ಗಾಯದ ಮೇಲೆ ಬರೆ! ದುಬಾರಿ ವಾಚ್, ಶೂಗಳ ಮೇಲೆ ತೆರಿಗೆ ಹೆಚ್ಚಳ; ಆರೋಗ್ಯ ವಿಮೆ ಮೇಲಿನ GST ವಾಪಸ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಯಾವೆಲ್ಲಾ ವಸ್ತುಗಳ ಮೇಲೆ GST ತೆರಿಗೆ ಹೆಚ್ಚಳ ಮಾಡಲಾಗಿದೆ? ತೆರಿಗೆಯನ್ನು ಯಾವೆಲ್ಲಾದರ ಮೇಲೆ ಹಿಂಪಡೆಯಲಾಗುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.

55ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸಭೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಶನಿವಾರ ನಡೆಯಲಿದೆ.ಈ ಸಭೆಯಲ್ಲಿ ಆರೋಗ್ಯ ಮತ್ತು ಜೀವ ವಿಮೆ ಕಂತಿನ ಮೇಲೆ ಈಗಲೇ ವಿಧಿಸುತ್ತಿರುವ ಶೇ.18ರಷ್ಟು ಜಿಎಸ್‌ಟಿ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಚಿವರ ಸಮಿತಿಯು,ಅವಧಿ ವಿಮೆ (ಟರ್ಮ್‌ ಲೈಫ್‌ ಇನ್ಶೂರೆನ್ಸ್‌ ) ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆ ಕಂತಿನ ಮೇಲಿನ ತೆರಿಗೆ ವಾಪಸ್ ಪಡೆಯುವಂತೆ ಶಿಫಾರಸು ಮಾಡಲಾಗುತ್ತದೆ.

ಮತ್ತೆ ತೆರಿಗೆ ಹೆಚ್ಚಳ! ದುಬಾರಿ ವಾಚ್, ಶೂಗಳ ಮೇಲೆ ಹೆಚ್ಚು ತೆರಿಗೆ

ಇನ್ನೂ ಹಿರಿಯ ನಾಗರಿಕರನ್ನು ಹೊರತುಪಡಿಸಿ ವೈಯಕ್ತಿಕ ವಿಮೆದಾರರ 5 ಲಕ್ಷ ರೂ. ದೊಳಗಿನ ಆರೋಗ್ಯ ವಿಮಾ ಕಂತಿನ ಮೇಲೆ ತೆರಿಗೆ ವಿನಾಯಿತಿ ನೀಡುವಂತೆ ಸಮಿತಿ ಶಿಫಾರಸು ಸಹ ಮಾಡಿದೆ. ಇದಕ್ಕೆ ಸಭೆ ಅಂಗೀಕಾರ ನೀಡುವ ನಿರೀಕ್ಷೆಗಳು ಇವೆ.

ಸ್ವಿಗ್ಗಿ,ಜೊಮಾಟೊದ ಆಹಾರ ವಿತರಣೆಗಳ GST ಕಡಿತ

ಆಹಾರ ಪೂರೈಸುವ ಸ್ವಿಗ್ಗಿ ಮತ್ತು ಜೊಮಾಟೊದ ಆಹಾರ ವಿತರಣೆ ಮೇಲೆ ಸದ್ಯ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ಶೇ.5ಕ್ಕೆ ಕಡಿತಗೊಳಿಸುವ ಸಭೆಯು ಅಂತಿಮ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.ಅದರ ಮೇಲಿನ ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ರದ್ದುಗೊಳಿಸಬಹುದು.ಇದರಿಂದ ಗ್ರಾಹಕರ ಮೇಲಿನ ಹೊರೆ ಕಡಿಮೆಯಾಗಲಿದೆ.

ದುಬಾರಿ ವಾಚ್, ಶೂಗಳ ಮೇಲೆ ಹೆಚ್ಚು ತೆರಿಗೆ

ದುಬಾರಿಯ ಕೈಗಡಿಯಾರಗಳು, ಶೂಗಳು, ಬಟ್ಟೆಗಳ ಮೇಲಿನ ಜಿಎಸ್‌ಟಿ ಬೆಲೆಗಳನ್ನು ಹೆಚ್ಚಿಸಲು ಮತ್ತು ಕೆಲವು ವಸ್ತುಗಳ ಮೇಲೆ ಶೇ.35 ರಷ್ಟು ವಿಶೇಷ ತೆರಿಗೆ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು. ಅಲ್ಲದೆ, ಸುಮಾರು 148 ವಸ್ತುಗಳ ಮೇಲಿನ ಜಿಎಸ್‌ಟಿ ದರಗಳಲ್ಲಿನ ಬದಲಾವಣೆಯ ಕುರಿತು ಚರ್ಚೆ ನಡೆಸುವಂತಹ ಸಾಧ್ಯತೆ ಇದೆ.

ಜಿಎಸ್‌ಟಿಗೆ ವಿಮಾನ ಇಂಧನ ಸೇರ್ಪಡೆ ನಿರೀಕ್ಷೆ

ಏವಿಯೇಷನ್ ಟರ್ಬೈನ್ ಇಂಧನವನ್ನು (ಎಟಿಎಫ್) ಜಿಎಸ್‌ಟಿ ಅಡಿಯಲ್ಲಿ ತರುವ ಬಗ್ಗೆಯೂ ಚರ್ಚಿಸಲಾಗುವುದು. ಆದರೆ ಇವುಗಳ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತಿಲ್ಲ. ಇವುಗಳ ಮೇಲೆ ಕೇಂದ್ರ ಸರ್ಕಾರವು ಅಬಕಾರಿ ಸುಂಕ ವಿಧಿಸಿದರೆ ರಾಜ್ಯ ಸರ್ಕಾರಗಳು ಮೌಲ್ಯವರ್ಧಿತ ತೆರಿಗೆ ಹಾಗೂ ಅಬಕಾರಿ ತೆರಿಗೆ ವಿಧಿಸುತ್ತಿವೆ. ವಿಮಾನ ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಸಭೆಯು ಚರ್ಚಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

GST ಮನ್ನಾ

ಟರ್ಮ್ ಇನ್ಶೂರೆನ್ಸ್ ಪ್ಲಾನ್‌ಗಳ ಮೇಲಿನ ಶೇ.18 ರಷ್ಟು ಜಿಎಸ್‌ಟಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂಬ ಪ್ರಚಾರವಿದ್ದು, 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ಖರೀದಿಸುವ ಹಿರಿಯ ನಾಗರಿಕರು ಮತ್ತು ಇತರ ವ್ಯಕ್ತಿಗಳ ಮೇಲೂ ಜಿಎಸ್ಟಿಯನ್ನು ಮನ್ನಾ ಮಾಡಲಾಗುತ್ತದೆ.

ಜಿಎಸ್‌ಟಿ ಫಿಟ್‌ಮೆಂಟ್ ಸಮಿತಿಯು ಈಗಾಗಲೇ ಬಳಕೆಯಲ್ಲಿರುವ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಸಣ್ಣ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ಶೇ.12 ರಿಂದ 18 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ.ಈ ಹೆಚ್ಚಳದಿಂದ, ಹಳೆಯ ಸಣ್ಣ ಕಾರುಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ದರವು ಹಳೆಯ ದೊಡ್ಡ ವಾಹನಗಳಂತೆಯೇ ಇರುತ್ತದೆ.

ಜಿಎಸ್‌ಟಿ ಬದಲಾವಣೆಯಿಂದ 22 ಸಾವಿರ ಕೋಟಿ ಆದಾಯ

ಜಿಎಸ್‌ಟಿ ದರಗಳನ್ನು ರಚಿಸಿದ ಸಚಿವರ ಗುಂಪು ಪ್ಯಾಕೇಜ್ಡ್ ಕುಡಿಯುವ ನೀರು, ಬೈಸಿಕಲ್‌ಗಳು, ವ್ಯಾಯಾಮ ನೋಟ್‌ಬುಕ್‌ಗಳು, ಐಷಾರಾಮಿ ಕೈಗಡಿಯಾರಗಳು ಮತ್ತು ಶೂಗಳ ಮೇಲೆ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಜಿಎಸ್‌ಟಿ ಬದಲಾವಣೆಯಿಂದ ಸರ್ಕಾರಕ್ಕೆ 22 ಸಾವಿರ ಕೋಟಿ ಆದಾಯ ಬರಲಿದೆ.

ಯಾವೆಲ್ಲಾ ಸರಕುಗಳ ಮೇಲೆ ತೆರಿಗೆ ಹೆಚ್ಚಳ

20 ಲೀಟರ್ ಪ್ಯಾಕೇಜ್ಡ್ ಕುಡಿಯುವ ನೀರಿನ ಮೇಲೆ ಶೇಕಡಾ 18 ರಿಂದ 5 ರಷ್ಟು ಮತ್ತು ರೂ. 10,000 ಕ್ಕಿಂತ ಕಡಿಮೆ ಬೆಲೆಯ ಬೈಸಿಕಲ್‌ಗಳ ಮೇಲೆ ಶೇಕಡಾ 12 ರಿಂದ ಶೇಕಡಾ 5 ಕ್ಕೆ ಇಳಿಸಲು ಸೂಚಿಸಲಾಗಿದೆ. ವ್ಯಾಯಾಮ ನೋಟ್‌ಬುಕ್‌ಗಳ ಮೇಲಿನ ಜಿಎಸ್‌ಟಿ ದರವನ್ನು ಶೇ.12ರಿಂದ ಶೇ.5ಕ್ಕೆ, ರೂ.15 ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಶೂಗಳ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.28ಕ್ಕೆ ಏರಿಸಲು ಯೋಜಿಸಲಾಗಿದೆ. 25 ಸಾವಿರಕ್ಕಿಂತ ಹೆಚ್ಚಿನ ಬೆಲೆಯ ವಾಚ್‌ಗಳ ಮೇಲಿನ ಜಿಎಸ್‌ಟಿ ದರವನ್ನು ಶೇ.18ರಿಂದ ಶೇ.28ಕ್ಕೆ ಪರಿಷ್ಕರಿಸಲಿದೆ.

ಹಣಕಾಸು ಸಚಿವಾಲಯ ನಡೆಸುವ ಸಭೆಯಲ್ಲಿ GST ತೆರಿಗೆಯನ್ನು ಗಾಯದ ಮೇಲೆ ಬರೆ ಎಳೆಯುವಂತೆ ಹೆಚ್ಚಿಸಬಹುದು ಇಲ್ಲವೇ ಕಡಿತಗೊಳಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+