ಇಂಗ್ಲೆಂಡ್ ಸದ್ಯ ಭಾರತದ ಪ್ರವಾಸದಲ್ಲಿದೆ. ಈ ಪ್ರವಾಸದ ಮೊದಲ ಪಂದ್ಯದಲ್ಲಿ ಯಶ ಕಂಡಿದ್ದ ಆಂಗ್ಲ ಪಡೆ, ನಂತರ ಸತತ ನಿರಾಸೆಯನ್ನು ಕಂಡಿದೆ. ಈ ವೈಫಲ್ಯಕ್ಕೆ ಟೀಮ್ ಇಂಡಿಯಾ ಸಂಘಟಿತ ಆಟ ಎದ್ದು ಕಾಣುತ್ತದೆ. ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಯಶಸ್ವಿ ಜೈಸ್ವಾಲ್ ಭರ್ಜರಿ ಪ್ರದರ್ಶನ ನೀಡಿದ್ದಾರೆ.
ವಿಶಾಖಪಟ್ಟಣಂ ಟೆಸ್ಟ್ ಹಾಗೂ ಇತ್ತೀಚಿಗೆ ನಡೆದ ರಾಜ್‌ಕೋಟ್ ಟೆಸ್ಟ್‌ನಲ್ಲಿ ಅಬ್ಬರಿಸಿ ಬೊಬ್ಬೆರೆದ ಯಶಸ್ವಿ ಎರಡೂ ಟೆಸ್ಟ್‌ಗಳಲ್ಲೂ ದ್ವಿಶತಕ ಸಾಧನೆ ಮಾಡಿದ್ದರು. ಇದರಿಂದ ಇಂಗ್ಲೆಂಡ್ ಬೌಲರ್‌ಗಳಿಗೆ ಹೇಳಲಾಗದ ಸಂಕಟ. ಟೀಮ್ ಇಂಡಿಯಾದ ಯುವ ಬ್ಯಾಟರ್ ಆರ್ಭಟಕ್ಕೆ ಇಂಗ್ಲೆಂಡ್ ತಂಡ ಫುಲ್ ಸೈಲೆಂಟ್..

ಬಾಲ್ಯವನ್ನು ಬಡತನದಲ್ಲೇ ಕಳೆದ ಸ್ಟಾರ್ ಕ್ರಿಕೆಟ್ ಪ್ಲೇಯರ್ ಈಗ ಐಶಾರಾಮಿ ಜೀವನ ಶೈಲಿಯನ್ನು ನಡೆಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಯುವ ತಾರೆ ಯಶಸ್ವಿ ಜೈಸ್ವಾಲ್ ಮುಂಬೈನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಫ್ಲಾಟ್ ಖರೀದಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಈ ಫ್ಲ್ಯಾಟ್‌ನ ಬೆಲೆ 5.4 ಕೋಟಿ ರೂ.
ಮಾಧ್ಯಮ ವರದಿಗಳ ಪ್ರಕಾರ, ಈ ಫ್ಲ್ಯಾಟ್ ಖರೀದಿಸುವ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿತ್ತು. ಈ ಅಪಾರ್ಟ್ಮೆಂಟ್ನ ಗಾತ್ರ 1,110 ಚದರ ಅಡಿ. ಇದರ ನೋಂದಣಿಯನ್ನು ಜನವರಿ 7 ರಂದು ಮಾಡಲಾಗಿದೆ ಎಂದು ತಿಳಿದು ಬಂದಿದೆ.. ಅಪಾರ್ಟ್ಮೆಂಟ್ ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದರೂ. ಈ ವರ್ಷ ಈ ಅಪಾರ್ಟ್‌ಮೆಂಟ್ ಯಶಸ್ವಿಗೆ ಹಸ್ತಾಂತರವಾಗಲಿದೆ.
ಯಶಸ್ವಿ ಜೈಸ್ವಾಲ್ ಬಾಲ್ಯ ತುಂಬಾ ಕಷ್ಟಕರವಾಗಿತ್ತು. ಕ್ರಿಕೆಟ್‌ನಲ್ಲಿ ಅವರ ಉತ್ಸಾಹವು ಅವರನ್ನು ಯುಪಿಯ ಭದೋಹಿಯಿಂದ ಮುಂಬೈಗೆ ಕರೆತಂದಿತು. ಮುಂಬೈನ ಆಜಾದ್ ಮೈದಾನದಲ್ಲಿ ಯಶಸ್ವಿ ಕ್ರಿಕೆಟ್‌ನ ಸೂಕ್ಷ್ಮತೆಗಳನ್ನು ಕಲಿತಿದ್ದಾರೆ.

ಯಶಸ್ವಿ ಖರೀದಿಸಿರುವ ಪ್ರಾಜೆಕ್ಟ್ ಅದಾನಿ ರಿಯಾಲ್ಟಿಯ X BKC ವಸತಿ ಯೋಜನೆಯಾಗಿದೆ. ಇದನ್ನು 2016 ರಲ್ಲಿ 2BHK, 3BHK ಮತ್ತು 4BHK ಅಪಾರ್ಟ್ಮೆಂಟ್ಗಳೊಂದಿಗೆ ಪ್ರಾರಂಭಿಸಲಾಯಿತು.
ಯಶಸ್ವಿ ಖರೀದಿಸಿರುವ ಅಪಾರ್ಟ್‌ಮೆಂಟ್ ಸಾಕಷ್ಟು ಐಷಾರಾಮಿಯಾಗಿದೆ. ಮನೆಯ ಒಳಗಡೆ ಅಲಂಕರಿಕ ಕೆಲಸ ನಡೆಯುತ್ತಿದೆ. ಅದಾನಿ ಸಮೂಹದ ರಿಯಾಲ್ಟಿ ಕಂಪನಿಯು ಮುಂಬೈನಲ್ಲಿ ಮತ್ತೊಂದು ದೊಡ್ಡ ರಿಯಲ್ ಎಸ್ಟೇಟ್ ಯೋಜನೆಯನ್ನು ಹೊಂದಿದೆ.
ಮುಂಬೈನ ಮಧ್ಯದಲ್ಲಿರುವ ಧಾರಾವಿ ಕೊಳೆಗೇರಿಯನ್ನು ಪುನರಾಭಿವೃದ್ಧಿ ಮಾಡುವ ಕೆಲಸವನ್ನು ಅದಾನಿ ಗ್ರೂಪ್ ಪಡೆದುಕೊಂಡಿದೆ. ಅದಾನಿ ಗ್ರೂಪ್ ಅನ್ನು ನವೆಂಬರ್ 2022 ರಲ್ಲಿ ಧಾರವಿ ಪುನರಾಭಿವೃದ್ಧಿ ಯೋಜನೆಯ ವಿಜೇತರಾಗಿ ಆಯ್ಕೆ ಮಾಡಲಾಯಿತು.
ಯಶಸ್ವಿ ಜೈಸ್ವಾಲ್ ಅವರ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಏರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ ಯಶಸ್ವಿ ಅವರ ವಾರ್ಷಿಕ ವೇತನ 4 ಕೋಟಿ ರೂ. ಅವರ ನಿವ್ವಳ ಮೌಲ್ಯ ಸುಮಾರು 16 ಕೋಟಿ ರೂ. ಅವರು ಕಳೆದ ವರ್ಷ ಮುಂಬೈನ ಥಾಣೆಯಲ್ಲಿ 5 BHK ಫ್ಲಾಟ್ ಅನ್ನು ಸಹ ಖರೀದಿಸಿದ್ದರು.


Click it and Unblock the Notifications