ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ (ಟಿಸಿಎಸ್) ಐಟಿ ಸೇವೆಗಳು, ಬ್ಯುಜಿನೆಸ್ ಸೊಲ್ಯುಷನ್ ಮತ್ತು ಸಲಹಾ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಲ್ಲಿ ಹೊರಹೊಮ್ಮಿದೆ. ಈ ಸಂಸ್ಥೆಯು ಐಟಿ ಮತ್ತು ಐಟಿ ಸೇವೆಗಳ ಸಲಹಾ ನೇತೃತ್ವದ ಪೋರ್ಟ್‌ಪೋಲಿಯೋವನ್ನು ನಿರ್ವಹಣೆ ಮಾಡುತ್ತದೆ. ಟಿಸಿಎಸ್ ತನ್ನ ಸಾಫ್ಟ್‌ವೇರ್ ಸೇವೆಗಳನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಇಂಗ್ಲೆಂಡ್‌ನಲ್ಲಿಯೂ ಒದಗಿಸಿದೆ.
ಈಗ ಇಂಗ್ಲೆಂಡ್‌ನ ಮತ್ತೊಂದು ಪ್ರಮುಖ ಯೋಜನೆಗೆ ಕಂಪನಿಯನ್ನು ಆಯ್ಕೆ ಮಾಡಲಾಗಿದೆ.ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಶಿಕ್ಷಕರ ಪಿಂಚಣಿ ಯೋಜನೆಗಾಗಿ ಶಿಕ್ಷಣ ಇಲಾಖೆಯು ಟಿಸಿಎಸ್ ಅನ್ನು ಆಯ್ಕೆ ಮಾಡಿದೆ. ಕಂಪನಿಯು ಟಿಸಿಎಸ್ ಜೊತೆಗಿನ ಇಂಗ್ಲೆಂಡ್‌ನ ಒಪ್ಪಂದದ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಶಿಕ್ಷಕರ ಪಿಂಚಣಿ ಯೋಜನೆಯು ಯುಕೆಯಲ್ಲಿ 2 ಮಿಲಿಯನ್ ಸದಸ್ಯರನ್ನು ಹೊಂದಿರುವ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಪಿಂಚಣಿ ಯೋಜನೆಯಾಗಿದೆ ಎಂಬುವುದು ಗಮನಾರ್ಹ ವಿಚಾರವಾಗಿದೆ. ಈ ಯೋಜನೆಯ ಸುಮಾರು 10 ವರ್ಷಗಳ ಕಾಂಟ್ರಾಕ್ಟ್ ಅನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್‌ಗೆ (ಟಿಸಿಎಸ್) ನೀಡಲಾಗಿದೆ.
ಶಿಕ್ಷಕರ ಪಿಂಚಣಿ ಯೋಜನೆಯಲ್ಲಿ ಟಿಸಿಎಸ್ ನಿರ್ವಹಣೆ
ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ (ಟಿಸಿಎಸ್) ಶಿಕ್ಷಕರ ಪಿಂಚಣಿ ಯೋಜನೆಗೆ ಸಂಬಂಧಿಸಿದ ಸರಿಯಾದ ಪಿಂಚಣಿ ದಾಖಲೆ, ಪಿಂಚಣಿಯ ಪಾವತಿ, ಯೋಜನೆಯ ಹಣಕಾಸು ನಿರ್ವಹಣೆ, ಸದಸ್ಯರ ದಾಖಲಾತಿ, ಸದಸ್ಯರ ಸೇರ್ಪಡೆ ಮೊದಲಾದವುಗಳನ್ನು ನಿರ್ವಹಣೆ ಮಾಡಲಿದೆ. ಸರಿಯಾದ ಮಾಹಿತಿಯನ್ನು ಪಿಂಚಣಿದಾರರಿಗೆ ಪಡೆಯಲು ಸಾಧ್ಯವಾಗುವಂತೆ ಮಾಡುತ್ತದೆ.
1975ರಿಂದ ಟಿಸಿಎಸ್ ಕಂಪನಿ ಕ್ಲೌಡ್, ಕಾಗ್ನಿಟಿವ್ ಬ್ಯುಜಿನೆಸ್ ಆಪರೇಷನ್, ಸೈಬರ್ ಸೆಕ್ಯೂರಿಟಿ, ಡೇಟಾ ಅನಾಲಿಟಿಕ್ಸ್ ಮೊದಲಾದವುಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ವೈಟ್‌ಲ್ಯಾನ್ಸ್ ರಿಸರ್ಚ್ ಪ್ರಕಾರ ಸೇವಾ ಪೂರೈಕೆದಾರರ ತೃಪ್ತಿ ಶ್ರೇಯಾಂಕದಲ್ಲಿ ಎರಡು ಸಂಸ್ಥೆಗಳು ನಂಬರ್ 1 ಸ್ಥಾನದಲ್ಲಿದೆ. ಈ ಪೈಕಿ ಟಿಸಿಎಸ್ ಕೂಡಾ ಒಂದಾಗಿದೆ.
ವೈಟ್‌ಲೇನ್ ರಿಸರ್ಚ್ ತನ್ನ ವಾರ್ಷಿಕ ಅಧ್ಯಯನದ ಫಲಿತಾಂಶವನ್ನು ಐಟಿ ಹೊರಗುತ್ತಿಗೆ ಮತ್ತು ಐಟಿ ಸೇವಾ ಪೂರೈಕೆದಾರರ ಕಾರ್ಯಕ್ಷಮತೆಯನ್ನು ಬೆಲಕ್ಸ್ ಮಾರುಕಟ್ಟೆಯಲ್ಲಿ ಪ್ರಕಟ ಮಾಡಿದೆ. ಸಂಸ್ಥೆಯ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ಟಿಸಿಎಸ್ ಯುಕೆಯಲ್ಲಿ ಸುಮಾರು 8 ರಿಟೇಲರ್‌ಗಳಿಗೆ, 5 ಎನರ್ಜಿ ಸಂಸ್ಥೆಗಳು ಮತ್ತು 2 ಫಾರ್ಮಾ ಸಂಸ್ಥೆಗಳಿಗೆ ಸೇವೆ ಸಲ್ಲಿಸುತ್ತಿದೆ.
ಟಿಸಿಎಸ್ ಸಂಸ್ಥೆಯ ಬಗ್ಗೆ ಮಾಹಿತಿ
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ (ಟಿಸಿಎಸ್) ಸಂಸ್ಥೆಯು 1968ರಲ್ಲಿ ಸ್ಥಾಪನೆ ಮಾಡಲಾಗಿದೆ. ಬ್ಯಾಂಕಿಂಗ್, ಹಣಕಾಸು ಸೇವೆ, ವಿಮೆ, ಉತ್ಪಾದನೆ, ರಿಟೇಲ್, ಕನ್ಸ್ಯೂಮರ್ ಬ್ಯುಜಿನೆಸ್ ವಲಯದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಸೆನ್ಸೆಕ್ಸ್‌ನಲ್ಲಿ ಟಿಸಿಎಸ್ ಟಾಪ್ 10 ಸಂಸ್ಥೆಗಳಲ್ಲಿ ಒಂದಾಗಿದೆ.
ಭಾರತದಲ್ಲಿ ಷೇರು ಮಾರುಕಟ್ಟೆಯಲ್ಲಿ ಮಾರುಕಟ್ಟೆ ಮೌಲ್ಯದ ವಿಚಾರಕ್ಕೆ ನಾವು ಬಂದಾಗ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದೆ. ಟಿಸಿಎಸ್‌ನಲ್ಲಿ ಒಟ್ಟಾಗಿ ಸುಮಾರು 5 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಕಳೆದ ಐದು ವರ್ಷದ ಅವಧಿಯಲ್ಲಿ ಟಿಸಿಎಸ್ ಸ್ಟಾಕ್ ತನ್ನ ಷೇರುದಾರರಿಗೆ ಸುಮಾರು ಶೇಕಡ 87ರಷ್ಟು ರಿಟರ್ನ್ ಅನ್ನು ನೀಡಿದೆ. ಈ ಸಮಯಕ್ಕೆ ಟಿಸಿಎಸ್ ಸ್ಟಾಕ್ ಸುಮಾರು ಶೇಕಡ 1.19ರಷ್ಟು ಇಳಿಕೆಯಾಗಿ, 3,236.00 ರೂಪಾಯಿಗೆ ತಲುಪಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಟಿಸಿಎಸ್ ನಿವ್ವಳ ಲಾಭ ಶೇ.14ರಷ್ಟು ಏರಿಕೆಯಾಗಿದೆ.
ಭಾರತದ ಅತೀ ದೊಡ್ಡ ಐಟಿ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ತನ್ನ ನಾಲ್ಕನೇ ತ್ರೈಮಾಸಿಕದ ವರದಿಯನ್ನು ಏಪ್ರಿಲ್ 12ರಂದು ಪ್ರಕಟಿಸಿದೆ. ಈ ವರದಿ ಪ್ರಕಾರ ಟಿಸಿಎಸ್ ಸಂಸ್ಥೆಯ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 14.8ರಷ್ಟು ಏರಿಕೆ ಕಂಡು ಬಂದಿದೆ. ಮಾರ್ಚ್ 31, 2023ರಲ್ಲಿ ಕೊನೆಯಾಗುವ ತ್ರೈಮಾಸಿಕದಲ್ಲಿ ಟಿಸಿಎಸ್ ಸಂಸ್ಥೆಯ ನಿವ್ವಳ ಲಾಭವು 11,392 ಕೋಟಿ ರೂಪಾಯಿಗೆ ತಲುಪಿದೆ.


Click it and Unblock the Notifications