ಹಣದುಬ್ಬರ ಅಪಾಯವನ್ನು ತಳ್ಳಿಹಾಕಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್, ಇತ್ತೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿರುವುದು ಹಣದುಬ್ಬರದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್, ಇಂಧನದ ಮೇಲಿನ ಅಬಕಾರಿ ಸುಂಕವನ್ನುಕೇಂದ್ರ ಸರ್ಕಾರ ಕಡಿತ ಮಾಡಿರುವುದು ಹಣದುಬ್ಬರ ನಿರ್ವಹಣೆಗೆ ಉತ್ತಮ ಪರಿಣಾಮ ಬೀರಲಿದೆ. ಹಣದುಬ್ಬರ ನಿರ್ವಹಣೆಗೆ ಸಹಕಾರಿ ಆಗಲಿದೆ ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಇತ್ತೀಚೆಗೆ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಹಲವು ರಾಜ್ಯಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಇಳಿಕೆ ಮಾಡಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ 5 ರೂ, ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಇದಾದ ಬಳಿಕ ದೇಶದಲ್ಲಿ ಸತತ ಏರಿಕೆಯಿಂದಾಗಿ ನೂರರ ಗಡಿ ದಾಟಿದ್ದ ಪೆಟ್ರೋಲ್, ಡೀಸೆಲ್ ಇಳಿಕೆ ಕಂಡಿದೆ.

"ಈಗ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದೆ. ಈ ಕಾರಣದಿಂದಾಗಿ ಹಣದುಬ್ಬರ ನಿರ್ವಹಣೆ ಸುಲಭವಾಗಲಿದೆ. ನಿಜವಾಗಿ ಹೇಳಬೇಕಾದರೆ ಇದು ಹಣದುಬ್ಬರ ನಿರ್ವಹಣೆಗೆ ಧನಾತ್ಮಕವಾಗಿ ಪರಿಣಾಮ ಬೀರಲಿದೆ," ಎಂದು ಹೇಳಿದ್ದಾರೆ.
ಆಹಾರ ಹಣದುಬ್ಬರ ನಿಯಂತ್ರಣಕ್ಕೆ ಸಹಕಾರಿ
"ಹಣದುಬ್ಬರುವು ದೀರ್ಘ ಕಾಲದವರೆಗೆ ಪೂರೈಕೆಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಆದರೆ ಈ ಬಾರಿ ಅದೃಷ್ಟವಶಾತ್ ಅದನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ. ಆಹಾರ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡಲಿದೆ," ಎಂಬುವುದನ್ನು ಶಕ್ತಿಕಾಂತ ದಾಸ್ ಒತ್ತಿ ಹೇಳಿದ್ದಾರೆ. ಆದರೂ ಹಣದುಬ್ಬರ ಇನ್ನೂ ಕೂಡಾ ಅಧಿಕವಾಗಿಯೇ ಇದೆ. ಈ ಬಗ್ಗೆ ಅಧಿಕ ಗಮನ ಹರಿಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
"ಆಹಾರ ಹಣದುಬ್ಬರವು ಮೊದಲು ಖಾದ್ಯ ತೈಲದ ಮೂಲಕ ಆರಂಭವಾಗಿದೆ. ಆ ಬಳಿಕ ಕಾಳುಗಳು ಹಾಗೂ ಇಂಧನದಲ್ಲಿ ಹಣದುಬ್ಬರ ಕಂಡು ಬಂದಿದೆ. ಆದರೆ ಸರಬರಾಜಿನ ಸಮಸ್ಯೆಯನ್ನು ಪರಿಹರಿಸಲಾಗಿದೆ. ಹಣದುಬ್ಬರ ಕಡಿಮೆ ಮಾಡಲು ಎಲ್ಲಾ ಪ್ರಯತ್ನವನ್ನು ಮಾಡಲಾಗಿದೆ. ಆದ್ದರಿಂದ ಆಹಾರ ಹಣದುಬ್ಬರ ಈಗ ನಿಯಂತ್ರದಲ್ಲಿರುವುದು ಕಂಡು ಬಂದಿದೆ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಿಂದ ಲಭ್ಯವಿರುವ ಇಂಧನದ ಬೆಲೆ ಪ್ರಕಾರ ನವೆಂಬರ್ 1 ರಂದು ಅಬಕಾರಿ ಸುಂಕ ಕಡಿತ ಮಾಡುವುದಕ್ಕೂ ಮುನ್ನ ಕೇಂದ್ರೀಯ ಅಬಕಾರಿ ಸುಂಕವು 32.90 ರೂಪಾಯಿ ಆಗಿದೆ. ದೆಹಲಿಯಲ್ಲಿ ಶೇಕಡಾ 30 ರಷ್ಟು ವ್ಯಾಟ್ ಆಗಿತ್ತು. ಡೀಸೆಲ್‌ನ ಚಿಲ್ಲರೆ ಮಾರಾಟ ಬೆಲೆಯ ಶೇಕಡ 54 ರಷ್ಟು ಅಬಕಾರಿ ಸುಂಕವೇ ಆಗಿತ್ತು. ಇನ್ನು ಅಬಕಾರಿ ಸುಂಕದಲ್ಲಿ ಲೀಟರ್‌ಗೆ 5 ರೂಪಾಯಿ ಕಡಿತ ಮಾಡಿದ ಬಳಿಕ ದೆಹಲಿಯಲ್ಲಿ ಶೇಕಡ 50 ರಷ್ಟು ಪೆಟ್ರೋಲ್ ಬೆಲೆಯು ಇಳಿಕೆಯಾಗಿದೆ. ಇನ್ನು ಈ ನಡುವೆ ಹಲವಾರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿತ ಮಾಡಿದೆ. ಈ ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಇನ್ನೂ ಕೂಡಾ ಕಡಿಮೆ ಆಗಿದೆ.
ಇಂದು ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯು ಸ್ಥಿರವಾಗಿದೆ. ನವದೆಹಲಿಯಲ್ಲಿ ಪೆಟ್ರೋಲ್ 103.97ರೂ ಹಾಗೂ ಡೀಸೆಲ್ 86.67 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 104.67 ರೂ ಹಾಗೂ ಡೀಸೆಲ್ 89.79 ರೂಪಾಯಿ ಆಗಿದೆ, ಬೆಂಗಳೂರಿನಲ್ಲಿ ಪೆಟ್ರೋಲ್ 100.58 ರೂ ಹಾಗೂ ಡೀಸೆಲ್ 85.01 ರೂಪಾಯಿ ಆಗಿದೆ. ನಿಮ್ಮ ನಗರಗಳ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ತಿಳಿಯಲು ಕ್ಲಿಕ್ ಮಾಡಿ.


Click it and Unblock the Notifications