ಟಾಟಾ ಮೋಟಾರ್ಸ್ ನಾಲ್ಕನೇ ತ್ರೈಮಾಸಿಕ ವರದಿ: ಒಟ್ಟು ನಿವ್ವಳ ನಷ್ಟ 7,605 ಕೋಟಿ ರೂಪಾಯಿ
ಪ್ರಮುಖ ವಾಹನ ತಯಾರಕ ಟಾಟಾ ಮೋಟಾರ್ಸ್ ಮಾರ್ಚ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 7,605 ಕೋಟಿ ರೂಪಾಯಿ ಒಟ್ಟು ನಿವ್ವಳ ನಷ್ಟ ವರದಿ ಮಾಡಿದೆ.
ಬ್ಲೂಮ್‌ಬರ್ಗ್‌ನ ಅಂದಾಜಿನ ಪ್ರಕಾರ, ಟಾಟಾ ಮೋಟಾರ್ಸ್ ನಿವ್ವಳ ಲಾಭ 2,774.10 ಕೋಟಿ ರೂ. ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ 87,517.8 ಕೋಟಿ ರೂ. ಆದಾಯಗಳಿಕೆಯನ್ನು ಅಂದಾಜಿಸಲಾಗಿತ್ತು.

ಐಷಾರಾಮಿ ಕಾರು ತಯಾರಕ ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆ ಜೆಎಲ್‌ಆರ್ ಒಟ್ಟಾರೆಯಾಗಿ, ಜೆಎಲ್‌ಆರ್‌ಗೆ ಸಂಬಂಧಿಸಿದ ನಾಲ್ಕನೇ ತ್ರೈಮಾಸಿಕದ ಅಸಾಧಾರಣ ನಷ್ಟವು ಸುಮಾರು 15,000 ಕೋಟಿ ರೂ. ತಲುಪಿದೆ.
ಕಂಪನಿಯು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 9,894.25 ಕೋಟಿ ರೂ. ಮತ್ತು 2020 ರ ಮೂರನೇ ತ್ರೈಮಾಸಿಕದಲ್ಲಿ 2,906.45 ಕೋಟಿ ರೂ. ಲಾಭ ವರದಿ ಮಾಡಿತ್ತು. ಸಿಎನ್‌ಬಿಸಿ-ಟಿವಿ 18 ಸಮೀಕ್ಷೆ ನಡೆಸಿದ ವಿಶ್ಲೇಷಕರ ಅಂದಾಜಿನ ಪ್ರಕಾರ ತ್ರೈಮಾಸಿಕದಲ್ಲಿ 88,109 ಕೋಟಿ ರೂ.ಗಳ ಆದಾಯದ ಮೇಲೆ ಲಾಭವನ್ನು 2,721 ಕೋಟಿ ರೂ. ವರದಿ ಮಾಡಿತ್ತು.


Click it and Unblock the Notifications