TCS ಷೇರು ಹೂಡಿಕೆದಾರರಿಗೆ ಶೇ. 3000ರಷ್ಟು ರಿಟರ್ನ್ ನೀಡಿದೆ: ಎನ್‌. ಚಂದ್ರಶೇಖರನ್

ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ತನ್ನ ಹೂಡಿಕೆದಾರರನ್ನು ಭಾರೀ ಶ್ರೀಮಂತರನ್ನಾಗಿಸಿದೆ. ಟಿಸಿಎಸ್ ಷೇರುಗಳು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದಾಗಿನಿಂದಲೂ ಸತತವಾಗಿ ಲಾಭ ನೀಡುತ್ತಿದೆ.

ಈ ಕುರಿತು ಸ್ವತಃ ಟಾಟಾ ಸನ್ಸ್ ಅಧ್ಯಕ್ಷ ಎನ್‌. ಚಂದ್ರಶೇಖರ್ ತಿಳಿಸಿರುವಂತೆ, ಟಿಸಿಎಸ್‌ ಷೇರುಗಳು ಈವರಗೆ ಹೂಡಿಕೆದಾರರಿಗೆ ಶೇಕಡಾ 3000ರಷ್ಟು ಲಾಭವನ್ನು ನೀಡಿವೆ. ಕಂಪನಿಯು ತನ್ನ ಹೂಡಿಕೆದಾರರಿಗೆ ಬೋನಸ್ ಷೇರುಗಳನ್ನು ನೀಡುವಲ್ಲಿ ಬಹಳ ಉದಾರವಾಗಿದೆ. ಅದರ ಐಪಿಒನಲ್ಲಿ ಷೇರುಗಳನ್ನು ತೆಗೆದುಕೊಂಡವರು, ಈಗ ಅವರ ಸಂಖ್ಯೆ ಹೆಚ್ಚಾಗಿದೆ.

ಶೇ. 3000ರಷ್ಟು ಆದಾಯ

ಶೇ. 3000ರಷ್ಟು ಆದಾಯ

ಟಾಟಾ ಗ್ರೂಪ್‌ನ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಅನ್ನು 2004 ರಲ್ಲಿ ಭಾರತೀಯ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾಯಿತು. ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ಸ್ಟಾಕ್ ಅನ್ನು 2004 ರಲ್ಲಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಂದಿನಿಂದ, ಇದು ತನ್ನ ಹೂಡಿಕೆದಾರರಿಗೆ ಶೇಕಡಾ 3000ರಷ್ಟು ಆದಾಯವನ್ನು ನೀಡಿದೆ. ಟಿಸಿಎಸ್‌ನ 17 ನೇ ವಾರ್ಷಿಕ ಸಭೆಯಲ್ಲಿ ಎನ್ ಚಂದ್ರಶೇಖರನ್ ಈ ವಿಷಯ ತಿಳಿಸಿದ್ದಾರೆ.

ಪ್ರತಿ ಷೇರಿಗೆ 850 ರೂ. ನಿಗದಿಯಾಗಿತ್ತು

ಪ್ರತಿ ಷೇರಿಗೆ 850 ರೂ. ನಿಗದಿಯಾಗಿತ್ತು

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನ ಐಪಿಒ 2004 ರಲ್ಲಿ ಬಂದಿತು. ಆ ಸಮಯದಲ್ಲಿ ಕಂಪನಿಯು ತನ್ನ ಹೂಡಿಕೆದಾರರಿಗೆ ಪ್ರತಿ ಷೇರಿಗೆ 850 ರೂ. ನಿಗದಿಮಾಡಿತ್ತು. ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರ ಪ್ರಕಾರ, ಇಂದು ಕಂಪನಿಯ ಪ್ರತಿ ಷೇರಿನ ಮೌಲ್ಯವು ಸುಮಾರು 28,000 ರೂ. ಇದು ಪ್ರತಿ ಷೇರಿಗೆ ಪಡೆದ ಬೋನಸ್ ಷೇರುಗಳು ಮತ್ತು ಲಾಭಾಂಶಗಳನ್ನು ಒಳಗೊಂಡಿದೆ. ಹೀಗಾಗಿ, ಹೂಡಿಕೆದಾರರು 17 ವರ್ಷಗಳ ಹಿಂದೆ ಐಪಿಒನಲ್ಲಿ ಈ ಕಂಪನಿಯ 10 ಷೇರುಗಳನ್ನು (8500 ರೂಗಳಿಗೆ) ತೆಗೆದುಕೊಂಡು ಅವುಗಳನ್ನು ಮಾರಾಟ ಮಾಡಿಲ್ಲವಾದರೆ, ಈ ಸಮಯದಲ್ಲಿ ಅದರ ಮೌಲ್ಯವು 2.80 ಲಕ್ಷ ರೂ.

ಇಂದಿನ ಟಿಸಿಎಸ್ ಷೇರಿನ ಬೆಲೆ ತಿಳಿಯಿರಿ

ಇಂದಿನ ಟಿಸಿಎಸ್ ಷೇರಿನ ಬೆಲೆ ತಿಳಿಯಿರಿ

ಟಿಸಿಎಸ್‌ನ ಷೇರು ಎನ್‌ಎಸ್‌ಇಯಲ್ಲಿ 11 ಜೂನ್ 2021 ರಂದು ದಿನದ ವಹಿವಾಟು ಅಂತ್ಯಕ್ಕೆ 3,279 ರೂಪಾಯಿನಷ್ಟಿದೆ. ಟಿಸಿಎಸ್ ವರ್ಷದ ಗರಿಷ್ಠ 3,358.80 ರೂ ಮತ್ತು ಬಿಎಸ್‌ಇಯಲ್ಲಿ 2,000.60 ರೂ. ತಲುಪಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+