ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್ ತನ್ನ ವಾಣಿಜ್ಯ ವಾಹನಗಳ ಗ್ರಾಹಕರಿಗೆ ಆಕರ್ಷಕ ಡಿಜಿಟಲ್ ಹಣಕಾಸು ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಖಾಸಗಿ ಕ್ಷೇತ್ರದ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಟಾಟಾ ಮೋಟರ್ಸ್‌ನ ವಾಣಿಜ್ಯ ವಾಹನಗಳ ಗ್ರಾಹಕರಿಗೆ ಹಣಕಾಸು ಸೌಲಭ್ಯವನ್ನು ಹೆಚ್ಚಿಸಲು ಈ ಸಹಭಾಗಿತ್ವ ಇನ್ನಷ್ಟು ಪರಿಣಾಮಕಾರಿಯಾಗಲಿದೆ. ಈ ಪಾಲುದಾರಿಕೆಯಡಿ ಟಾಟಾ ಮೋಟರ್ಸ್ ಗ್ರಾಹಕರು ಟಾಟಾ ಮೋಟರ್ಸ್‌ನ ಆನ್‌ಲೈನ್ ಸೇಲ್ಸ್ ಪ್ಲಾಟ್ ಫಾರ್ಮ್ ಮತ್ತು ಟಾಟಾ ಇ-ಗುರು ಮೊಬೈಲ್ ಅಪ್ಲಿಕೇಶನ್ ಪ್ಲಾಟ್ ಫಾರ್ಮ್ ಮೂಲಕ ತಡೆರಹಿತವಾಗಿ ಎಚ್fಡಿಎಫ್‌ಸಿ ಬ್ಯಾಂಕ್ ವಾಹನ ಹಣಕಾಸು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಹಣಕಾಸು ಸೇವೆಗಳ ಏಕೀಕರಣವು ಸುವ್ಯವಸ್ಥಿತವಾದ ಪ್ರಕ್ರಿಯೆಯನ್ನು ಖಾತರಿಪಡಿಸುತ್ತದೆ. ಗ್ರಾಹಕರು ತಮ್ಮ ಆದ್ಯತೆಯ ಹಣಕಾಸು ಪೂರೈಕೆದಾರರನ್ನು ತಮ್ಮ ಅಗತ್ಯತೆಗಳಿಗೆ ತಕ್ಕಂತೆ ಆಯ್ಕೆ ಮಾಡಲು ಇದು ಅನುವು ಮಾಡಿಕೊಡುತ್ತದೆ.
ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ಟಾಟಾ ಮೋಟರ್ಸ್‌ನ ಉಪಾಧ್ಯಕ್ಷ ಮತ್ತು ಟ್ರಕ್ಸ್ ವಿಭಾಗದ ಬ್ಯುಸಿನೆಸ್ ಹೆಡ್ ರಾಜೇಶ್ ಕೌಲ್ ಅವರು, "ಗ್ರಾಹಕ ಕೇಂದ್ರಿತ ಕಂಪನಿಯಾಗಿರುವ ನಾವು ಎಚ್ ಡಿಎಫ್ ಸಿಯನ್ನು ಟಾಟಾ ಮೋಟರ್ಸ್ ಆನ್ ಲೈನ್ ಸೇಲ್ಸ್ ಪ್ಲಾಟ್ ಫಾರ್ಮ್ ಮತ್ತು ಇ-ಗುರು ನಲ್ಲಿ ತರುತ್ತಿರುವುದಕ್ಕೆ ಸಂತಸವೆನಿಸುತ್ತಿದೆ," ಎಂದು ಹೇಳಿದ್ದಾರೆ.
"ಈ ಮೂಲಕ ನಮ್ಮ ಗ್ರಾಹಕರಿಗೆ ಸುಲಭ ಮತ್ತು ಸರಳವಾದ ಹಣಕಾಸು ಆಯ್ಕೆಗಳನ್ನು ಪೂರೈಸಲಿದ್ದೇವೆ. ಈ ಪಾಲುದಾರಿಕೆಯು ನವೀನ ಮಾದರಿಯ ಡಿಜಿಟಲ್ ಪರಿಹಾರಗಳ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸುವ ನಮ್ಮ ಬದ್ಧತೆಗೆ ಹೊಂದಿಕೆಯಾಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪರಿಣತಿ ಮತ್ತು ವ್ಯಾಪ್ತಿಯನ್ನು ಸಂಯೋಜಿಸುವುದರೊಂದಿಗೆ ನಮ್ಮ ಗ್ರಾಹಕರಿಗೆ ಅನನ್ಯವಾದ ಅಗತ್ಯತೆಗಳಿಗೆ ಹೊಂದಾಣಿಕೆಯಾಗುವ ಹಣಕಾಸಿನ ಆಯ್ಕೆಗಳ ಶ್ರೇಣಿಯೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ," ಎಂದು ತಿಳಿಸಿದರು.
"ಅಲ್ಲದೇ, ಉತ್ಪನ್ನ ಕೊಡುಗೆಗಳು ಮತ್ತು ಗ್ರಾಹಕ ಸೇವೆ ಎರಡರಲ್ಲಿಯೂ ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳುವ ನಮ್ಮ ಬದ್ಧತೆಯಲ್ಲಿ ಈ ಸಹಯೋಗವು ನಿರ್ಣಾಯಕ ಹಂತವಾಗಿದೆ," ಎಂದು ಕೂಡಾ ಟಾಟಾ ಮೋಟರ್ಸ್‌ನ ಉಪಾಧ್ಯಕ್ಷ ಮತ್ತು ಟ್ರಕ್ಸ್ ವಿಭಾಗದ ಬ್ಯುಸಿನೆಸ್ ಹೆಡ್ ರಾಜೇಶ್ ಕೌಲ್ ಮಾಹಿತಿ ನೀಡಿದರು.
ಇನ್ನು ಈ ಬಗ್ಗೆ ಮಾತನಾಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಾಣಿಜ್ಯ ವಾಹನ ಸಮೂಹ ವಿಭಾಗದ ಕಾರ್ಯಕಾರಿ ಉಪಾಧ್ಯಕ್ಷ ಬಾಲಾಜಿ ವರ್ಮಾ, "ಟಾಟಾ ಮೋಟರ್ಸ್‌ನ ವಾಣಿಜ್ಯ ವಾಹನಗಳ ಗ್ರಾಹಕರಿಗೆ ಆಕರ್ಷಕ ಡಿಜಿಟಲ್ ಹಣಕಾಸು ಪರಿಹಾರಗಳನ್ನು ನೀಡಲು ನಾವು ಟಾಟಾ ಮೋಟರ್ಸ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ," ಎಂದು ತಿಳಿಸಿದರು.
"ಗ್ರಾಹಕರ ವೈವಿಧ್ಯಮಯ ಅಗತ್ಯತೆಗಳನ್ನು ಪೂರೈಸಲು ನಮ್ಮ ಪರಿಹಾರಗಳನ್ನು ನಿಖರವಾಗಿ ವೈಯಕ್ತೀಕರಣ ಮಾಡಲಾಗಿದೆ. ಸೂಕ್ತವಾದ ಮತ್ತು ತಡೆರಹಿತವಾದ ವಾಹನ ಖರೀದಿ ಅನುಭವವನ್ನು ಖಾತರಿಪಡಿಸುತ್ತದೆ. ವಾಹನ ಫೈನಾನ್ಸಿಂಗ್ ಗೆ ಸುಲಭವಾಗಿ ಪ್ರವೇಶ ಪಡೆಯಲು ಗ್ರಾಹಕರಿಗೆ ಅಪಾರವಾದ ಪ್ರಯೋಜನಕಾರಿಯಾಗಿದೆ ಎಂಬುದನ್ನು ನಾವು ಪ್ರಶಂಸಿಸುತ್ತೇವೆ ಮತ್ತು ವಾಹನ ಹಣಕಾಸು ಅನುಭವವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ," ಎಂದು ಹೇಳಿದರು.
ಈ ಕಾರ್ಯತಂತ್ರದ ಸಹಭಾಗಿತ್ವವು ಬಸ್‌ಗಳು, ಟ್ರಕ್‌ಗಳು ಮತ್ತು ಸಣ್ಣ ವಾಣಿಜ್ಯ ವಾಹನಗಳು ಹಾಗೂ ಪಿಕಪ್‌ಗಳು ಸೇರಿದಂತೆ ಟಾಟಾ ಮೋಟರ್ಸ್ ನೀಡುವ ಎಲ್ಲಾ ಬಗೆಯ ವಾಣಿಜ್ಯ ವಾಹನಗಳಿಗೆ ಹಣಕಾಸು ಪರಿಹಾರಗಳನ್ನು ನೀಡುತ್ತದೆ.
ಟಾಟಾ ಮೋಟರ್ಸ್ ತನ್ನ ಗ್ರಾಹಕರ ವಿಕಾಸದ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಪೂರೈಸಲು ಸಮರ್ಪಿತವಾಗಿದೆ. ಉತ್ಪನ್ನಗಳು ಮತ್ತು ಸೇವೆಗಳ ವಿಷಯದಲ್ಲಿ ಮಾತ್ರವಲ್ಲದೇ ಹಣಕಾಸಿನ ನೆರವಿನ ದೃಷ್ಟಿಕೋನದಿಂದ ಅವರ ಅಗತ್ಯತೆಗಳನ್ನು ನಿರ್ಣಯ ಮಾಡುವ ವಿಚಾರದಲ್ಲಿಯೂ ಕಂಪನಿಯು ಗ್ರಾಹಕರಿಗೆ ನೆರವಾಗಲಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications