ಬೆಂಗಳೂರು, ಆಗಸ್ಟ್ 6: ಐಟಿ ರಫ್ತಿನಲ್ಲಿ ಕರ್ನಾಟಕಕ್ಕೆ ಠಕ್ಕರ್ ಕೊಡಲು ತೆಲಂಗಾಣ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಾಫ್ಟ್ ವೇರ್ ರಫ್ತಿನಲ್ಲಿ ರಫ್ತಿನಲ್ಲಿ ಕರ್ನಾಟಕವನ್ನು ಹಿಂದಿಕ್ಕುವ ಗುರಿ ಹೊಂದಿದ್ದೇವೆ ಎಂದು ತೆಲಂಗಾಣ ಐಟಿ ಸಚಿವ ಶ್ರೀಧರ್ ಬಾಬು ಹೇಳಿದ್ದಾರೆ.
ಐಟಿ ರಫ್ತಿನಲ್ಲಿ ಕರ್ನಾಟಕವನ್ನು ಹಿಂದಿಕ್ಕಿ ನಾವು ನಂಬರ್ 1 ಪಟ್ಟ ಏರಲಿದ್ದೇವೆ ಎಂದು ತೆಲಂಗಾಣ ಸಚಿವರು ಹೇಳಿದ್ದಾರೆ. ಪ್ರಸ್ತುತ ಸಾಫ್ಟ್ ವೇರ್ ರಫ್ತಿನಲ್ಲಿ ಬೆಂಗಳೂರು ನಂತರ ಹೈದರಾಬಾದ್ ಎರಡನೇ ಸ್ಥಾನದಲ್ಲಿದೆ. ಸಾಫ್ಟ್ ವೇರ್ ರಫ್ತಿನಲ್ಲಿ ತೆಲಂಗಾಣವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ಸರ್ಕಾರ ಶ್ರಮಿಸುತ್ತಿದೆ ಎಂದು ತೆಲಂಗಾಣದ ಐಟಿ ಮತ್ತು ಕೈಗಾರಿಕಾ ಸಚಿವ ಡಿ ಶ್ರೀಧರ್ ಬಾಬು ಹೇಳಿದ್ದಾರೆ. ಸಾಫ್ಟ್ ವೇರ್ ರಫ್ತಿನಲ್ಲಿ ಶೇ.25 ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದ್ದು ಮೂರು ವರ್ಷಗಳಲ್ಲಿ ಬೆಂಗಳೂರನ್ನು ಹಿಂದಿಕ್ಕುವ ಗುರಿ ಹೊಂದಲಾಗಿದೆ ಎಂದಿದ್ದಾರೆ.

ಸೆಪ್ಟೆಂಬರ್ 5 ಮತ್ತು 6 ರಂದು ನಡೆಯಲಿರುವ AI ಸಮಿತ್ ವೆಬ್‌ಸೈಟ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ಈ ವಿಚಾರ ತಿಳಿಸಿದರು. 2023-24ರಲ್ಲಿ ಹೈದರಾಬಾದ್ 2.7 ಲಕ್ಷ ಕೋಟಿ ಮೌಲ್ಯದ ಐಟಿ ಸರ್ವೀಸ್ ರಫ್ತು ಮಾಡಿದ್ದು 11 ಪ್ರತಿಶತ ಬೆಳವಣಿಗೆಯನ್ನು ಕಂಡಿದೆ ಎಂದು ಅವರು ತಿಳಿಸಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಿಟಿ ಕುರಿತು ಮಾತನಾಡಿದ ಅವರು, ಹೈದರಾಬಾದ್ ಅನ್ನು ದೇಶ ಮತ್ತು ವಿಶ್ವದಲ್ಲಿ AI ಅಂದರೆ ಆರ್ಟಿಫಿಶಿಯಲ್ ಇಂಟಲಿಜನ್ಸ್ ನ ಹಬ್ ಆಗಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು. ಕೋಡಿಂಗ್ ತರಬೇತಿ ನೀಡಲು ಯಂಗ್ ಇಂಡಿಯಾ ಸ್ಕಿಲ್ಸ್ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ರಾಜ್ಯಕ್ಕೆ ಬೃಹತ್ ಹೂಡಿಕೆಗಳನ್ನು ತರಲು ಉದ್ಯಮಿಗಳ ಜತೆ ಮಾತುಕತೆ ನಡೆದಿದೆ. 2022-23 ಹಣಕಾಸು ವರ್ಷದಲ್ಲಿ ತೆಲಂಗಾಣ ಒಟ್ಟು 2,41,275 ಕೋಟಿ ಮೊತ್ತದ ಸಾಫ್ಟ್ ವೇರ್ ರಫ್ತು ಮಾಡಿದೆ. ಆರ್ಟಿಫಿಶಿಯಲ್ ಇಂಟಲಿಜನ್ಸ್ ವಿಭಾಗದಲ್ಲಿ ಹೊಸ ಆವಿಷ್ಕಾರಗಳಿಗೆ ಮುಂದಾಗಿದೆ ಎಂದು ತಿಳಿಸಿದರು.


Click it and Unblock the Notifications