ಬ್ರಾಂಡ್ ಬೆಂಗಳೂರಿನಲ್ಲಿ ಗುಂಡಿ ರಸ್ತೆಗಳು ಧೂಳಿನಿಂದ ಕೂಡಿದೆ.ಇದನ್ನು ನೋಡಲು ಬೇಸರವಾಗುತ್ತಿದೆ. ಸರ್ಕಾರ ಗುಂಡಿಗಳಿಲ್ಲದ ರಸ್ತೆಗಳನ್ನು ಒದಗಿಸುವಲ್ಲಿ ವಿಫಲವಾಗುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಪತ್ರ ಬರೆದಿದ್ದಾರೆ.
ಹೌದು, ನಿನ್ನೆ ನಡೆದ (ಏಪ್ರಿಲ್ 29) ಟಿಸಿಎಸ್ ವರ್ಲ್ಡ್ 10ಕೆ-2025 ಆಯೋಜಿಸಲಾಗಿದ್ದ ಮ್ಯಾರಥಾನ್ ಆಯೋಜಿಸಿದ್ದ ಅಥ್ಲೀಟ್ ಓಟಗಳ ಕಾರ್ಯಕ್ರಮವನ್ನು ನೋಡಿ ಸಂಸದ ತೇಜಸ್ವಿ ಸೂರ್ಯ ಓಟದ ಬದಲು, ಗುಂಡಿಗಳ ಓಟ, ಧೂಳಿನ ಓಟ, ಅಪಾಯದಿಂದ ಕೂಡಿದ ಓಟ ಎಂಬ ಅನುಭವ ಪಡೆದಿದ್ದು ಬಹಳ ಬೇಸರದ ಸಂಗತಿಯಾಗಿ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಗ್ಗೆ ಬೆಂಗಳೂರು ಅಭಿವೃದ್ದಿಯ ಬಗ್ಗೆ ಪತ್ರ ಬರೆದಿದ್ದಾರೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಮನವಿ ಏನು?
ಪತ್ರದಲ್ಲಿ ತೇಜಸ್ವಿ ಸೂರ್ಯ ಈ ರೀತಿಯಲ್ಲಿ ಬರೆದುಕೊಂಡಿದ್ದಾರೆ.ನಾನು ಬೆಂಗಳೂರು ಸಂಸದನಾಗಿ ಮಾತ್ರವಲ್ಲ, ಒಬ್ಬ ಓಟಗಾರನಾಗಿ, ನಾಗರಿಕನಾಗಿ, ಅತ್ಯಂತ ನೋವಿನಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಇಂದು ನಡೆದ ಓಟದಲ್ಲಿ ಜಗತ್ತಿನ ಶ್ರೇಷ್ಠ ಅಥ್ಲೀಟ್‌ಗಳು, ಹಿರಿಯ ನಾಗರಿಕರು, ಸಾಮಾನ್ಯ ನಾಗರಿಕರು ಸೇರಿ ಸುಮಾರು 40,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆದರೆ, ಅವರೆಲ್ಲರೂ ಸುಂದರ ಓಟದ ಬದಲು, ಗುಂಡಿಗಳ ಓಟ, ಧೂಳಿನ ಓಟ, ಅಪಾಯದಿಂದ ಕೂಡಿದ ಓಟ ಎಂಬ ಅನುಭವ ಪಡೆದದ್ದು ಬಹಳ ಬೇಸರದ ಸಂಗತಿ.ಇದು ಕೇವಲ ಒಂದು ಮ್ಯಾರಥಾನ್ ಕಾರ್ಯಕ್ರಮದ ಬಗ್ಗೆ ಅಲ್ಲ ಇದು ನಗರೀಕರಣದ, ಮೂಲಸೌಕರ್ಯದ, ಸಾರ್ವಜನಿಕ ಸುರಕ್ಷತೆಯ ಬಗ್ಗೆ ಎತ್ತುವ ಮಹತ್ವದ ಪ್ರಶ್ನೆ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಭಾನುವಾರ (ಏ.27) ಬೆಳಿಗ್ಗೆ ಟಿಸಿಎಸ್ ವರ್ಲ್ಡ್ 10ಕೆ ಕಾರ್ಯಕ್ರಮದ ಚಾಲನಾ ಸಮಾರಂಭದಲ್ಲಿ ಭಾಗವಹಿಸಿರುವುದು ನೋಡಿ ಸಂತಸವಾಯಿತು. ಈ ತರಹದ ಕಾರ್ಯಕ್ರಮಗಳು ನಮ್ಮ ಬೆಂಗಳೂರಿನ ಬ್ರ್ಯಾಂಡ್ ಮೌಲ್ಯ ಹೆಚ್ಚಿಸುವುದಕ್ಕೆ ಮತ್ತು ಸಾರ್ವಜನಿಕ ಸಹಭಾಗಿತ್ವವನ್ನು ಉತ್ತೇಜಿಸಲು ಅತ್ಯಂತ ಸಹಕಾರಿ ಎಂದು ಸಹ ಹೇಳಿದ್ದರು.
ಇತ್ತೀಚೆಗೆ ನಡೆದ ಮುಂಬೈ ಮ್ಯಾರಥಾನ್‌ಗೆ ಈ ಅನುಭವವನ್ನು ಹೋಲಿಸಿದ ಸೂರ್ಯ, ಬೆಂಗಳೂರು ತನ್ನ ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದಾದ ಮೂಲಭೂತ ಸ್ವಚ್ಛ, ಗುಂಡಿಗಳಿಲ್ಲದ ರಸ್ತೆಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು . "ನಗರದ ಪ್ರತಿಯೊಂದು ರಸ್ತೆಯೂ ನಿರ್ಮಾಣ ಸ್ಥಳದಂತೆ ಕಾಣುತ್ತದೆ ಧೂಳು, ಗುಂಡಿಗಳು ಮತ್ತು ನಿರ್ಜೀವ" ಎಂದು ಅವರು ಹೇಳಿದರು.
ಸಿಬಿಡಿ ರಸ್ತೆಗಳ ಪರಿಸ್ಥಿತಿ ಶೋಚನೀಯ
ಬೆಂಗಳೂರಿನ ಕೇಂದ್ರ ಭಾಗ ವಾಗಿ (Central Business District - CBD) ರಸ್ತೆಗಳ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಲ್ಲಿ ಒಂದು ಸಣ್ಣ ಸುಗಮ ರಸ್ತೆ ಕೂಡ ಇಲ್ಲದ್ದು. ಎಲ್ಲೆಲ್ಲೂ ಗುಂಡಿಗಳು. ಓಟಗಾರರು ಮುಗ್ಗರಿಸಿದ್ದು ಗಾಯಗೊಂಡಿದ್ದು, ಹಿರಿಯ ನಾಗರಿಕರು ಹೆಜ್ಜೆ ಹಾಕಲು ಹೆದರುವ ಸ್ಥಿತಿ ಉಂಟಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ವೀಲ್‌ಚೇರ್‌ನಲ್ಲಿ ಓಡಿದವರು ಸ್ವಂತ ಶಕ್ತಿಯಿಂದ ಸಾಗಲಾರದೆ ಎಂಬುದರಿಂದ ಶಾರೀರಿಕ ಅಂಗವಿಕಲರಿಗೆ ಬೆಂಗಳೂರು ನಗರ ಸೂಕ್ತವಿಲ್ಲ ಎಂಬುದನ್ನು ತೋರಿಸುತ್ತಿದೆ. ಜೊತೆಗೆ, "ಕಸದ ರಾಶಿಗಳು, ಅನೈರ್ಮೈಲದ ಬದಿಗಳು, ಮುರಿದ ಪಾದಚಾರಿ ಮಾರ್ಗಗಳು" ಎಂಬ ವಿವರಗಳಿಂದ ನಗರದಲ್ಲಿ ಕೇಂದ್ರೀಕೃತ ಸ್ವಚ್ಚತೆ, ಸುರಕ್ಷತೆ ಮತ್ತು ಸೌಲಭ್ಯಗಳ ಕೊರತೆಯನ್ನು ತೀವ್ರವಾಗಿ ಎತ್ತಿ ಹಿಡಿಯಲಾಗಿದೆ.
ಇದು ನಗರ ಅಭಿವೃದ್ಧಿಯ "ಬ್ರ್ಯಾಂಡ್ ಬೆಂಗಳೂರು" ಎಂಬ ಘೋಷಣೆಗೆ ವ್ಯಂಗ್ಯವಾಗಿದೆ ಎಂದು ಹೇಳಿದ್ದಾರೆ.
ಇದು ವರ್ಲ್ಡ್ ಅಥ್ಲೆಟಿಕ್ಸ್ ಪ್ರಮಾಣಿತ ಗೋಲ್ಡ್ ಲೇಬಲ್ ಈವೆಂಟ್ ಆಗಿದ್ದು. ಜಗತ್ತಿನ ನೂರಾರು ಅತಿಥಿಗಳು ನಮ್ಮತ್ತ ಗಮನಿಸುತ್ತಿದ್ದು, ಈ ಬಗ್ಗೆ ಸೂಕ್ತ ಗಮನ ಹರಿಸಿ ಬ್ರ್ಯಾಂಡ್ ಬೆಂಗಳೂರಿನ ಮೌಲ್ಯವನ್ನು ಹೆಚ್ಚಿಸುವಂತೆ ನಾನು ತಮ್ಮಲ್ಲಿ ವಿನಂತಿಸುತ್ತೇನೆ ಎಂದಿದ್ದಾರೆ.
ನೀವು ಇದನ್ನು ಕೇವಲ TCS 10ಕೆ ಹಿನ್ನೆಲೆಯಿಂದ ಮಾತ್ರ ನೋಡದೆ, ಬೆಂಗಳೂರು ನಗರದ ಮೂಲಭೂತ ಸೌಕರ್ಯಗಳ ಬಗ್ಗೆ ತಾವುಗಳು ವಿಶೇಷ ಕಾಳಜಿ ವಹಿಸಿ, ಸಾರ್ವಜನಿಕರ ಅನುಕೂಲಕ್ಕೆ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಎಂದು ಅವರು ಪತ್ರದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications