For Quick Alerts
ALLOW NOTIFICATIONS  
For Daily Alerts

Tats Steel ಟಾಟಾ ಸ್ಟೀಲ್ ಉದ್ಯೋಗಿ ಕೊರೊನಾದಿಂದ ಮೃತಪಟ್ಟರೆ 60 ವರ್ಷದವರೆಗೆ ವೇತನ!

|

ದೇಶದಲ್ಲಿ ಕೋವಿಡ್-19 ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಪ್ರತಿದಿನ ನಾಲ್ಕು ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಟಾ ಸ್ಟೀಲ್ ತನ್ನ ನೌಕರರ ಮತ್ತು ಅವರ ಕುಟುಂಬದ ಸಾಮಾಜಿಕ ಸುರಕ್ಷತೆಗೆ ವಿಶೇಷ ಯೋಜನೆಯನ್ನು ಘೋಷಣೆ ಮಾಡಿದೆ.

 

ಕೋವಿಡ್-19 ಮಹಾಮಾರಿಯಿಂದ ಮೃತಪಟ್ಟ ಕಂಪನಿಯ ಉದ್ಯೋಗಿಯ ಕುಟುಂಬಕ್ಕೆ ಮುಂದಿನ 60 ವರ್ಷದ ತನಕ ವೇತನ ನೀಡಲು ಸಂಸ್ಥೆ ನಿರ್ಧರಿಸಿದೆ. ಈ ಕುರಿತು ಟಾಟಾ ಸ್ಟೀಲ್ ಅಧಿಕೃತವಾಗಿ ಪ್ರಕಟಿಸಿದೆ.

 
ಟಾಟಾ ಸ್ಟೀಲ್ ಉದ್ಯೋಗಿ ಕೊರೊನಾದಿಂದ ಮೃತಪಟ್ಟರೆ 60 ವರ್ಷದವರೆಗೆ ವೇತನ!

''ಕಂಪನಿಯ ನೌಕರರ ಸಾಮಾಜಿಕ ಸುರಕ್ಷೆಗಾಗಿ ನೆರವು ನೀಡಲು ಎಲ್ಲಾ ಪ್ರಯತ್ನ ಮಾಡಲಿದ್ದು, ಟಾಟಾ ಸ್ಟೀಲ್ ಕುಟುಂಬವು ತನ್ನ ಎಲ್ಲ ಜನರೊಂದಿಗೆ ದೃಢವಾಗಿ ನಿಂತಿದೆ, ಅವರ ಭದ್ರತೆ ಮತ್ತು ಯೋಗಕ್ಷೇಮಕ್ಕೆ ಬದ್ಧವಾಗಿದೆ" ಎಂದು ಅದು ಹೇಳಿದೆ.

ಇದರ ಜೊತೆಗೆ ಕೊರೋನಾದಿಂದ ನೌಕರ ಮೃತಪಟ್ಟರೆ ಆತನ ಕುಟುಂಬಕ್ಕೆ ಮುಂದಿನ 60 ವರ್ಷದ ತನಕ ವೇತನವನ್ನು ನೀಡಲಿದೆ. ವೇತನ ಅಷ್ಟೇ ಅಲ್ಲದೆ ಮೆಡಿಕಲ್ ಸೌಲಭ್ಯಗಳು, ಹೌಸಿಂಗ್ ಫೆಸಿಲಿಟಿ ಮತ್ತು ನೌಕರರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನೂ ಕಂಪನಿ ಭರಿಸಲಿದೆ.

Read more about: tata ಟಾಟಾ
English summary

Tata Steel Extends Social Security Schemes For Employees Affected By Covid-19

Family of the deceased Tata Steel employee/nominee will get the last drawn salary till 60 years of age
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X