ತನ್ನ ಉದ್ಯೋಗಿಗಳಿಗೆ VRS ಯೋಜನೆಯ ಆಫರ್ ನೀಡಿದ ಟಾಟಾ ಮೋಟಾರ್ಸ್

ಭಾರತದ ಅತಿದೊಡ್ಡ ವಾಹನ ತಯಾರಕರಲ್ಲಿ ಒಂದಾದ ಟಾಟಾ ಮೋಟಾರ್ಸ್ ತನ್ನ 42,597 ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ (VRS) ಆಫರ್ ನೀಡಿದೆ.

ಟಾಟಾ ಮೋಟಾರ್ಸ್‌ ತನ್ನ ವಹಿವಾಟು ಕಾರ್ಯತಂತ್ರದ ಭಾಗವಾಗಿ ತನ್ನ ಉದ್ಯೋಗಿಗಳಿಗೆ ವಿಆರ್‌ಎಸ್ ಆಫರ್ ನೀಡಿದ್ದು, ಒಟ್ಟು ಉದ್ಯೋಗಿಗಳಲ್ಲಿ ಅರ್ಧದಷ್ಟು ಜನರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಕಂಪನಿಯು ತನ್ನ ನಿಗದಿತ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿಗೆ ವಿಆರ್‌ಎಸ್ ಆಫರ್ ನೀಡಿದೆ. ಜೊತೆಗೆ ಅರ್ಹತಾ ಮಾನದಂಡಗಳನ್ನು ಕೂಡ ತಿಳಿಸಿದ್ದು, ಕಂಪನಿಯಲ್ಲಿ ಐದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಎಕನಾಮಿಕ್‌ ಟೈಮ್ಸ್ ವರದಿ ಮಾಡಿದೆ.

ತನ್ನ ಉದ್ಯೋಗಿಗಳಿಗೆ VRS ಯೋಜನೆಯ ಆಫರ್ ನೀಡಿದ ಟಾಟಾ ಮೋಟಾರ್ಸ್

ವಿಆರ್‌ಎಸ್ ಯೋಜನೆಯು ಉದ್ಯೋಗಿಯ ವಯಸ್ಸು ಮತ್ತು ಕಂಪನಿಯಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿದ್ದಾನೆ ಎಂಬುದನ್ನು ಅವಲಂಬಿಸಿರುತ್ತದೆ. ಅರ್ಹ ಉದ್ಯೋಗಿಗಳು ಡಿಸೆಂಬರ್ 11ರಿಂದ ಜನವರಿ 9ರವರೆಗೆ ಅರ್ಜಿ ಸಲ್ಲಿಸಬಹುದು.

ಇದಕ್ಕೂ ಮುನ್ನ, ಟಾಟಾ ಮೋಟಾರ್ಸ್ 2019 ರ ನವೆಂಬರ್‌ನಲ್ಲಿ ತನ್ನ ಪ್ರಯಾಣಿಕ ವಾಹನದ ಜೊತೆಗೆ ವಾಣಿಜ್ಯ ವಾಹನ ವ್ಯವಹಾರಗಳಲ್ಲಿ ವ್ಯಾಪಿಸಿರುವ ವಿವಿಧ ಇಲಾಖೆಗಳ 1,600 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ವಿಆರ್‌ಎಸ್ ನೀಡಿತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+