ಹತ್ತು ರೂಪಾಯಿಗೆ ಟೀ,20 ರೂ.ಗೆ ಸಮೋಸ ಸಿಗುವ ದೇಶ ಏಕೈಕ ವಿಮಾನ ನಿಲ್ದಾಣವಾಗಿದೆ ಹೌದು ಇಲ್ಲಿ ವಿಮಾನ ಯಾನ ಸಹ ದುಬಾರಿ ಸಹ ಇರುವುದಿಲ್ಲ ಹಾಗಿದ್ರೆ ಇದು ಯಾವ ವಿಮಾನ ನಿಲ್ದಾಣ ಎಲ್ಲಿ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...
ಹೌದು,ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ದೇಶದ ಮೊದಲ ಕಡಿಮೆ ಬೆಲೆಗೆ ಆಹಾರ ಕಫೆಯನ್ನು ಆರಂಭಿಸಲಾಗಿದೆ. ಉಡಾನ್ ಯಾತ್ರಿ ಕೆಫೆಯಲ್ಲಿ ಪ್ರಯಾಣಿಕರಿಗೆ ಕೇವಲ 10 ರೂಪಾಯಿಗೆ ಚಹಾ ನೀಡಲಾಗುತ್ತದೆ.

ಉಡಾನ್ ಯಾತ್ರಿ ಕೆಫೆ ಆರಂಭವಾಗಿದು ಯಾವಾಗ?
ಕಳೆದ ವರ್ಷ ಡಿಸೆಂಬರ್ 21 ರಂದು ಕೋಲ್ಕತ್ತಾ ವಿಮಾನ ನಿಲ್ದಾಣದ ಶತಮಾನೋತ್ಸವದ ಸಂದರ್ಭದಲ್ಲಿ ಈ ಕೆಫೆಯನ್ನು ಪ್ರಾರಂಭಿಸಲಾಯಿತು.ಕೆಫೆಯನ್ನು ಉದ್ಘಾಟಿಸಿದ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು, ಕೆಫೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಮಾಹಿತಿಯನ್ನು ತಿಳಿಸಿದ್ದರು.
ಉಡಾನ್ ಯಾತ್ರಿ ಕೆಫೆಯಲ್ಲಿ ಪ್ರಯಾಣಿಕರಿಗೆ ಕೇವಲ 10 ರೂಪಾಯಿಗೆ ಚಹಾ ನೀಡಲಾಗುತ್ತದೆ.ಆದರೆ ವಿಮಾನ ನಿಲ್ದಾಣದ ಇತರ ಅಂಗಡಿಗಳಲ್ಲಿ ಅದೇ ಚಹಾವನ್ನು ಹೆಚ್ಚಿನ ಪಟ್ಟು ಬೆಲೆಯನ್ನು ಮಾಡಿ ಮಾರಾಟ ಮಾಡಲಾಗುತ್ತದೆ.
ಈ ಕುರಿತು ಸಾಮಾಜಿಕ ಜಾಲತಾಣವಾಗದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಚಿವರು ನಾಗರಿಕ ವಿಮಾನಯಾನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ, ಪ್ರತಿ ಭಾರತೀಯರಿಗೂ ವಿಮಾನ ಪ್ರಯಾಣವನ್ನು ಹೆಚ್ಚು ಸುಲಭ ಮತ್ತು ಕೈಗೆಟುಕುವಂತೆ ಮಾಡುವುದು ನನ್ನ ಗುರಿಯಾಗಿದೆ ಎಂದು ಹೇಳಿದ್ದರು.
ದೇಶದ ಮೊದಲ ಅಗ್ಗದ ಆಹಾರ ಮಳಿಗೆ
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿರುವ ಉಡಾನ್ ಯಾತ್ರಿ ಕೆಫೆಯು ದೇಶದಲ್ಲಿ ಮೊದಲ ಅಗ್ಗದ ಆಹಾರ ಮಳಿಗೆಯಾಗಿದೆ.ಈ ದಿಕ್ಕಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ವಿಮಾನ ನಿಲ್ದಾಣದ ಮೂಲಗಳ ಮಾಹಿತಿ ಪ್ರಕಾರ, ಖಾಸಗಿ ಕಂಪನಿಯೊಂದು ಈ ಕೆಫೆಯನ್ನು ನಿರ್ವಹಿಸುತ್ತಿದೆ. ಇಲ್ಲಿ ನೀರಿನ ಬಾಟಲಿಗಳು 10 ರೂ.ಗೆ, ಕಾಫಿ, ಸಿಹಿತಿಂಡಿಗಳು ಮತ್ತು ಸಮೋಸಾಗಳು 20 ರೂ.ಗೆ ಲಭ್ಯವಿವೆ. ಮುಂದಿನ ದಿನಗಳಲ್ಲಿ ಇತರ ವಿಮಾನ ನಿಲ್ದಾಣಗಳಲ್ಲೂ ಇಂತಹ ಅಗ್ಗದ ಕೆಫೆಗಳನ್ನು ಆರಂಭಿಸಬಹುದು ಎಂದು ಮಾಹಿತಿಯನ್ನು ತಿಳಿಸಿದೆ.
ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ದೇಶದ ಮೊದಲ 'ಅಗ್ಗದ ಆಹಾರ' ಕೆಫೆ ಆರಂಭಿಸಲಾಗಿದೆ. ಉಡಾನ್ ಯಾತ್ರಿ ಕೆಫೆಯಲ್ಲಿ ಪ್ರಯಾಣಿಕರಿಗೆ ಕೇವಲ 10 ರೂಪಾಯಿಗೆ ಚಹಾ ನೀಡಲಾಗುತ್ತದೆ. ಆದರೆ ವಿಮಾನ ನಿಲ್ದಾಣದ ಇತರ ಅಂಗಡಿಗಳಲ್ಲಿ ಅದೇ ಚಹಾವನ್ನು ಹೆಚ್ಚಿನ ಬೆಲೆಗೆ ಮಾರಾಟವನ್ನು ಮಾಡಲಾಗುತ್ತದೆ.
ಈ ಕೆಫೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಸಹಯೋಗದಲ್ಲಿ ಪ್ರಾರಂಭಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಆಹಾರ ಮತ್ತು ಪಾನೀಯಗಳ ಬೆಲೆ ಹೆಚ್ಚು ಎನ್ನುವ ಪ್ರಯಾಣಿಕರ ದೂರಿನ ಹಿನ್ನೆಲೆಯಲ್ಲಿ ಈ ಕೆಫೆಯನ್ನು ಆರಂಭ ಮಾಡಲಾಗಿದೆ.
ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಆಹಾರ ಪದಾರ್ಥಗಳು ಮತ್ತು ಪಾನೀಯಗಳ ಬೆಲೆಗಳು ರೈಲ್ವೆ ನಿಲ್ದಾಣಕ್ಕಿಂತ ಶೇ.100 ಮತ್ತು 200 ಹೆಚ್ಚಿವೆ ಎನ್ನುವುದು 60 ಪ್ರತಿಶತ ಪ್ರಯಾಣಿಕರ ಅಭಿಪ್ರಾಯವನ್ನು ತಿಳಿಸಿದ್ದಾರೆ. ವಿಮಾನ ನಿಲ್ದಾಣ ಕಳೆದ ತಿಂಗಳು ಬಿಡುಗಡೆಯಾದ ಸಮೀಕ್ಷೆಯಲ್ಲಿ 28,000 ಕ್ಕೂ ಹೆಚ್ಚು ವಿಮಾನ ಪ್ರಯಾಣಿಕರು ಭಾಗಿಯಾಗಿದ್ದರು.
ವಿಮಾನ ನಿಲ್ದಾಣದಲ್ಲಿ ಸಮೋಸಾ ಅಥವಾ ಪಪ್ಸ್ ಬೆಲೆ 200 ರೂ.ಗಿಂತ ಹೆಚ್ಚಿದ್ದು, ಕಾಫಿ ಅಥವಾ ಟೀ ದಿನಕ್ಕೆ೩ 200 ರಿಂದ 300 ರೂ.ಗೆ ಮಾರಾಟ ಮಾಡಲಾಗುತ್ತದೆ ಎಂದು ಸಮೀಕ್ಷೆಯಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ. ಈ ಬೆಲೆಯು ಮಾಲ್ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಆಹಾರದ ಅಂಗಡಿಗಳಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.
ಇನ್ಮಂದೆ ಆಹಾರವನ್ನು ಕಡಿಮೆ ಬೆಲೆಗೆ ಸೇವನೆ ಮಾಡಬಹುದು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications