ಕಾರು ಕೊಂಡುಕೊಳ್ಳಲು ತಯಾರಿ ನಡೆಸುವವರಿಗೆ ಬೇಸರದ ಸುದ್ದಿ. ಭಾರತದ ಅತಿದೊಡ್ಡ ವಾಣಿಜ್ಯ ವಾಹನ (Vehicle) ತಯಾರಕರಾದ ಟಾಟಾ ಮೋಟಾರ್ಸ್ ಏಪ್ರಿಲ್ 1, 2025 ರಿಂದ ತನ್ನ ವಾಣಿಜ್ಯ ವಾಹನಗಳ ಬೆಲೆಯನ್ನು ಶೇಕಡ 2ರಷ್ಟು ಏರಿಕೆ ಮಾಡುವುದಾಗಿ ತಿಳಿಸಿದೆ.ವರ್ಷ ಎರಡನೇ ಬಾರಿಗೆ ವಿದ್ಯುತ್ ಚಾಲಿತ ವಾಹನಗಳು ಸೇರಿದಂತೆ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಏರಿಕೆ ಮಾಡಿರುವುದಾಗಿ ಹೇಳಿದೆ.
ಹೌದು, ಏಪ್ರಿಲ್ 1ರಿಂದ ವಾಣಿಜ್ಯ ವಾಹನಗಳ ಬೆಲೆಯನ್ನು ಶೇ 2ರಷ್ಟು ಹೆಚ್ಚಳ ಮಾಡುವುದಾಗಿ ಟಾಟಾ ಮೋಟರ್ಸ್ ಮಾಹಿತಿಯನ್ನು ತಿಳಿಸಿದೆ.

ಹೆಚ್ಚುತ್ತಿರುವ ತಯಾರಿಕಾ ಮತ್ತು ಕಾರ್ಯಾಚರಣೆ ವೆಚ್ಚಗಳಲ್ಲಿ ಉಂಟಾಗಿರುವ ಏರಿಕೆಯನ್ನು ಸರಿದೂಗಿಸಲು ಈ ಬೆಲೆ ಏರಿಕೆ ಮಾಡಲಾಗುತ್ತಿದೆ. ದರ ಏರಿಕೆಯು ವಾಹನದ ಮಾದರಿಯ ಮೇಲೆ ಅವಲಂಬಿಸಿರುತ್ತದೆ ಎಂದು ಕಂಪನಿ
ಭಾರತೀಯ ಷೇರು ಮಾರುಕಟ್ಟೆಗೆ ಸೋಮವಾರ ಮಾಹಿತಿಯನ್ನು ತಿಳಿಸಿದೆ.
ಮುಂಬೈ ಮೂಲದ ವಾಹನ ತಯಾರಕ ಕಂಪೆನಿಯಾದ ಟಾಟಾದಿಂದ ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ, ಪಂಚ್ ಮತ್ತು ಹ್ಯಾರಿಯರ್‌ನಂತಹ ವಿವಿಧ ಮಾದರಿಗಳನ್ನು ಮಾರಾಟ ಮಾಡಲಾಗುತ್ತದೆ. ಪ್ರಸ್ತಾವಿತ ಬೆಲೆ ಏರಿಕೆಯ ಪ್ರಮಾಣವನ್ನು ಕಂಪನಿಯು ವಿವರಿಸಿಲ್ಲ.
ಈ ವರ್ಷದ ಜನವರಿಯಲ್ಲಿ ಕಂಪನಿಯು ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಿತ್ತು. ಟಾಟಾ ಮೋಟಾರ್ಸ್ ಹ್ಯಾಚ್‌ಬ್ಯಾಕ್ ಟಿಯಾಗೊದಿಂದ 5 ಲಕ್ಷದಿಂದ 25.09 ಲಕ್ಷದವರೆಗಿನ (ಎಕ್ಸ್-ಶೋರೂಂ ದೆಹಲಿ) ಬೆಲೆಯ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಹಲವಾರು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುತ್ತದೆ.
ಮಾರುತಿ ಸುಜುಕಿ ಬೆಲೆ ಕೂಡ ಏರಿಕೆ
ಮಾರುತಿ ಸುಜುಕಿ ಸಂಸ್ಥೆಯು, ಏಪ್ರಿಲ್ 1 ರಿಂದ ತನ್ನ ಎಲ್ಲಾ ವಾಹನಗಳ ಬೆಲೆಯನ್ನು 4% ರಷ್ಟು ಹೆಚ್ಚಿಸುವುದಾಗಿ ತಿಳಿಸಿದೆ. ಈ ಬಗ್ಗೆ ಸೋಮವಾರ ಪ್ರಕಟಣೆ ಹೊರಡಿಸಿದ್ದು ಇದರ ಪರಿಣಾಮವಾಗಿ, ಮಾರುತಿ ಸುಜುಕಿ ಷೇರು ಮಾರುಕಟ್ಟೆಯಲ್ಲಿ 2% ರಷ್ಟು ಏರಿಕೆ ಕಂಡಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳು ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣಗಳಾಗಿವೆ ಎಂದು ಕಂಪನಿ ಹೇಳಿದೆ.
ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಯಲ್ಲಿ ಆರಂಭಿಕ ಹಂತದ ಆಲ್ಟೊ ಕೆ10 ನಿಂದ ಹಿಡಿದು ಬಹುಪಯೋಗಿ ವಾಹನ ಇನ್ವಿಕ್ಟೊ ವರೆಗಿನ ಮಾದರಿಗಳನ್ನು ಮಾರಾಟ ಮಾಡುತ್ತದೆ. ವಾಹನದ ಮಾದರಿಯನ್ನು ಅವಲಂಬಿಸಿ ಬೆಲೆ ಏರಿಕೆಯ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಕಂಪನಿಯು ತನ್ನ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಗ್ರಾಹಕರ ಮೇಲೆ ಬೀಳುವ ಹೊರೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಆದರೂ, ವೆಚ್ಚ ಹೆಚ್ಚಾದ ಕಾರಣ ಬೆಲೆಯ ಸ್ವಲ್ಪ ಭಾಗವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ. ಆಟೋಮೊಬೈಲ್ ಉದ್ಯಮವು ಹಣದುಬ್ಬರದ ಒತ್ತಡಗಳು, ಹೆಚ್ಚಿದ ಕಚ್ಚಾ ವಸ್ತುಗಳ ವೆಚ್ಚಗಳು ಮತ್ತು ಹೆಚ್ಚಿದ ಲಾಜಿಸ್ಟಿಕ್ಸ್ ವೆಚ್ಚಗಳೊಂದಿಗೆ ಹೋರಾಡುತ್ತಿರುವಾಗ ಮಾರುತಿ ಸುಜುಕಿಯಿಂದ ಈ ಹೇಳಿಕೆ ಬಂದಿದೆ
ಮಾರುತಿ ಸುಜುಕಿ ಇಂಡಿಯಾ ನಿಯಂತ್ರಕ ದಾಖಲೆಯಲ್ಲಿ, ಹೆಚ್ಚುತ್ತಿರುವ ಒಳಹರಿವಿನ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳ ಕಾರಣದಿಂದಾಗಿ ಏಪ್ರಿಲ್‌ನಿಂದ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಲು ಯೋಜಿಸಿದೆ ಎಂದು ಹೇಳಿದೆ. ಬೆಲೆ ಹೆಚ್ಚಳವು ಕಾರು ಮಾಡಲ್ ಗಳನ್ನು ಅವಲಂಬಿಸಿ ಬದಲಾಗುತ್ತದೆ. ಕಂಪನಿಯು ನಿರಂತರವಾಗಿ ವೆಚ್ಚವನ್ನು ಉತ್ತಮಗೊಳಿಸಲು ಮತ್ತು ಗ್ರಾಹಕರ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ, ಆದರೆ ಹೆಚ್ಚಿದ ವೆಚ್ಚದ ಒಂದು ಭಾಗವನ್ನು ಮಾರುಕಟ್ಟೆಗೆ ವರ್ಗಾಯಿಸಬೇಕಾಗುತ್ತದೆ ಎಂದು ಕಂಪನಿ ಹೇಳಿದೆ.


Click it and Unblock the Notifications