ತೆಲಂಗಾಣ ರಾಜ್ಯವು ಜೂನ್ 2ರಂದು ಪ್ರತಿವರ್ಷವೂ ಇತಿಹಾಸದಲ್ಲಿ ಒಂದು ಮಹತ್ವದ ದಿನವಾಗಿ ಸಂಸ್ಥಾಪನಾ ದಿನವನ್ನು (Telangana Formation Day) ಆಚರಣೆಯನ್ನು ಮಾಡುತ್ತದೆ.ಈ ದಿನ ಸಾಂಸ್ಕೃತಿಕ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಹಾಗಿದ್ರೆ ಈ ದಿನದಂದು ತೆಲಂಗಾಂಣ ರಾಜ್ಯದ ಶಾಲೆಗಳು, ಕಚೇರಿಗಳು ಬ್ಯಾಂಕ್‌ಗಳಿಗೆ ರಜೆ ಇರುತ್ತಾ ಎಂಬ ಹೆಚ್ಚಿನ ವಿವರ ಇಲ್ಲಿದೆ.
ಹೌದು,ಜೂನ್ 2 ತೆಲಂಗಾಣದ ಇತಿಹಾಸದಲ್ಲಿ ಒಂದು ಮಹತ್ವದ ದಿನ.ಈ ಸಂಸ್ಥಾಪನಾ ದಿನ ತೆಲಂಗಾಣದಾದ್ಯಂತ ಜನರು ಒಟ್ಟಾಗಿ ಆಚರಣೆಯನ್ನು ಮಾಡುವುದರಿಂದ ಈ ದಿನ ತೆಲಂಗಾಣ ಕಚೇರಿಗಳು, ಶಾಲೆಗಳು ಮತ್ತು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ತೆಲಂಗಾಣದ ಜನರು ರಾಜ್ಯದ ರಚನೆಯನ್ನು ಆದ ಸವಿನೆನಪಿಗಾಗಿ ಸಂತಸದಿಂದ ಆಚರಣೆಯನ್ನು ಮಾಡುತ್ತಾರೆ.ಇದನ್ನು ಸಾರ್ವಜನಿಕ ರಜಾದಿನವಾಗಿ ಆಚರಿಸಲಾಗುತ್ತದೆ. ಇಂದು ಕಚೇರಿಗಳು, ಶಾಲೆಗಳು ಮತ್ತು ಬ್ಯಾಂಕುಗಳಿಗೆ ರಜೆ ಇರುತ್ತದೆ. ರಜೆ ಇರುವ ಕಾರಣ ತೆಲಂಗಾಣದ ಜನರು ಹಬ್ಬಗಳಲ್ಲಿ ಹೆಚ್ಚಿಗಾಗಿ ಭಾಗವಹಿಸುತ್ತಾರೆ.
ತೆಲಂಗಾಣ ಸಂಸ್ಥಾಪನಾ ದಿನ
2014ರಲ್ಲಿ ತೆಲಂಗಾಣ ರಾಜ್ಯವು ಅಧಿಕೃತವಾಗಿ ಆಂಧ್ರಪ್ರದೇಶದಿಂದ ವಿಭಜನೆಯಾದದದ್ದ ಸವಿನೆನಪಿಗಾಗಿ ಈ ದಿನವನ್ನು ಸ್ಮರಿಸಲಾಗುತ್ತದೆ. ಪ್ರತಿವರ್ಷವೂ ಜೂನ್ 2 ರಂದು ತೆಲಂಗಾಣ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ.2014ರಲ್ಲಿ ಭಾರತದಲ್ಲಿ ತೆಲಂಗಾಣ ರಾಜ್ಯವು ಅಧಿಕೃತವಾಗಿ ಆಂಧ್ರಪ್ರದೇಶದಿಂದ ವಿಭಜನೆಯಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳು ಮತ್ತು ಅಧಿಕೃತ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮತ್ತು ಸಮಾರಂಭಗಳು ನಡೆಯುತ್ತೇವೆ. ರಾಜ್ಯದ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ಮೂಲಕ ಎಲ್ಲಾ ವರ್ಗದ ಜನರು ಆಚರಣೆಗಳಲ್ಲಿ ಭಾಗವಹಿಸುತ್ತಾರೆ.
ಸಾರ್ವಜನಿಕ ರಜಾದಿನ: ಜೂನ್ 2
ಜೂನ್ 2 ರಂದು ತೆಲಂಗಾಣದಲ್ಲಿ ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗಿದ್ದು, ಜನರು ಈ ದಿನದಂದು ಕೆಲಸಗಳಿಂದ ವಿರಾಮ ತೆಗೆದುಕೊಂಡು ಆಚರಣೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಚೇರಿಗಳು, ಶಾಲೆಗಳು ಮತ್ತು ಬ್ಯಾಂಕ್‌ಗಳು ಮುಚ್ಚಲ್ಪಟ್ಟಿದ್ದು, ಜನರು ಹಬ್ಬಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಈ ರಜಾದಿನವು ದಿನದ ಮಹತ್ವ ಮತ್ತು ಜನರು ತಮ್ಮ ರಾಜ್ಯದ ಇತಿಹಾಸದಲ್ಲಿ ಹೊಂದಿರುವ ಹೆಮ್ಮೆಗೆ ಸಾಕ್ಷಿಯಾಗಿದೆ.
ಬೇಸಿಗೆ ರಜೆ ಇರುವ ಕಾರಣ ಶಾಲೆಗಳಿಗೆ ವಿಸ್ತೃತ ರಜೆ
ತೆಲಂಗಾಣದ ಶಾಲೆಗಳು ಈಗಾಗಲೇ ಬೇಸಿಗೆ ರಜೆಯನ್ನು ನೀಡಿದೆ.ಏಪ್ರಿಲ್ 23 ರಿಂದ ಜೂನ್ 11 ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ರಾಜ್ಯದ ವಿದ್ಯಾರ್ಥಿಗಳು ಈಗಾಗಲೇ ಸುದೀರ್ಘವಾಗಿ ರಜೆಯಲ್ಲಿ ಇದ್ದಾರೆ. ಜೂನ್ 2 ರಂದು ತೆಲಂಗಾಣ ರಚನೆಯ ದಿನದ ರಜೆಯು ಅವರ ವಿಸ್ತೃತ ರಜೆಯ ಭಾಗವಾಗಿರುತ್ತದೆ. ಬೇಸಿಗೆ ರಜಾದಿನಗಳು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ದಿನಚರಿಯಿಂದ ಅಗತ್ಯವಾದ ವಿಶ್ರಾಂತಿಯನ್ನು ನೀಡುತ್ತದೆ. ಇದು ಅವರಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ತಯಾರಿ ಮಾಡಲು ಈ ದಿನದ ರಜೆ ಅನುವು ಮಾಡಿಕೊಡುತ್ತದೆ. ಶಾಲೆಗಳಿಗೆ ಈಗಾಗಲೇ ಬೇಸಿಗೆ ರಜೆಯಲ್ಲಿರುವುದರಿಂದ,ಈ ಸಾರ್ವಜನಿಕ ರಜಾದಿನವು ಹಬ್ಬದ ವಾತಾವರಣಕ್ಕೆ ಮೆರುಗು ನೀಡುತ್ತದೆ.
ಆಚರಣೆಗಳು
- ರಾಜ್ಯದ ಮುಖ್ಯಮಂತ್ರಿಗಳು ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡತ್ತಾರೆ.
- ರಾಜ್ಯದ ವಿವಿಧ ಭಾಗಗಳಲ್ಲಿ ಸರ್ಕಾರದ ವತಿಯಿಂದ ಸರಣಿಗಳ ಕಾರ್ಯಕ್ರಮಗಳು, ಪಥಸಂಚಲನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
- ಶಾಲೆ, ಕಾಲೇಜುಗಳಲ್ಲಿ ಹಬ್ಬದ ವಾತವರಣ ಇರುತ್ತದೆ.
- ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಬಹುಮಾನವನ್ನು ಈ ದಿನ ನೀಡಲಾಗುತ್ತದೆ.
- ನೃತ್ಯ, ಸಂಗೀತ, ನಾಟಕ ಮುಂತಾದ ಕಾರ್ಯಕ್ರಮಗಳು ಈ ದಿನ ನಡೆಯುತ್ತದೆ.
ಆಂಧ್ರಪ್ರದೇಶ ಪುನರ್ ಸಂಘಟನೆ ಮಸೂದೆ (Andhra Pradesh Reorganisation Act) ಭಾರತದ ಸಂಸತ್ತಿನ ಉಭಯ ಸದನಗಳು ಅಂಗೀಕಕರವನ್ನು ಮಾಡಲಾಗುತ್ತು ಅಂದಿನಿಂದ ತೆಲಂಗಾಣ ಹೊಸ ರಾಜ್ಯವಾಗಿ ಪ್ರತ್ಯೇಕವಾಗಿತ್ತು. ತೆಲಂಗಾಣ ಭಾರತದ ಅತ್ತಯಂತ ಹಿರಿಯ ರಾಜ್ಯವಾಗಿದೆ. ಇಲ್ಲಿನ ಜನಸಂಖ್ಯಾ ಒಟ್ಟು 35 ಮಿಲಿಯನ್ ಇದೆ.


Click it and Unblock the Notifications