ಟಿಸಿಎಲ್ ಆಫರ್: ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿ

ನೀವು ಎಸಿ ಮತ್ತು ಟಿವಿಯನ್ನು ಖರೀದಿಸಬೇಕೆಂದು ಬಯಸಿದ್ದರೆ ಉತ್ತಮ ಅವಕಾಶ ಇಲ್ಲಿದೆ. ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಕಂಪನಿ ಟಿಸಿಎಲ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನೊಂದಿಗೆ ಅಧಿಕೃತ ಪಾಲುದಾರಿಕೆಯನ್ನು ಸತತ ಎರಡನೇ ವರ್ಷವೂ ಮುಂದುವರಿಸಿದ್ದು, ವಿಶೇಷ ಕೊಡುಗೆಯನ್ನು ನೀಡುತ್ತಿದೆ.

ಹೆಚ್‌ಡಿ ಟಿವಿ ಹಾಗೂ ಅತ್ಯಂತ ಗುಣಮಟ್ಟದ ಎಸಿಗಳನ್ನು ಮಾರಾಟ ಮಾಡುವುದರ ಮೂಲಕ ಟಿಸಿಎಲ್‌ ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡುತ್ತಿದೆ.

ಅಗ್ಗದ ಎಸಿ ಮತ್ತು ಟಿವಿ ಖರೀದಿಸಿ

ಅಗ್ಗದ ಎಸಿ ಮತ್ತು ಟಿವಿ ಖರೀದಿಸಿ

ಟಿಸಿಎಲ್ 4 ಕೆ UHD ಮತ್ತು ಕ್ಯೂಎಲ್ಇಡಿ ಟಿವಿಗಳ ಮೇಲೆ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ. ಇದರೊಂದಿಗೆ, ಎಐ-ಅಲ್ಟ್ರಾ ಇನ್ವರ್ಟರ್ ಎಸಿ ಸಹ ಸೇರಿಸಲ್ಪಟ್ಟಿದೆ. ಜೊತೆಗೆ ಇದರ ಉಚಿತ ಇನ್‌ಸ್ಟಾಲೇಷನ್ ಕೂಡ ಲಭ್ಯವಿದೆ.

ಟಿಸಿಎಲ್ ಸಿ 815, ಟಿಸಿಎಲ್ ಪಿ 715, ಟಿಸಿಎಲ್ ಸಿ 715 ಟಿವಿಗಳು 33,990 ರೂ.ಗಳಿಂದ ಪ್ರಾರಂಭವಾಗುತ್ತದೆ. ಇದಲ್ಲದೆ, ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡಲು ಟಿವಿ ಮತ್ತು ಎಸಿ ಎರಡರಲ್ಲೂ ಬಜಾಜ್ ಫೈನಾನ್ಸ್‌ನಿಂದ ಆಫರ್‌ಗಳನ್ನು ಸ್ವೀಕರಿಸಲಾಗುತ್ತಿದೆ. ನೀವು ಅವುಗಳ ಲಾಭ ಪಡೆಯಲು ಬಯಸಿದರೆ ನಿಮ್ಮ ಹತ್ತಿರದ ಅಂಗಡಿಗೆ ಭೇಟಿ ನೀಡಬಹುದು.

 

ಟಿಸಿಎಲ್ ಎಐ-ಅಲ್ಟ್ರಾ ಇನ್ವರ್ಟರ್ ಎಸಿ

ಟಿಸಿಎಲ್ ಎಐ-ಅಲ್ಟ್ರಾ ಇನ್ವರ್ಟರ್ ಎಸಿ

ಟಿಸಿಎಲ್ ಎಐ-ಅಲ್ಟ್ರಾ ಇನ್ವರ್ಟರ್ ಎಸಿಯಲ್ಲಿ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನವನ್ನು ನೀಡಲಾಗಿದೆ. ಎಐ-ಅಲ್ಟ್ರಾ ಇನ್ವರ್ಟರ್ ತಂತ್ರಜ್ಞಾನವನ್ನು ಹೊಂದಿರುವ ಈ ಎಸಿ ಶೇಕಡಾ 50 ರಷ್ಟು ವಿದ್ಯುತ್ ಶಕ್ತಿಯನ್ನು ಉಳಿಸುತ್ತದೆ. ಕೂಲಿಂಗ್ ಬಗ್ಗೆ ಹೇಳುವುದಾದರೆ ಇದು 60 ಸೆಕೆಂಡುಗಳಲ್ಲಿ ಕೋಣೆಯ ಉಷ್ಣತೆಯನ್ನು 18 ° C ಗೆ ಕಡಿಮೆ ಮಾಡುತ್ತದೆ.

ಈ ಎಸಿಯಲ್ಲಿ, ಹ್ಯಾಂಡ್ಸ್ ಫ್ರೀ ನಿಯಂತ್ರಣಕ್ಕಾಗಿ ಗೂಗಲ್ ಅಸಿಸ್ಟೆಂಟ್ ಮತ್ತು ಟಿಸಿಎಲ್ ಹೋಮ್ ಆ್ಯಪ್ ಸಪೋರ್ಟ್‌ ಲಭ್ಯವಿದೆ. ಈ ಎಸಿಯಲ್ಲಿ ಸಿಲ್ವರ್ ಅಯಾನ್ ಫಿಲ್ಟರ್ ಅನ್ನು ಸಹ ಒದಗಿಸಲಾಗಿದ್ದು, ಇದು ವಾಸಿಸುವ ಪ್ರದೇಶವನ್ನು ಸಂಪೂರ್ಣವಾಗಿ ಸುರಕ್ಷಿತ ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿರಿಸುತ್ತದೆ.

 

ಟಿಸಿಎಲ್ ಪಿ 715 4ಕೆ UHD ಟಿವಿ

ಟಿಸಿಎಲ್ ಪಿ 715 4ಕೆ UHD ಟಿವಿ

ಟಿಸಿಎಲ್ ಪಿ 715 4ಕೆ UHD ಟಿವಿಯು, 43 ಇಂಚು ಮತ್ತು 55 ಇಂಚಿನ ಡಿಸ್ಪ್ಲೇ ಹೊಂದಿದೆ. ಈ 4ಕೆ ಯುಹೆಚ್‌ಡಿ ಟಿವಿ ಮಾದರಿಯಲ್ಲಿ ಹೈಟೆಕ್ ಪ್ರದರ್ಶನ ತಂತ್ರಜ್ಞಾನವನ್ನು ನೀಡಲಾಗಿದೆ. ಇದರಲ್ಲಿ ಒದಗಿಸಲಾದಮೈಕ್ರೋ ಡಿಮ್ಮಿಂಗ್ ಮತ್ತು 4 ಕೆ ಅಪ್‌ಸ್ಕೇಲಿಂಗ್ ಬಳಕೆದಾರರಿಗೆ ಉತ್ತಮ ವೀಡಿಯೊ ಮತ್ತು ಚಿತ್ರದ ಗುಣಮಟ್ಟವನ್ನು ನೀಡುತ್ತದೆ. ಇದು ಹ್ಯಾಂಡ್ಸ್-ಫ್ರೀ ಧ್ವನಿ ನಿಯಂತ್ರಣವನ್ನು ಹೊಂದಿದ್ದು, ಟಿವಿಯನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಬಲ್ಲದು. 43 ಇಂಚಿನ ಟಿವಿಯ ಬೆಲೆ 33,990 ರೂ. ಆಗಿದ್ದು, ಅದೇ ಸಮಯದಲ್ಲಿ, 55 ಇಂಚಿನ ಟಿವಿಯ ಬೆಲೆ 47,990 ರೂ. ಆಗಿದೆ.

ಟಿಸಿಎಲ್ ಸಿ 715 4 ಕೆ QLED ಟಿವಿ

ಟಿಸಿಎಲ್ ಸಿ 715 4 ಕೆ QLED ಟಿವಿ

ಟಿಸಿಎಲ್ ಸಿ 715 4 ಕೆ ಕ್ಯೂಎಲ್ಇಡಿ ಟಿವಿ 55 ಇಂಚು ಮತ್ತು 65 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಕ್ಯೂಎಲ್‌ಇಡಿ ಟಿವಿಗೆ ಕ್ವಾಂಟಮ್ ಡಾಟ್ ಟೆಕ್ನಾಲಜಿ, ಡಾಲ್ಬಿ ವಿಷನ್, ಎಚ್‌ಡಿಆರ್ 10+ ಮತ್ತು ಐಪಿಕ್ಯೂ ಎಂಜಿನ್ ನೀಡಲಾಗಿದ್ದು ಇದು ದೀರ್ಘಕಾಲೀನ ವೀಕ್ಷಣೆಯ ಅನುಭವ ನೀಡುತ್ತದೆ.

ಈ ಟಿವಿಯು ಟಿಸಿಎಲ್‌ನ ಆಂತರಿಕ ಎಐ-ಇನ್ ವೈಶಿಷ್ಟ್ಯವನ್ನು ಅಂತರ್ನಿರ್ಮಿತ ಹೊಂದಿದೆ. ಈ ಮೂಲಕ ಮನೆಯಲ್ಲಿ ಸ್ಮಾರ್ಟ್ ಇಂಟರ್ಕನೆಕ್ಟಿವಿಟಿ ಲಭ್ಯವಿರುತ್ತದೆ. ಅಂದರೆ, ಟಿವಿಯನ್ನು ಇತರ ಸ್ಮಾರ್ಟ್ ಹೋಮ್ ಸಾಧನಗಳಿಗೆ ಸಂಪರ್ಕಿಸಬಹುದು. 55 ಇಂಚಿನ ಟಿವಿಯ ಆರಂಭಿಕ ಬೆಲೆ 54,990 ರೂ. ಆಗಿದ್ದು, ಅದೇ ಸಮಯದಲ್ಲಿ, 65 ಇಂಚಿನ ಟಿವಿಯ ಆರಂಭಿಕ ಬೆಲೆ 60,990 ರೂ. ಆಗಿದೆ. ಟಿಸಿಎಲ್ ಸೌಂಡ್‌ಬಾರ್ ಸಹ ಈ ಮಾಡೆಲ್‌ನೊಂದಿಗೆ ಉಚಿತವಾಗಿ ಲಭ್ಯವಿದೆ, ಇದರ ಬೆಲೆ 8,990 ರೂಪಾಯಿಗಳು.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+