1 ಲಕ್ಷ ರುಪಾಯಿಯ ಕಾರು ಎಂದೇ ಖ್ಯಾತಿ ಪಡೆದಿದ್ದ ಟಾಟಾ ನ್ಯಾನೋ ಕಾರು ಕಳೆದ ವರ್ಷ ಉತ್ಪಾದನೆ ಶೂನ್ಯವಾಗಿದ್ದು, ಮಾರಾಟವಾಗಿದ್ದು ಕೇವಲ ಒಂದು ನ್ಯಾನೋ ಕಾರು.
ಕಳೆದ ವರ್ಷ ಟಾಟಾ ನ್ಯಾನೋ ಕಾರು ಉತ್ಪಾದನೆಯನ್ನು ಶೂನ್ಯಕ್ಕೆ ಇಳಿಸಿದ್ದ ಟಾಟಾ ಮೋಟಾರ್ಸ್ ಒಂದು ಕಾರನ್ನು ಉತ್ಪಾದನೆ ಮಾಡಲಿಲ್ಲ. ಈ ಹಿಂದೆ ಉತ್ಪಾದನೆ ಮಾಡಲಾಗಿದ್ದ ಕಾರಿನಲ್ಲಿ ಮಾರಾಟವಾಗಿದ್ದು ಮಾತ್ರ ಒಂದೇ ಒಂದು ಕಾರು ಎಂದು 'ಫಸ್ಟ್ ಪೋಸ್ಟ್' ವರದಿ ಮಾಡಿದೆ.

ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ''2019 ರ ಡಿಸೆಂಬರ್ನಲ್ಲಿ ಒಂದೇ ಒಂದು ಟಾಟಾ ನ್ಯಾನೋ ಕಾರು ಉತ್ಪಾದಿಸಲ್ಲ. ಆದರೆ 2018ರ ಡಿಸೆಂಬರ್ನಲ್ಲಿ 82 ಕಾರು ಉತ್ಪಾದಿಸಿ 88 ಕಾರು ಮಾರಾಟ ಮಾಡಲಾಗಿದೆ. ಅದೇ ವರ್ಷದಲ್ಲಿ 66 ಕಾರು ತಯಾರಿಸಿ 77 ಕಾರು ಮಾರಾಟ ಮಾಡಲಾಗಿದೆ'' ಎಂದು ತಿಳಿಸಿದೆ.
2019ರ ಮೊದಲ 9 ತಿಂಗಳಿನಲ್ಲಿ ಒಂದೇ ಒಂದು ನ್ಯಾನೋ ಕಾರನ್ನು ಉತ್ಪಾದಿಸಲಾಗಿಲ್ಲ. ಕಳೆದ ವರ್ಷದ ಫೆಬ್ರವರಿಯಲ್ಲಿ ಒಂದು ಕಾರನ್ನು ಮಾರಾಟ ಮಾಡಿದ್ದು ಬಿಟ್ಟರೆ ಮತ್ಯಾವುದೇ ಮಾರಾಟ ನಡೆದಿಲ್ಲ. ಇದರ ಹೊರತಾಗಿಯೂ ನ್ಯಾನೊ ಕಾರು ಉತ್ಪಾದನೆ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ಇದುವರೆಗೂ ಪ್ರಕಟಿಸಲಾಗಿಲ್ಲ.
'ಜನರ ಕಾರು' ಎಂದೇ ಹೆಸರು ಕೊಟ್ಟು 2008ರಲ್ಲಿ ಟಾಟಾ ಮೋಟಾರ್ಸ್ ನ್ಯಾನೋ ಕಾರನ್ನು ಅನಾವರಣಗೊಳಿಸಿ 2009 ರಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು. 1 ಲಕ್ಷ ರುಪಾಯಿ ಕಾರು ಎಂದೇ ಖ್ಯಾತಿ ಪಡೆದಿದ್ದ ನ್ಯಾನೋ ಕಾರು ಹೆಸರು ಮಾಡಿತೇ ಹೊರತು ನಂತರದ ವರ್ಷಗಳಲ್ಲಿ ಮಾರಾಟದಲ್ಲಿ ಹಿನ್ನಡೆ ಅನುಭವಿಸಿತು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!



Click it and Unblock the Notifications