ನಮಗೆ ಬರುವ ಆದಾಯದ ಬಗ್ಗೆ ಎಷ್ಟು ಗಮನ ನೀಡುತ್ತೇವೋ, ಅಷ್ಟೇ ಗಮನ ಆದಾಯ ತೆರಿಗೆ ಮೇಲೂ ಇರಲೇ ಬೇಕು.ಅಂದರೆ ಪ್ರತಿಯೊಬ್ಬ ಆದಾಯ ತೆರಿಗೆ ಪಾವತಿದಾರ, ಆದಾಯ ರಿಟರ್ನ್ ಸಲ್ಲಿಸುವ ಮೊದಲು ತಮ್ಮ ಹಳೆಯ ಮತ್ತು ಹೊಸ ತೆರಿಗೆ ಪದ್ದತಿಗಳ ಬಗ್ಗೆ ತಿಳಿದುಕೊಳ್ಳಬೇಕು.
ಹೌದು, ತೆರಿಗೆ ರಿಟರ್ನ್ಸ್ ಸಲ್ಲಿಕೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಹಲವಾರು ವಿಚಾರಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರವು 2023-24ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಿದ್ದು,ಇದರಿಂದ ತೆರಿಗೆದಾರರು ಕೆಲವೊಂದು ಮಹತ್ವಪೂರ್ಣ ಆಯ್ಕೆಗಳು ಇವೆ.ಹಾಗಿದ್ದರೆ ಈಗಾಗಲೆ ಹೊಸ ತೆರಿಗೆ ಪದ್ಧತಿ ಆರಿಸಿಕೊಂಡವರು ಹಳೆ ತೆರಿಗೆ ಪದ್ಧತಿಗೆ ಮರಳಲು ಸಾಧ್ಯವಿದೆಯೇ? ಹಣಕಾಸು ವರ್ಷದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದೀರಿ ಎಂದಾದರೆ ಮತ್ತೆ ನೀವು ಹಳೆ ತೆರಿಗೆ ಪದ್ಧತಿ ಕಡೆಗೆ ಮುಖ ಮಾಡಬಹುದು.ಈ ಪ್ರಕ್ರಿಯೆ ಹೇಗೆ ಇರುತ್ತದೆ ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಇದೆ.

2021ರ ಹಣಕಾಸು ವರ್ಷಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿತು. ಅಲ್ಲಿಂದ ಕೇಂದ್ರ ಹೊಸ ತೆರಿಗೆ ಪದ್ಧತಿಯನ್ನೇ ಉತ್ತೇಜಿಸಿಕೊಂಡು ಬಂದಿದ್ದು 7 ಲಕ್ಷ ಆದಾಯದವರೆಗೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ ಎಂದು ಹೇಳಿತ್ತು. 2025-26ನೇ ಸಾಲಿನ ಬಜೆಟ್‌ನಲ್ಲಿ ಆದಾಯ ವಿನಾಯಿತಿ ಮಿತಿಯನ್ನು 12ಲಕ್ಷ ಏರಿಕೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಸಾರಿಯ ಬಜೆಟ್‌ನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದೆ. ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳುವ ವೇಳೆ ಹಳೆಯದೋ..ಅಥವಾ ಹೊಸದೋ ನೀವು ಆಯ್ಕೆ ಮಾಡಿಕೊಳ್ಳದಿದ್ದರೆ ಅದು ಆಟೋಮ್ಯಾಟಿಕ್ ಆಗಿ ಹೊಸ ತೆರಿಗೆ ಪದ್ಧತಿಯೇ ಆಗುತ್ತದೆ ಎಂದೂ ತಿಳಿದುಕೊಳ್ಳವುದು ಮುಖ್ಯವಾಗುತ್ತದೆ.
ಯಾರಿಗೆ ಹಳೆ ತೆರಿಗೆ ಪದ್ಧತಿ ಸೂಕ್ತ?
ಒಂದೆರಡು ವರ್ಷದ ಹಿಂದೆ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರು ಈಗ ಹಳೆಯ ತೆರಿಗೆ ಪದ್ಧತಿಯೇ ಉತ್ತಮವಾಗಿತ್ತು ಎನ್ನುತ್ತಿದ್ದಾರೆ. ಆರೋಗ್ಯ ವಿಮೆ, ಪಿಪಿಎಫ್, ಇಎಲ್ ಎಸ್ ಎಸ್, ಎನ್ ಪಿಸ್ ಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿರುವವರಿಗೆ ಹಳೆಯ ತೆರಿಗೆ ಪದ್ಧತಿಯೇ ಬೇಕು ಎಂದೆನಿಸುತ್ತದೆ.ಯಾಕೆಂದರೆ ಹಳೆಯ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಅವಕಾಶ ಇದೆ. ಹೌಸ್ ರೆಂಟ್ ಅಲೋವೆನ್ಸ್, ಟ್ರಾವೆಲ್ ಅಲೋವೆನ್ಸ್ ಲಾಭ ಪಡೆದುಕೊಳ್ಳಲು ಅವಕಾಶ ಇದೆ.
ಹಳೆ ತೆರಿಗೆ ಪದ್ಧತಿಗೆ ಮರಳುವುದು ಹೇಗೆ?
ಹಳೆಯ ತೆರಿಗೆ ಪದ್ಧತಿಗೆ ಮರಳಬೇಕು ಎಂದಾದರೆ ತೆರಿಗೆದಾರ ಫಾರ್ಮ್ 10 ಐಇ ಯನ್ನು ಸಬ್ ಮಿಟ್ ಮಾಡಬೇಕಾಗುತ್ತದೆ. ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ವೇಳೆ ಇದನ್ನು ಸಬ್ ಮಿಟ್ ಮಾಡಬೇಕಾಗುತ್ತದೆ. ಪರಿಣಿತರು ಹೇಳುವಂತೆ ಇದನ್ನು ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಡೆಡ್ ಲೈನ್ ಒಳಗೆ ನೀಡಿದರೆ ಉತ್ತಮ.
ಎಲ್ಲದಕ್ಕಿಂತ ಮುಖ್ಯವಾಗಿ ನಾವು ಗಮನಿಸಬೇಕಾದ ವಿಚಾರ ಇಲ್ಲಿದೆ. ಹೊಸ ಆದಾಯ ತೆರಿಗೆಯಲ್ಲಿ ಪ್ರತಿ ಆದಾಯ ಸ್ಲ್ಯಾಬ್‌ಗೆ ಬರುವ ತೆರಿಗೆ ಹೊಣೆಗಾರಿಕೆಯ ಮೇಲಿನ ರಿಯಾಯಿತಿಯನ್ನು ಪಡೆಯಲು ಸೆಕ್ಷನ್ 87 ಎ ವ್ಯಕ್ತಿಗಳಿಗೆ ಅವಕಾಶ ನೀಡುತ್ತದೆ. ರೂ. 12 ಲಕ್ಷದವರೆಗೆ ಆದಾಯ ಹೊಂದಿರುವ ಜನರಿಗೆ ಈಗ ರಿಯಾಯಿತಿ ಲಭ್ಯವಿದೆ.
ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮವರ್ಗವು ಹೆಚ್ಚಿನ ಬಲ ತುಂಬುತ್ತಿದೆ.ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ತೆರಿಗೆದಾರರ ಪರವಾಗಿ ಸಾಕಷ್ಟು ರಿಯಾಯಿತಿಗಳನ್ನು ನೀಡಿದೆ.
ಆದಾಯ ತೆರಿಗೆಯ ಆರಂಭದಲ್ಲಿ 2.5 ಲಕ್ಷ ಇದ್ದ ತೆರಿಗೆ ರಹಿತ ಸ್ಪ್ಯಾಬ್ ಅನ್ನು 2019ರಲ್ಲಿ 5 ಲಕ್ಷಕ್ಕೆ ಏರಿಸಲಾಗಿತ್ತು. 2023ರಲ್ಲಿ ತೆರಿಗೆ ರಿಯಾಯಿತಿಯ ಸ್ಪ್ಯಾಬ್ ಅನ್ನು 7 ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು.ಇದೀಗ 12 ಲಕ್ಷದವರೆಗೆ ವಾರ್ಷಿಕ ಆದಾಯವಿರುವವರು ತೆರಿಗೆ ಪಾವತಿಸಬೇಕಾಗಿಲ್ಲ. ಇದರೊಂದಿಗೆ 75,000 ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯವಾಗುವುದರಿಂದ, ಒಟ್ಟಾರೆಯಾಗಿ ವಾರ್ಷಿಕ 12,75,000 ಆದಾಯವಿರುವವರು ತೆರಿಗೆ ಹೊರೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದ್ದಾರೆ.


Click it and Unblock the Notifications