ರಾಜ್ಯದ ಜನರಿಗೆ ಸಾಲು ಸಾಲು ಶಾಕಿಂಗ್ ನ್ಯೂಸ್..! ಗಾಯದ ಮೇಲೆ ಬರೆ ಎಳೆಯುವುದು ಅಂದರೆ ಇದೇ... ಹೌದು, ರಾಜ್ಯದಲ್ಲಿ ಮೆಟ್ರೋ ಪ್ರಯಾಣ ದರ ಆಯ್ತು, ಬಸ್ ದರ ಆಯ್ತು, ಕಸದಲ್ಲೂ ಹಣವನ್ನು ವಸೂಲಿ ಮಾಡಿ ಆಯ್ತು.. ಹಾಲು, ಡೀಸೆಲ್ ದರ ಹೆಚ್ಚಳವೂ ಆಯ್ತು.. ಬೆಲೆ ಏರಿಕೆಯಿಂದ ಬೇಸತ್ತ ಜನರಿಗೆ ಮತ್ತೊಂದು ದರ ಏರಿಕೆಗೆ ಬಿಸಿ ತಟ್ಟಲಿದ್ದು, ನಂದಿನಿ ಹಾಲಿನ ದರದ ಬೆನ್ನಲ್ಲೇ ಕಾಫಿ ಟೀ ದರಗಳ ಬೆಲೆ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ.
ಈಗಾಗಲೇ ಕೆಲವೊಂದು ಕಡೆಯಲ್ಲಿ ಹಾಲು ದರ ಏರಿಕೆಯಿಂದಾಗಿ ಟೀ, ಕಾಫಿ ದರ ಕೂಡ ಏರಿಕೆಯಾಗಿದೆ. ಟೀ ಅಂಗಡಿ ಮುಂದೆ ದರ ಏರಿಕೆ ಬೋರ್ಡ್ ನ್ನು ಹಾಕಲಾಗಿದೆ. ಹಾಲು, ಕಾಫಿ, ಹಾಗೂ ಟೀ ಪುಡಿ ಹೆಚ್ಚಳದಿಂದ ದರ ಏರಿಕೆ ಮಾಡಲಾಗಿದೆ ಎಂದು ಬೋರ್ಡ್ ನಲ್ಲಿ ಬರೆದುಕೊಂಡು ಮನವಿಯನ್ನು ಮಾಡಿಕೊಂಡಿದ್ದಾರೆ.

ಟೀ, ಕಾಫಿ 5 ರಿಂದ 10 ರೂ ಏರಿಕೆ
ಅಂಗಡಿಗಳಲ್ಲಿ ಹೋಟೆಲ್ ಗಳಲ್ಲಿ ಕಾಫಿ, ಟೀ ದರ ಏರಿಕೆಯಾಗಿದೆ. ಒಂದು ಗ್ಲಾಸ್ ಕಾಫಿ ಮತ್ತು ಟೀ ಬೆಲೆ
5 ರಿಂದ 10 ರೂಪಾಯಿವರೆಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಸಾಕಷ್ಟು ಹೋಟೆಲ್ ಗಳು ಬೆಲೆ ಏರಿಕೆ ಮಾಡಿದೆ. ಆದ್ರೆ ಹೋಟೆಲ್ ಪ್ರಿಯರು ಕಾಫಿ, ಟೀಗೆ 5 ರೂಪಾಯಿ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆಯ ಬೆಂಕಿ ಬಡವರನ್ನು ಸುಡುತ್ತಲೇ ಇದೆ.
ಯಾವೆಲ್ಲಾ ವಸ್ತುಗಳ ದರ ಏರಿಕೆಯಾಗಿದೆ? ಇಲ್ಲಿ ತಿಳಿಯಿರಿ
ವಿದ್ಯುತ್ ದರ ಏರಿಕೆ
ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ ಏರಿಕೆಯಾಗಿದೆ. ಇದರಿಂದ ವಿದ್ಯುತ್ ಬಳಕೆದಾರರಿಗೆ ಹೆಚ್ಚುವರಿ ವೆಚ್ಚವನ್ನು ಹೊರಬೇಕಾಗುತ್ತದೆ. ಇದರ ಜೊತೆಗೆ ಮಾಸಿಕ ಶುಲ್ಕ ಕೂಡ 20 ರೂಪಾಯಿ ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ, 120 ರೂಪಾಯಿಗೆ ಇದ್ದ ನಿಗದಿತ ಶುಲ್ಕವು 140 ರೂಪಾಯಿಗೆ ಏರಿಕೆಯಾಗಲಿದೆ.
ಹಾಲು, ಮೊಸರಿನ ದರ ಏರಿಕೆ
ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್ ದರ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಯಾಗಿದೆ. ಇದು ಹಾಲು ಖರೀದಿಸಲು ಗ್ರಾಹಕರ ಜೇಬು ಸುಡಲಿದೆ. ಇದರ ಜೊತೆಗೆ, ಮೊಸರಿನ ದರವೂ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಯಾಗಿದೆ.
ಬಿಬಿಎಂಪಿ ಕಸ ಸಂಗ್ರಹದ ಹೆಚ್ಚಳ
ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಕಸದ ಸಂಗ್ರಹದ ಸೆಸ್ ಹೆಚ್ಚಳವನ್ನು ಮಾಡಲಾಗಿದು ಇಂದರಲ್ಲೂ ಸಹ ಹಣವನ್ನು ಸರ್ಕಾರ ಮಸೂಲಿ ಮಾಡುತ್ತಿದೆ.
ಹೊಸ ವಾಹನ ಖರೀದಿಗೂ ಕೂಡ ಬೆಲೆ ಏರಿಕೆ
ಉಕ್ಕು ಮತ್ತು ವಾಹನಗಳ ಬಿಡಿಭಾಗಗಳ ಆಮದು, ಜೊತೆಗೆ ಉಕ್ಕುಗಳ ಆಮದು ದರ ಹೆಚ್ಚಾಗಲಿದೆ. ಇದರ ಪರಿಣಾಮವಾಗಿ, ಹೊಸ ವಾಹನಗಳು ಖರೀದಿಸುವುದಾದರೆ, ವೆಚ್ಚ ಮತ್ತು ಬೆಲೆ ಹೆಚ್ಚಾಗಬಹುದು. ಈ ದರ ಏರಿಕೆಗೆ ವಾಹನ ಉತ್ಪಾದನೆ ಮತ್ತು ಆಮದು ಮೌಲ್ಯಗಳು ಪ್ರಭಾವಿತವಾಗುತ್ತವೆ. ವಾಹನಗಳ ಬಿಡಿಭಾಗಗಳು (ಜೊತೆಗಾರ ಭಾಗಗಳು) ಮತ್ತು ಉಕ್ಕುಗಳು ಮುಖ್ಯವಾದ ಘಟಕಗಳು ಆಗಿರುವುದರಿಂದ, ಅವುಗಳ ಬೆಲೆಯ ಏರಿಕೆಯಿಂದ ಗೋಲ್ಡನ್ ಮೊಟಾರ್ ಕಂಪನಿಗಳು ಮತ್ತು ವಾಹನ ಉತ್ಪಾದಕರಿಗೆ ಹೆಚ್ಚು ವೆಚ್ಚ ಬರಲಿದೆ,ಇದು ಖರೀದಿದಾರರಿಗೆ ಬೆಲೆಯ ಬೆಂಕಿ ಗ್ರಾಹಕರಿಗೆ ತಗುಲುತ್ತದೆ.
ಮುದ್ರಾಂಕ ಶುಲ್ಕ, ಅಪಿಡವಿಟ್ ಶುಲ್ಕ
ಇದು 50 ರೂಪಾಯಿಯಿಂದ 500 ರೂಪಾಯಿಗೆ ಏರಿಕೆಯಾಗುತ್ತಿದೆ. ಇದರಿಂದ, ವಿವಿಧ ರೀತಿಯ ಕಾನೂನಿನ ದಾಖಲೆಗಳನ್ನು ಚಲಾಯಿಸಲು ಅಥವಾ ಮಾನ್ಯತೆ ನೀಡಲು ಮೊತ್ತ ಹೆಚ್ಚುತ್ತದೆ.
ಅಫಿಡವಿಟ್ ಶುಲ್ಕ: ಇದು 20 ರೂಪಾಯಿಯಿಂದ 100 ರೂಪಾಯಿಗೆ ಏರಿಕೆಯಾಗುತ್ತಿದೆ. ಅಫಿಡವಿಟ್ ಅಥವಾ ಹಸ್ತಪರಿಶೀಲೆ ಸಂಬಂಧಿತ ದಾಖಲೆಗಳನ್ನು ಪ್ರಕ್ರಿಯೆಗೆ ತರುವ ಸಂದರ್ಭದಲ್ಲಿ, ಈ ಶುಲ್ಕ ಹೆಚ್ಚಿದ ನಂತರ ಹೆಚ್ಚು ವೆಚ್ಚವಾಗಲಿದೆ.
ಟೋಲ್ ದರ ಹೆಚ್ಚಳ
ಹೆದ್ದಾರಿ ಪ್ರಾಧಿಕಾರ ಟೋಲ್ ದರ ಅನ್ನು ಶೇಕಡಾ 3 ರಿಂದ 5 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಈ ಹೆಚ್ಚಳವು ರಾಜ್ಯದ ಒಟ್ಟು 66 ಟೋಲ್ ಪ್ಲಾಜಾಗಳ ಮೇಲೆ ಪರಿಣಾಮ ಬೀರುವುದರಿಂದ,ವಾಹನ ಸವಾರರು ಹೆಚ್ಚು ಟೋಲ್ ಶುಲ್ಕವನ್ನು ಚಲಾಯಿಸಬೇಕಾಗುತ್ತದೆ.


Click it and Unblock the Notifications