25 ವರ್ಷಗಳಲ್ಲಿ ಭಾರತದಲ್ಲಿ ವಹಿವಾಟನ್ನು ನಡೆಸುತ್ತಾ ಬಂದಿರುವ ಐಕಾನಿಕ್ ಸಂಸ್ಥೆಯಾದ ಆಪಲ್ ಭಾರತದಲ್ಲಿ ತನ್ನ ಮೊದಲ ರಿಟೇಲ್ ಕಚೇರಿಯನ್ನು ಆರಂಭ ಮಾಡಿದೆ. ಈ ಕಚೇರಿಯು ಬಾಂದ್ರಾ ಕುರ್ಲಾ ಕಾಂಪ್ಲೇಕ್ಸ್ (BKC) ವಾಣಿಜ್ಯ ಪ್ರದೇಶದಲ್ಲಿದೆ. ಇದಾದ ಬಳಿಕ ಈಗ ಮತ್ತೆ ಆಪಲ್ ತನ್ನ ಎರಡನೇ ಕಚೇರಿಯನ್ನು ಆರಂಭ ಮಾಡಿದೆ. ಎರಡು ಸ್ಟೋರ್‌ನಲ್ಲಿ ಗ್ರಾಹಕರ ದಂಡೇ ಇತ್ತು.
ಆಪಲ್ ಸಿಇಒ ಟಿಮ್ ಕುಕ್ ನಿರೀಕ್ಷೆಯಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಪಲ್‌ನ ರಿಟೇಲ್ ಸ್ಟೋರ್‌ನ ಹಿರಿಯ ಉಪಾಧ್ಯಕ್ಷ ಡೀರ್ಡ್ರೆ ಒ'ಬ್ರಿಯಾನ್, "ದೆಹಲಿಯಲ್ಲಿ ನಮ್ಮ ಎರಡನೇ ಸ್ಟೋರ್ ಆರಂಭವಾಗಿದೆ. ಅಲ್ಲಿ ನಮ್ಮ ಗ್ರಾಹಕರಿಗೆ ಉತ್ತಮ ಕ್ವಾಲಿಟಿಯ ಆಪಲ್ ಫೋನ್‌ಗಳನ್ನು ನೀಡಲು ನಾವು ಉತ್ಸುಕರಾಗಿದ್ದೇವೆ," ಎಂದು ತಿಳಿಸಿದ್ದಾರೆ.
ಉನ್ನತ ಶಿಕ್ಷಣವನ್ನು ಪಡೆದ, ಟೆಕ್ ತಜ್ಞರುಗಳು ಆಪಲ್‌ನ ಈ ಎರಡು ಸ್ಟೋರ್‌ಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ಭಾರತದಲ್ಲಿನ ಆಪಲ್ ಸ್ಟೋರ್ ಉದ್ಯೋಗಿಗಳು ಅಧಿಕ ವೇತನವನ್ನು ಪಡೆಯುತ್ತಿದ್ದಾರೆ. ಭಾರತದಲ್ಲಿನ ಈ ಆಪಲ್ ಸ್ಟೋರ್ ಉದ್ಯೋಗಿಗಳು ಇತರ ಟೆಕ್ ಬ್ರ್ಯಾಂಡ್ ರಿಟೇಲ್ ಸ್ಟೋರ್‌ಗಳಲ್ಲಿ ಕೆಲಸ ಮಾಡುವಾಗ ಹೊಂದಿರುವ ವೇತನಕ್ಕಿಂತ ಗಣನೀಯವಾಗಿ ಅಧಿಕ ವೇತನವನ್ನು ಗಳಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಧ್ಯಮಗಳ ವರದಿಯ ಪ್ರಕಾರ ಭಾರತದಲ್ಲಿ ಎರಡು ಆಪಲ್ ಸ್ಟೋರ್‌ಗಳಲ್ಲಿ ಸರಿಸುಮಾರು ಅಂದಾಜಿನಂತೆ ಉದ್ಯೋಗಿಗಳು 1 ಲಕ್ಷ ರೂಪಾಯಿ ಗಳಿಕೆಯನ್ನು ಹೊಂದಿದ್ದಾರೆ. ಈ ಸಂಬಳವು ಇತರ ಟೆಕ್ ಬ್ರ್ಯಾಂಡ್‌ಗಳು ತಮ್ಮ ರಿಟೇಲ್ ಸ್ಟೋರ್ ಉದ್ಯೋಗಿಗಳಿಗೆ ಮಾಸಿಕ ಆಧಾರದ ಮೇಲೆ ಪಾವತಿಸುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಎಂದು ವರದಿಯಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications