ಟಾಟಾ ಗ್ರೂಪ್ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಬ್ರಿಟನ್‌ನಲ್ಲಿ ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಬ್ಯಾಟರಿ ಸ್ಥಾವರ ಅಥವಾ ಗಿಗಾಫ್ಯಾಕ್ಟರಿಯನ್ನು ಸ್ಥಾಪನೆ ಮಾಡಲು ಟಾಟಾ ಗ್ರೂಪ್ 4 ಬಿಲಿಯನ್ ಪೌಂಡ್‌ಗಳಿಗಿಂತ ಹೆಚ್ಚು ಹೂಡಿಕೆ ಮಾಡಲಿದೆ ಎಂದು ಯುನೈಟೆಡ್ ಕಿಂಗ್‌ಡಮ್ ಸರ್ಕಾರ ಬುಧವಾರ ಪ್ರಕಟಿಸಿದೆ.
ಈ ಯೋಜನೆಯು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಬ್ರಿಟಿಷ್ ಪ್ರಧಾನ ಮಂತ್ರಿ ರಿಷಿ ಸುನಕ್ ಇದು ದೇಶದ ವಾಹನ ಉದ್ಯಮಕ್ಕೆ ಇದು "ವಿಸ್ಮಯಕಾರಿಯಾಗಿ ಹೆಮ್ಮೆಯ" ಕ್ಷಣ ಎಂದು ಶ್ಲಾಘಿಸಿದ್ದಾರೆ. ಹಾಗೆಯೇ ಇದು ಯುಕೆ ಕಾರು ಉತ್ಪಾದನಾ ಉದ್ಯಮ ಮತ್ತು ಇಲ್ಲಿನ ನುರಿತ ಕಾರ್ಮಿಕರ ಸಾಮರ್ಥ್ಯಕ್ಕೆ ಒಂದು ಸಾಕ್ಷಿಯಾಗಿದೆ ಎಂದು ಬ್ರಿಟಿಷ್ ಪ್ರಧಾನ ಮಂತ್ರಿ ಬಣ್ಣಿಸಿದ್ದಾರೆ. ಈ ಯೋಜನೆ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

ಟಾಟಾ ಯುಕೆಯಲ್ಲಿ ಮಾಡಲಿರುವ ಹೂಡಿಕೆ ಬಗ್ಗೆ ಮಾಹಿತಿ
1. ಯುಕೆ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಜಾಗ್ವಾರ್ ಲ್ಯಾಂಡ್ ರೋವರ್‌ಗೆ (JLR) ಮಾಲೀಕತ್ವವನ್ನು ಹೊಂದಿದೆ. ಇದು 40GWh ನ ಆರಂಭಿಕ ಉತ್ಪಾದನೆಯೊಂದಿಗೆ ಹೊಸ ಗಿಗಾಫ್ಯಾಕ್ಟರಿಯ ಆಂಕರ್ ಗ್ರಾಹಕರಾಗಿರುತ್ತದೆ. ಇದು ಯುರೋಪ್‌ನಲ್ಲಿ ಅತಿ ದೊಡ್ಡದಾಗಿದೆ.
2. ಹೊಸ ಗಿಗಾಫ್ಯಾಕ್ಟರಿಯಲ್ಲಿನ ಉತ್ಪಾದನೆಯು 2026 ರಲ್ಲಿ ಪ್ರಾರಂಭವಾಗಲಿದೆ. ಯಕೆ ಆರ್ಥಿಕತೆಯನ್ನು ಬೆಳೆಸಲು ಸುನಕ್ ಪ್ರಯತ್ನಕ್ಕೆ ಇದು ದೊಡ್ಡ ಕೊಡುಗೆಯಾಗಲಿದೆ.
3. "ಯುಕೆಯಲ್ಲಿ ಹೊಸ ಬ್ಯಾಟರಿ ಕಾರ್ಖಾನೆಯಲ್ಲಿ ಟಾಟಾ ಗ್ರೂಪ್‌ನ ಮಲ್ಟಿ ಬಿಲಿಯನ್ ಪೌಂಡ್ ಹೂಡಿಕೆಯು ನಮ್ಮ ಕಾರು ಉತ್ಪಾದನಾ ಉದ್ಯಮ ಮತ್ತು ಅದರ ನುರಿತರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಬ್ಯಾಟಲಿ ಟೆಕ್ನಾಲಜಿ ಬೆಳವಣಿಗೆ ಹೊಂದಲು ಇದು ಸಹಾಯಕವಾಗಲಿದೆ. ಹಾಗೆಯೇ 4,000 ಉದ್ಯೋಗವನ್ನು ಸೃಷ್ಟಿ ಮಾಡಲು ಸಹಾಯಕವಾಗಲಿದೆ," ಎಂದು ಸುನಕ್ ತಿಳಿಸಿದ್ದಾರೆ.
4. "ಭಾರತದಿಂದ ಹೊರಭಾಗದಲ್ಲಿನ ಟಾಟಾ ಗ್ರೂಪ್‌ನ ಗಿಗಾಫ್ಯಾಕ್ಟರಿಯನ್ನು ಸ್ಥಾಪಿಸಲು ಗಿಗಾಫ್ಯಾಕ್ಟರಿಯನ್ನು ಆಯ್ಕೆ ಮಾಡಿರುವುದಕ್ಕೆ ನನಗೆ ಹೆಮ್ಮೆಯಿದೆ. ಈ ಮೂಲಕ ಎಲೆಕ್ಟ್ರಾನಿಕ್ ವಾಹನಗಳಿಗೆ ನಮ್ಮ ದೇಶವು ಎಂದಿಗೂ ಆಕರ್ಷಕ ಸ್ಥಳವಾಗಿ ಉಳಿಯಲಿದೆ," ಎಂದು ಬ್ರಿಟಿಚ್ ಪ್ರಧಾನ ಮಂತ್ರಿ ಸುನಕ್ ಹೇಳಿದ್ದಾರೆ.
5. ಯುಕೆಯ ಆಟೋ ಇಂಡಸ್ಟ್ರೀಯಲ್ಲಿ ಹಿಂದೆಂದಿಗಿಂತಲೂ ಅಧಿಕ ಮೊತ್ತದ ಹೂಡಿಕೆ ಇದಾಗಲಿದೆ. ಈ ಹೊಸ ಫಾಕ್ಟರಿಯಿಂದಾಗಿ 4000 ಉದ್ಯೋಗ ಸೃಷ್ಟಿಯಾಗಲಿದೆ. ಸರಬರಾಜು ಕ್ಷೇತ್ರವನ್ನು ಕೂಡಾ ವಿಸ್ತರಣೆ ಮಾಡಲಿದೆ.
6. ಗಿಗಾಫ್ಯಾಕ್ಟರಿಯು ಯುಕೆ-ಉತ್ಪಾದಿತ ಬ್ಯಾಟರಿಗಳನ್ನು ಜೆಎಲ್‌ಆರ್ ಮತ್ತು ಯುಕೆ, ಯುರೋಪ್‌ನ ಇತರ ತಯಾರಕರನ್ನು ಸುರಕ್ಷಿತಗೊಳಿಸುತ್ತದೆ.
7. "ನಮ್ಮ ಬಹು ಕೋಟಿ ಪೌಂಡ್ ಹೂಡಿಕೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ದೇಶಕ್ಕೆ ತರುತ್ತದೆ. ನಮ್ಮ ಸ್ವಂತ ವ್ಯವಹಾರವಾದ ಜೆಎಲ್‌ಆರ್‌ನಿಂದ ಆಧಾರವಾಗಿರುವ ಎಲೆಕ್ಟ್ರಿಕ್ ವಲಯದ ಪರಿವರ್ತನೆಗೆ ಶಕ್ತಿ ತುಂಬಲು ಸಹಾಯವಾಗಲಿದೆ," ಎಂದು ಟಾಟಾ ಸನ್ಸ್‌ನ ಚೇರ್‌ಮನ್ ಎನ್ ಚಂದ್ರಶೇಖರನ್ ಹೇಳಿದ್ದಾರೆ.
8. "ಈ ಹೂಡಿಕೆ ಮೂಲಕ ಯುಕೆ ಮೇಲಿನ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಹಾಗೆಯೆ ನಮ್ಮ ತಂತ್ರಜ್ಞಾನ, ಗ್ರಾಹಕ, ಆತಿಥ್ಯ, ಉಕ್ಕು, ರಾಸಾಯನಿಕಗಳು ಮತ್ತು ವಾಹನ ವಲಯದ ಬೆಳೆವಣಿಗೆ ಸಹಾಯಕವಾಗಲಿದೆ," ಎಂದು ಕೂಡ ಎನ್ ಚಂದ್ರಶೇಖರನ್ ತಿಳಿಸಿದ್ದಾರೆ.
10. ಒಪ್ಪಂದದ ಭಾಗವಾಗಿ ಟಾಟಾ ಗ್ರೂಪ್‌ಗೆ ಒದಗಿಸಲಾದ ಸರ್ಕಾರದ ಪ್ರೋತ್ಸಾಹ ಮತ್ತು ಬೆಂಬಲದ ವಿವರಗಳನ್ನು ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುವುದು ಎಂದು ವ್ಯವಹಾರ ಮತ್ತು ವ್ಯಾಪಾರ ಇಲಾಖೆ (ಡಿಬಿಟಿ) ಹೇಳಿದೆ.


Click it and Unblock the Notifications