ಬೆಂಗಳೂರು, ಏಪ್ರಿಲ್ 26: ಐಟಿ ಸೇವೆಗಳ ಕಂಪೆನಿ ಟೆಕ್ ಮಹೀಂದ್ರಾ (Tech Mahindra) 2025ರ ಹಣಕಾಸು ವರ್ಷದಲ್ಲಿ 6,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿದೆ. ಕಠಿಣ ವ್ಯಾಪಾರ ವಾತಾವರಣ ಕಾರಣ ನೇಮಕಾತಿ ತಗ್ಗಿರುವ ಬೆಳವಣಿಗೆ ನಡುವೆಯೂ ಟೆಕ್ ಮಹೀಂದ್ರಾ ನೇಮಕಾತಿ ನಡೆಸುವುದಾಗಿ ತಿಳಿಸಿದೆ.
ಮಾರ್ಚ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಟೆಕ್ ಮಹೀಂದ್ರಾದ ಒಟ್ಟು ಸಿಬ್ಬಂದಿಯಲ್ಲಿ 795 ಉದ್ಯೋಗಿಗಳನ್ನು ಕಡಿತ ಮಾಡಿತ್ತು. ಆದಾಗ್ಯೂ, ಪೂರ್ಣ ವರ್ಷ 2024ಕ್ಕೆ ಅದರ ಒಟ್ಟು ನೌಕರರ ಸಂಖ್ಯೆ 6,945 ರಷ್ಟು ಕಡಿಮೆಯಾಗಿದೆ.

ಐಟಿ ಕಂಪನಿಗೆ ಇದು ಎರಡನೇ ಹಣಕಾಸು ವರ್ಷವಾಗಿದ್ದು, ತನ್ನ ಉದ್ಯೋಗಿಗಳ ಆಧಾರದ ಮೇಲೆ ಪೂರ್ಣ ವರ್ಷದ ಇಳಿಕೆ ಕಂಡಿದೆ. ಹಿಂದೆ ಇದು 2018ರಲ್ಲೂ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡಿತ್ತು.
ಟೆಕ್ ಮಹೀಂದ್ರಾದ ಎಂಡಿ ಮತ್ತು ಸಿಇಒ ಮೋಹಿತ್ ಜೋಶಿ, "ನಮ್ಮ ವ್ಯಾಪಾರದ ಪ್ರಮಾಣವನ್ನು ಪ್ರತಿಬಿಂಬಿಸುವ ಹೆಡ್‌ಕೌಂಟ್‌ನಲ್ಲಿ ಸ್ವಲ್ಪ ಕಡಿಮೆಯಾಗಿದೆ. ಆದಾಗ್ಯೂ, ನಾವು ಹೊಸ ಪದವೀಧರರನ್ನು ಸ್ಥಿರವಾಗಿ ನೇಮಿಸಿಕೊಳ್ಳುತ್ತಿರುವ ಒಂದು ಕಂಪನಿಯಾಗಿ ನಾವು ಮುಂದುವರಿಯುತ್ತಿದ್ದೇವೆ. ಪ್ರತಿ ತ್ರೈಮಾಸಿಕದಲ್ಲಿ 1,500 ಪ್ಲಸ್ ತಾಜಾ ಪದವೀಧರರನ್ನು ನೇಮಿಸಿಕೊಳ್ಳುವ ನಮ್ಮ ಹಾದಿಯಲ್ಲಿ ಪ್ರತಿ ವರ್ಷ 6,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲಾಗುತ್ತದೆ" ಎಂದರು.
ಟೆಕ್ ಮಹೀಂದ್ರಾ ಅಲ್ಲದೆ ಇದುವರೆಗೆ ಟಿಸಿಎಸ್ ಕೂಡ 2025 ರಲ್ಲಿ ಸುಮಾರು 40,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ತಿಳಿಸಿದೆ. 2027 ರ ವೇಳೆಗೆ ಟೆಕ್ ಮಹೀಂದ್ರಾದ ವ್ಯಾಪಾರದ ಕಾರ್ಯತಂತ್ರದ ಭಾಗವಾಗಿ ಕಂಪನಿಯು ತನ್ನ ಆರಂಭಿಕ ವೃತ್ತಿಪರರಿಗೆ ತರಬೇತಿ ನೀಡಲು ಮತ್ತು ರೋಲ್‌ಗಳಿಗೆ ನಿಯೋಜಿಸಲು ಹೊಸ ಉದ್ಯೋಗಿಗಳನ್ನು ಹುಡುಕುತ್ತದೆ. ಇದು ಮಾರ್ಜಿನ್ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ಸಿಎಫ್‌ಒ ರೋಹಿತ್ ಆನಂದ್ ಏಪ್ರಿಲ್ 25 ರಂದು ವಿಶ್ಲೇಷಕರ ಕರೆಯಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications