For Quick Alerts
ALLOW NOTIFICATIONS  
For Daily Alerts

ಟಾಟಾ ಸಫಾರಿ ಹೊಸ ಎಸ್‌ಯುವಿ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು?

|

ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಟಾಟಾ ಸಫಾರಿಯನ್ನು ಬಿಡುಗಡೆ ಮಾಡಿದೆ. ಹೊಸ ಮಾದರಿಯಲ್ಲಿ ಹಾಗೂ ಹೊಸ ವಿನ್ಯಾಸದೊಂದಿಗೆ ಮತ್ತು ಬಲಿಷ್ಠ ಎಂಜಿನ್ ಸಾಮರ್ಥ್ಯದ ಎಸ್‌ಯುವಿಯನ್ನು ಟಾಟಾ ಮೋಟಾರ್ಸ್ ಭಾರತದಲ್ಲಿ ಬಿಡುಗಡೆಗೊಳಿಸಿದೆ.

2021ರ ಸಫಾರಿ ಆವೃತ್ತಿಯು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರಿನ ಬೆಲೆ ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14.69 ಲಕ್ಷ ರೂಪಾಯಿ ಮತ್ತು ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದೆ.

ಟಾಟಾ ಸಫಾರಿ ಹೊಸ ಎಸ್‌ಯುವಿ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು?

 

ಈ ಕಾರನ್ನು ಆರು ವಿಭಿನ್ನ ಟ್ರಿಮ್‌ಗಳಲ್ಲಿ ಮತ್ತು ಒಟ್ಟು ಹನ್ನೊಂದು ರೂಪಾಂತರಗಳಲ್ಲಿ ನೀಡಲಾಗುವುದು. ರಾಯಲ್ ಬ್ಲೂ, ಓರ್ಕಸ್ ವೈಟ್ ಮತ್ತು ಡೇಟೋನಾ ಗ್ರೇ ಅನ್ನು ಒಳಗೊಂಡಿರುವ ಸ್ಟ್ಯಾಂಡರ್ಡ್ ರೂಪಾಂತರಕ್ಕಾಗಿ ಈ ಕಾರನ್ನು ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಆಸಕ್ತ ಖರೀದಿದಾರರು 30,000 ರೂಪಾಯಿ ಪಾವತಿಸಿ ಹೊಸ ಸಫಾರಿ ಬುಕ್ ಮಾಡಬಹುದು.

ಕಡಿಮೆ ಬೆಲೆಯ ಕಾಂಪ್ಯಾಕ್ಟ್‌ ಎಸ್‌ಯುವಿ: ಟಾಪ್ 5 ಕಾರುಗಳ ಬೆಲೆ ಇಲ್ಲಿದೆ

ಟಾಟಾ ಮೋಟಾರ್ಸ್ ಮಾರಾಟಗಾರರ ಮೂಲಕ ಮತ್ತು ಅಧಿಕೃತ ಆನ್‌ಲೈನ್ ಸೈಟ್ ಮೂಲಕ ಬುಕಿಂಗ್ ಮಾಡಬಹುದು. ಕಾರುಗಳ ವಿವಿಧ ಮಾದರಿ ಆರಂಭಿಕ ಬೆಲೆ ಈ ಕೆಳಗಿನಂತಿದೆ.

ಎಕ್ಸ್ ಇ : 14.69 ಲಕ್ಷ ರೂಪಾಯಿ

ಎಕ್ಸ್ ಎಂ : 16 ಲಕ್ಷ ರೂಪಾಯಿ

ಎಕ್ಸ್‌ ಟಿ: 17.45 ಲಕ್ಷ ರೂಪಾಯಿ

ಎಕ್ಸ್‌ಟಿ ಪ್ಲಸ್‌: 18.25 ಲಕ್ಷ ರೂಪಾಯಿ

ಎಕ್ಸ್‌ಜೆಡ್‌ : 19.15 ಲಕ್ಷ ರೂಪಾಯಿ

ಎಕ್ಸ್‌ಜೆಡ್‌ ಪ್ಲಸ್‌: 19.99 ಲಕ್ಷ ರೂಪಾಯಿ

ಎಕ್ಸ್‌ಜೆಡ್‌ ಪ್ಲಸ್‌ (ಅಡ್ವೆಂಚರ್): 20.20 ಲಕ್ಷ ರೂಪಾಯಿ

English summary

2021 Tata Safari launched in India, price starts at Rs 14.69 lakh

Tata motors has finally launched the new Tata Safari in India. The company has introduced the SUV at an introductory price of Rs 14.69 lakh
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X