ನವದೆಹಲಿ, ಮಾರ್ಚ್ 13: ಭಾರತ ಆರ್ಥಿಕವಾಗಿ ಮುನ್ನುಗ್ಗುತ್ತಿದೆ. ಜಗತ್ತಿನ ಇತರ ದೇಶಗಳು ಭಾರತದ ಈ ಬೆಳವಣಿಗೆ ಕಂಡು ಸಾಕಷ್ಟು ಹೊಟ್ಟೆಕಿಚ್ಚು ಪಡುತ್ತಿವೆ. ಆದರೆ ಇದೀಗ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಆಘಾತ ಎದುರಾಗಿದೆ. ಪ್ರಮುಖವಾಗಿ ಭಾರತೀಯ ಕೈಗಾರಿಕೆ ಅಭಿವೃದ್ಧಿಯ ವಿಚಾರದಲ್ಲಿ ಇಂತಹ ಆಘಾತಕಾರಿ ವರದಿ ಇದೀಗ ಸಿಕ್ಕಿದೆ.
ಭಾರತದ ಕೈಗಾರಿಕಾ ಉತ್ಪಾದನೆ ಜನವರಿ ತಿಂಗಳಲ್ಲಿ ಶೇಕಡಾ 3.8 ರಷ್ಟು ಕಡಿಮೆ ಆಗಿದ್ದು, ಈ ಮೂಲಕ ಭಾರತದ ಅಭಿವೃದ್ಧಿಗೆ ಅಗತ್ಯ ಇರುವ ವೇಗದಲ್ಲಿ ಕೈಗಾರಿಕೆಯ ಪಾತ್ರ ಈಗ ಸ್ವಲ್ಪ ಕಡಿಮೆ ಆಗಿದೆ. ತಯಾರಿಕೆ, ಗಣಿ & ಇಂಧನ ವಲಯದ ಬೆಳವಣಿಗೆ ಕುಂಟಿತವಾಗಿರುವ ಪರಿಣಾಮ, ಹೀಗೆಲ್ಲಾ ಕೈಗಾರಿಕಾ ವಲಯದ ಒಟ್ಟಾರೆ ಬೆಳವಣಿಗೆ ಮೇಲೆ ಪರಿಣಾಮ ಆಗಿದೆ ಎನ್ನುತ್ತಿದ್ದಾರೆ ತಜ್ಞರು. ಇದೀಗ ಬಿಡುಗಡೆ ಆಗಿರುವ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವರದಿ ಈ ಮಾಹಿತಿಯನ್ನು ಇದೀಗ ತಿಳಿಸುತ್ತಿದೆ.

ಲೋಕಸಭೆ ಚುನಾವಣೆಗೆ ಮೊದಲು ಆಘಾತ?
ಇನ್ನೇನು ಕೆಲವೇ ದಿನದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ ನಡೆಸಲು ಕೆಲವೇ ದಿನದಲ್ಲಿ ಚುನಾವಣೆ ಆಯೋಗ ಕೂಡ ದಿನಾಂಕ ಪ್ರಕಟಣೆ ಮಾಡಲಿದೆ. ಹೀಗೆ ಚುನಾವಣೆ ಹತ್ತಿರದಲ್ಲೇ ಇರುವ ಸಮಯದಲ್ಲಿ ಕೈಗಾರಿಕಾ ಬೆಳವಣಿಗೆ ಕುಂಟಿತವಾದ ಕಾರಣ ಎನ್‌ಡಿಎ ಸರ್ಕಾರಕ್ಕೂ ಆಘಾತ ಎದುರಾಗಿದೆ ಎಂಬ ಮಾತುಗಳು ಓಡಾಡುತ್ತಿವೆ. ಈ ನಡುವೆ ಇದೀಗ ಬಿಡುಗಡೆ ಆಗಿರುವ ಅಂಕಿ & ಅಂಶಗಳ ಕುರಿತು ಸಂಪೂರ್ಣ ಮಾಹಿತಿಯು ಇಲ್ಲಿದೆ ನೋಡಿ.
ಇಂಧನ ಉತ್ಪಾದನೆಯೂ ಕುಂಠಿತ?
ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಅಂದರೆ ಐಐಪಿ ಆಧಾರದ ಮೇಲೆ ಲೆಕ್ಕ ಹಾಕುವ ಕೈಗಾರಿಕಾ ಉತ್ಪಾದನೆ ಬೆಳವಣಿಗೆ, 2023 ರ ಜನವರಿಯಲ್ಲಿ ಶೇ 5.8ರಷ್ಟು ದಾಖಲಾಗಿತ್ತು. ಅದೇ ವರ್ಷದ ನವೆಂಬರ್‌ನಲ್ಲಿ ಶೇ 2.4ರಷ್ಟು ಮತ್ತು ಡಿಸೆಂಬರ್‌ನಲ್ಲಿ ಶೇ 4.2ರಷ್ಟು ಇತ್ತು. ಈಗ 2023-24ನೇ ಹಣಕಾಸು ವರ್ಷದ, ಏಪ್ರಿಲ್ ತಿಂಗಳಿಂದ ಜನವರಿವರೆಗೂ ಕೈಗಾರಿಕಾ ಉತ್ಪಾದನೆಯು ಹಿನ್ನಡೆ ಕಂಡಿದೆ ಎನ್ನಲಾಗಿದೆ. ಕಳೆದ ವರ್ಷದ ಜನವರಿಯಲ್ಲಿ ಶೇ 4.5ರಷ್ಟಿದ್ದ ತಯಾರಿಕಾ ವಲಯದ ಬೆಳವಣಿಗೆಯು ಈ ಜನವರಿಯಲ್ಲಿ ಶೇ 3.2ರಷ್ಟು ಇಳಿಕೆ ಆಗಿದೆ. ಇದರ ಜೊತೆಯಲ್ಲೇ ಇಂಧನ ಉತ್ಪಾದನೆ ಶೇಕಡಾ 12.7 ರಿಂದ ಶೇಕಡಾ 5.6ಕ್ಕೆ ಇಳಿಕೆಯಾಗಿದೆ.
ಮತ್ತೊಂದು ಕಡೆ ನೋಡುವುದಾದರೆ ಗಣಿ ಉತ್ಪಾದನೆ ವಿಚಾರದಲ್ಲಿ ಕೂಡ ಈಗ ಹಿನ್ನಡೆಯ ಕಾಣಲಾಗಿದೆ. ಆ ಪ್ರಕಾರ ಗಣಿ ಉತ್ಪಾದನೆ ಶೇಕಡಾ 9 ರಿಂದ ಶೇ 5.9ಕ್ಕೆ ತಗ್ಗಿದೆ. ಬಂಡವಾಳ ಸರಕು ಉತ್ಪಾದನೆ ಶೇಕಡಾ 10.5 ರಿಂದ ಶೇಕಡಾ 4.1ಕ್ಕೆ ಇಳಿದಿದೆ ಎನ್ನಲಾಗಿದ್ದು. ಗ್ರಾಹಕರ ಬಳಕೆ ವಸ್ತುಗಳ ಉತ್ಪಾದನೆ ಶೇ 8.2 ರಿಂದ ಶೇ 10.9ಕ್ಕೆ ಏರಿಕೆಯಾಗಿದೆ ಎಂದು ವರದಿ ಮಾಹಿತಿ ನೀಡಿದೆ. ಈ ಮೂಲಕ ಲೋಕಸಭೆ ಚುನಾವಣೆಗೆ ಮೊದಲು ಕೈಗಾರಿಕಾ ಬೆಳಣಿಗೆ ಮಾಹಿತಿ ಒಂದಷ್ಟು ಚರ್ಚೆಗೆ ವೇದಿಕೆ ಒದಗಿಸಿದೆ. ಆದರೂ ಮುಂಬರುವ ದಿನಗಳಲ್ಲಿ ಈ ವಲಯವು ಮತ್ತೆ ಚೇತರಿಕೆ ಕಾಣುವ ನಿರೀಕ್ಷೆ ಇದೆ.


Click it and Unblock the Notifications