ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ತನ್ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ನಾಲ್ಕು ಉದ್ಯೋಗಿಗಳನ್ನು ಅಮಾನತುಗೊಳಿಸಿದೆ. ಈ ತಿಂಗಳಿನಲ್ಲಿ ಪ್ರಕಟವಾದ ವಿಸ್ಲ್‌ಬ್ಲೋವರ್ ವರದಿಯ ಬೆನ್ನಲ್ಲೇ ಟಿಸಿಎಸ್ ತನ್ನ ನಾಲ್ಕು ಉದ್ಯೋಗಿಗಳನ್ನು ವಜಾಗೊಳಿಸಿದೆ. ದೇಶದ ಅತಿದೊಡ್ಡ ಐಟಿ ಸೇವೆಗಳ ಕಂಪನಿಯು ಗುತ್ತಿಗೆ ಆಧಾರದ ಮೇಲೆ ಉದ್ಯೋಗಿಗಳನ್ನು ಒದಗಿಸಿದ ಸಂಸ್ಥೆಗಳನ್ನು ಕೂಡಾ ನಿರ್ಬಂಧಿಸಿದೆ.
ವಿನಿಮಯ ಕೇಂದ್ರಗಳಿಗೆ ತಡರಾತ್ರಿ ನೀಡಿದ ಹೇಳಿಕೆಯಲ್ಲಿ ಟಿಸಿಎಸ್ ದೂರಿನಲ್ಲಿ ಮಾಡಲಾದ ಆರೋಪಗಳನ್ನು ತನಿಖೆ ಮಾಡಿದೆ ಎಂದು ತಿಳಿಸಿದೆ. ತನಿಖೆಯಲ್ಲಿ ಕಂಪನಿಯಿಂದ ಅಥವಾ ಅದರ ವಿರುದ್ಧವಾಗಿ ಯಾವುದೇ ಲಂಚ ಪ್ರಕರಣಗಳು ನಡೆದಿಲ್ಲ ಎಂದು ತಿಳಿಸಿದೆ. ಇನ್ನು ಶುಕ್ರವಾರ ಪ್ರಕಟವಾದ ವರದಿಯಲ್ಲಿ "ನೇಮಕಾತಿ ಪ್ರಕ್ರಿಯೆಯಲ್ಲಿ ಲಂಚ ಪಡೆಯಲಾಗಿದೆ ಎಂಬುವುದು ತಪ್ಪಾಗಿದೆ," ಎಂದು ಸ್ಪಷ್ಟಪಡಿಸಿದೆ.

ಸಂಪನ್ಮೂಲ ನಿರ್ವಹಣಾ ಗುಂಪಿಗೆ (ಆರ್‌ಎಂಜಿ) ವಿವಿಧ ಯೋಜನೆಗಳಿಗೆ ಸಂಪನ್ಮೂಲಗಳನ್ನು ಹಂಚಿಕೆ ಮಾಡಲು ಮತ್ತು ಗುತ್ತಿಗೆದಾರರ ಮೂಲಕ ಕೊರತೆಯನ್ನು ತುಂಬಲು ವಹಿಸಲಾಗಿದೆ ಎಂದು ಅದು ಹೇಳಿದೆ. ಕಂಪನಿಯು ತನ್ನ ಯಾವುದೇ ಪ್ರಮುಖ ವ್ಯವಸ್ಥಾಪಕರು ಯಾವುದೇ ಅಕ್ರಮಗಳಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ ಆರೋಪದಲ್ಲಿ ನಾಲ್ಕು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ ತನಿಖೆಯ ನಂತರ ಕಂಪನಿಯು ನಾಲ್ಕು ಉದ್ಯೋಗಿಗಳನ್ನು ಮತ್ತು ಅನಿರ್ದಿಷ್ಟ ಗುತ್ತಿಗೆದಾರರನ್ನು ಅಮಾನತುಗೊಳಿಸಿದೆ ಎಂದು ಹೇಳಿದೆ. ಯಾವುದೇ ಹಣಕಾಸಿನ ವ್ಯವಹಾರಗಳು ನಡೆದಿಲ್ಲ ಮತ್ತು ನಿರ್ದಿಷ್ಟ ವ್ಯಕ್ತಿಗಳ ನೇಮಕಾತಿ ಮಾಡುವಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವಿವರಿಸಿದೆ.
ಕೆಲಸಕ್ಕಾಗಿ ಲಂಚವನ್ನು ಪಡೆದ ಆರೋಪ
ಟಿಸಿಎಸ್‌ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲಸ ಕೊಡುವ ಕನ್ಸಲ್ಟೆನ್ಸಿ ಸಂಸ್ಥೆಗಳಿಂದ ಲಂಚ ಸ್ವೀಕರಿಸಿದ ಆರೋಪ ಕೇಳಿ ಬಂದಿದೆ. ಈ ಟಿಸಿಎಸ್‌ನಲ್ಲಿ ಕೆಲ ಹಿರಿಯ ಅಧಿಕಾರಿಗಳೇ ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಕೂಡಾ ವರದಿಯಾಗಿದೆ. ದಿ ಮಿಮಟ್ ಪತ್ರಿಕೆಯಲ್ಲಿ ಈ ವರದಿಯಾಗಿದೆ. ಸುಮಾರು 100 ಕೋಟಿ ರೂಪಾಯಿಗಳ ಮೌಲ್ಯದ ಲಂಚ ಪ್ರಕರಣ ಇದಾಗಿದೆ.
ಸಂಸ್ಥೆಯ ಉದ್ಯೋಗಿಯೊಬ್ಬರು ಈ ಪ್ರಕರಣವನ್ನು ಸಿಇಒ ಮತ್ತು ಸಿಒಒ ಗಮನಕ್ಕೆ ತಂದಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಲಾಗಿರುವ ರಿಸೋರ್ಸ್ ಮ್ಯಾನೇಜ್‌ಮೆಂಟ್ ಗ್ರೂಪ್‌ನ ಗ್ಲೋಬಲ್ ಹೆಡ್ ಇಎಸ್ ಚಕ್ರವರ್ತಿ ಸೆರಿದಂತೆ ನಾಲ್ವರು ಹಿರಿಯ ಅಧಿಕಾರಿಗಳನ್ನು ಟಿಸಿಎಸ್ ವಜಾಗೊಳಿಸಿದೆ. ಜೊತೆಗೆ, ಮೂರು ಸ್ಟ್ಯಾಫಿಂಗ್ ಸಂಸ್ಥೆ ಅಥವಾ ಕನ್ಸಲ್ಟೆನ್ಸಿ ಸಂಸ್ಥೆಗಳನ್ನು ನಿಷೇಧಿಸಿದೆ.
ಸಂಸ್ಥೆಯ ಹಿರಿಯರಾದ ಕೆ ಕೃತಿವಾಸನ್ ಅವರು ಸಿಇಒ ಆಗಿ ನೇಮಕವಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಇನ್ನು ಕಳೆದ ಮೂರು ವರ್ಷಗಳಿಂದ ಉದ್ಯೋಗ ನೀಡಲು ಲಂಚ ಸ್ವೀಕರಿಸುವ ಕಾರ್ಯ ನಡೆಯುತ್ತಿದೆ ಎಂದು ವರದಿಯು ಹೇಳಿದೆ. ಸಂಸ್ಥೆಯಲ್ಲಿ ಇಎಸ್ ಚಕ್ರವರ್ತಿ ಹೈರಿಂಗ್ ಏಜೆನ್ಸಿಗಳಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂದು ಸಂಸ್ಥೆಯ ಉದ್ಯೋಗಿಯೊಬ್ಬರು ಆರೋಪ ಮಾಡಿದ್ದಾರೆ.
ಇದಾದ ಬಳಿಕ ಟಿಸಿಎಸ್‌ನ ಟಾಪ್ ಮಾನೆಜ್‌ಮೆಂಟ್ ಒಂದು ಕಮೀಟಿಯನ್ನು ರಚನೆ ಮಾಡಿ ತನಿಖೆಯನ್ನು ನಡೆಸಿದೆ. ಅದಾದ ಬಳಿಕ ನೇಮಕಾತಿ ವಿಭಾಗದ ಮುಖ್ಯಸ್ಥರನ್ನು ರಜೆಯಲ್ಲಿ ಕಳುಹಿಸಿದೆ. ನಾಲ್ಕು ಮಂದಿಯನ್ನು ವಜಾಗೊಳಿಸಲಾಗಿದೆ. ಹಾಗೆಯೇ ಇಎಸ್ ಚಕ್ರವರ್ತಿರನ್ನು ಕಚೇರಿಗೆ ಬರದಂತೆ ನಿರ್ಬಂಧ ಮಾಡಲಾಗಿದೆ. ಹಾಗೆಯೇ ಆರ್‌ಬಿಎಂ ವಿಭಾಗದ ದ ಮತ್ತೊಬ್ಬ ಅಧಿಕಾರಿ ಜಿಕೆ ಅರುಣ್‌ರನ್ನು ಕೂಡಾ ಉದ್ಯೋಗದಿಂದ ವಜಾಗೊಳಿಸಲಾಗಿದೆ.
ಕಳೆದ 3 ವರ್ಷಗಳಿಂದ ಕಂಪನಿ 3 ಲಕ್ಷ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡಿದೆ. ಸಾಮಾನ್ಯವಾಗಿ ಸರ್ಕಾರಿ ಕೆಲಸಗಳಿಗೆ ಲಂಚವನ್ನು ನೀಡಿ ಉದ್ಯೋಗವನ್ನು ನಿಡಲಾಗುತ್ತದೆ. ಇಂತಹ ಬೆಳವಣಿಗೆ ಈಗ ಖಾಸಗಿ ಉದ್ಯೋಗದಲ್ಲಿಯೂ ಸೃಷ್ಟಿಯಾಗಿದೆ.


Click it and Unblock the Notifications