ಈ ಬಾರಿಯ ಬಜೆಟ್ ಬಗ್ಗೆ ಎಲ್ಲಾ ವಲಯದಲ್ಲೂ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲು ದಿನಗಣನೆ ಆರಂಭವಾಗಿದೆ. ಅದರಲ್ಲೂ ಆದಾಯ ತೆರಿಗೆ ಸಂಬಂಧಿಸಿದ ಪ್ರಮುಖ ನಿರೀಕ್ಷೆಗಳು ತುಸು ಹೆಚ್ಚಿವೆ. ನೌಕರರ ವರ್ಗ (Income Tax Payers) ಬಹುದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ತೆರಿಗೆ ಮಿತಿಯ ಹೆಚ್ಚಳ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಮೋದಿ ಸರ್ಕಾರ ಇವರ ಬೇಡಿಕೆ ಈಡೇರಿಸುತ್ತಾ? ಎಂದು ಕಾದುನೋಡಬೇಕಿದೆ.
ಹೌದು,ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ನೇ ಸಾಲಿನ ಬಜೆಟ್ ಮಂಡಿಸಲು ತಯಾರಿಯನ್ನು ನಡೆಸುತ್ತಿದ್ದಾರೆ.ಹಾಗೆಯೇ ದಿನದಿಂದ ದಿನಕ್ಕೆ ನಿರೀಕ್ಷೆಗಳೂ ಹೆಚ್ಚಾಗತೊಡಗಿವೆ. ಆದಾಯ ತೆರಿಗೆ ಕಟ್ಟುವವರು ಅದರಲ್ಲೂ ನೌಕರರ ವರ್ಗ ಈ ಬಜೆಟ್ ಮೇಲೆ ತೆರಿಗೆ ಮಿತಿ ಹೆಚ್ಚಿಸಬಹುದೆಂಬ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ.ಇವರ ನಿರೀಕ್ಷೆಯಂತೆ ತೆರಿಗೆ ಮಿತಿ ಹೆಚ್ಚಳ ಮಾಡಬಹುದು ಎಂಬ ಸಾಧ್ಯತೆಗಳು ಹೆಚ್ಚಾಗಿವೆ.

ಕೇಂದ್ರ ಬಜೆಟ್ ಮೇಲೆ ತಿಂಗಳ ಸಂಬಳವನ್ನೇ ನಂಬಿಕೊಂಡು ಜೀವನ ಮಾಡುವ ಮಾಧ್ಯಮ ವರ್ಗದವರು ಭಾರೀ ನಿರೀಕ್ಷೆಗಳು ಇವೆ. ಅವರಿಗೆ ಅನುಕೂಲ ಆಗಬೇಕೆಂದರೆ ತೆರಿಗೆ ಮಿತಿಯನ್ನು 18 ಲಕ್ಷ ರೂಪಾಯಿವರೆಗೆ ಹೆಚ್ಚಿಸಬೇಕು ಎಂದು ತಜ್ಞರು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
2025ರ ಬಜೆಟ್ ನಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಬೇಕು ಎಂದು ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿದ್ದಾರೆ. ನೌಕರ ವರ್ಗ ಹೊಸ ತೆರಿಗೆ ಮಿತಿಯ ಕಡಿತ ಹಲವಾರು ಬದಲಾವಣೆಯನ್ನು ಮಾಡಬಹುದು ಎಂಬ ಹೆಚ್ಚಿನ ನಿರೀಕ್ಷಿಗಳು ಇವೆ.
ಮಾಧ್ಯಮ ವರ್ಗದ ಮೂರು ರೀತಿಯ ಬೇಡಿಕೆಗಳು
ಮಾಧ್ಯಮ ವರ್ಗದ ತೆರಿಗೆ ಮಿತಿಯನ್ನು 18 ಲಕ್ಷ ರೂಪಾಯಿವರೆಗೆ ಹೆಚ್ಚಿಸಬೇಕೆಂಬ ಬೇಡಿಕೆಯಿದೆ.
ತೆರಿಗೆ ಬ್ರಾಕೆಟ್ ಗಳನ್ನು ಪುನರ್ ರಚಿಸುವುದು
ಆದಾಯದ ಮೇಲೆ ಶೇ.30 ರಷ್ಟು ಪ್ರಮಾಣಿತ ಕಡಿತಗೊಳಿಸುವುದು
ಹೀಗೆ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಹಲವು ಸಲಹೆಗಳನ್ನು ಸೂಚನೆಗಳನ್ನು ನೀಡಲಾಗಿದೆ.
ಆದಿಲ್ ಶೆಟ್ಟಿ ಅವರೂ ಸೇರಿದಂತೆ ಹಲವರು ತೆರಿಗೆ ಅಮತಿಯನ್ನು ಹೆಚ್ಚಿಸಬೇಕೆಂಬ ಆಗ್ರಹ ಮಾಡುತ್ತಿರುವುದರಿಂದ ಜೊತೆಗೆ ತೆರಿಗೆ ಮಿತಿ ಹೆಚ್ಚಳ ಮಾಡಿದರೆ ಅದೇ ಹಣ ನೌಕರರ ಬಳಿ ಉಳಿಯಲಿದ್ದು ಅವರು ಬೇರೊಂದು ರೂಪದಲ್ಲಿ ವ್ಯತ್ಯಾಸವಾಗುತ್ತದೆ.ಪರೋಕ್ಷ ತೆರಿಗೆಗಳು ಹೆಚ್ಚಾಗುತ್ತವೆ ಎನ್ನುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡ ತೆರಿಗೆ ಮಿತಿಯನ್ನು 18 ಲಕ್ಷ ರೂಪಾಯಿವರೆಗೆ ಏರಿಕೆ ಮಾಡಬಹುದು.ತನದಾರರ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ತೆರಿಗೆ ಮಿತಿಯನ್ನು 18 ಲಕ್ಷ ರೂಪಾಯಿವರೆಗೆ ಏರಿಸುವುದೊಂದೇ ಉಪಾಯ ಎಂದು ಆದಿಲ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಹಣದುಬ್ಬರ ಶೇ.21ರಷ್ಟು ಹೆಚ್ಚಾಗಿದೆ. 2020ರಿಂದಲೂ ತೆರಿಗೆ ಮಿತಿ ಸಡಿಲಿಸಬೇಕೆಂಬ ಬೇಡಿಕೆಗಳು ಹೆಚ್ಚಾಗಿ ಇವೆ.
ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಯಾವಾಗ ಮಂಡಿಸುತ್ತಾರೆ?
ನಿರ್ಮಲಾ ಸೀತಾರಾಮನ್ ದಶಕದ ಹಿಂದಿನ ಸಂಪ್ರದಾಯವನ್ನು ಮುಂದುವರೆಸುತ್ತ ಬಂದಿದ್ದಾರೆ.ಈ ಬಾರಿ ಕೂಡ ಫೆಬ್ರವರಿ 1, 2025 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025 ಅನ್ನು ಮಂಡಿಸಲಿದ್ದಾರೆ.
ಕೇಂದ್ರ ಬಜೆಟ್ ಸಮಯಲ್ಲಿ ಶುರುವಾಗುತ್ತೆ?
ಸೀತಾರಾಮನ್ ಅವರು ಫೆಬ್ರವರಿ 1, 2025 ರಂದು ಬೆಳಿಗ್ಗೆ 11:00 ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ. ಅವರು ಈಗಲೇ ಆರು ಪೂರ್ಣ ಬಜೆಟ್‌ಗಳನ್ನು ಮತ್ತು ಎರಡು ಮಧ್ಯಂತರ ಬಜೆಟ್‌ಗಳು ಸೇರಿದಂತೆ ಇದು ಅವರ ಎಂಟನೇ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ.


Click it and Unblock the Notifications