ನವದೆಹಲಿ, ಮಾರ್ಚ್ 16: ಜುಲೈ 12ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ದಿನಾಂಕ ನಿಗದಿಯಾಗಿದ್ದು ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಮದುವೆಗೆ ಮೊದಲು, ಅಂಬಾನಿ ಕುಟುಂಬವು ಗುಜರಾತ್ ನ ಜಾಮ್ ನಗರದಲ್ಲಿ ವಿವಾಹಪೂರ್ವ ಸಮಾರಂಭವನ್ನು ಆಯೋಜಿಸಿತ್ತು. ಮೂರು ದಿನಗಳ ಕಾಲ ಆಯೋಜಿಸಿದ್ದ ಈ ಅದ್ದೂರಿ ವಿವಾಹಪೂರ್ವ ಸಮಾರಂಭದಲ್ಲಿ ಭಾರತ ಮತ್ತು ವಿದೇಶಗಳಿಂದ ಸೆಲೆಬ್ರಿಟಿಗಳು, ಉದ್ಯಮಿಗಳು ಸೇರಿ ಅನೇಕ ಅತಿಥಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಆಕಾಶ್ ಅಂಬಾನಿ ಅವರ ಪತ್ನಿ, ಮುಖೇಶ್ ಅಂಬಾನಿ ಅವರ'ಹಿರಿಯ ಸೊಸೆ' ಶ್ಲೋಕಾ ಮೆಹ್ತಾ ಅವರು ಕೂಡಾ ವಿಶೇಷವಾಗಿ ಗಮನಸೆಳೆದಿದ್ದರು.

ಕೊನೆಯ ದಿನ ಅವರು ಧರಿಸಿದ್ದ ಗ್ರೀನ್-ಹೂಎಡ್ ಮಿಡಿ ಡ್ರೆಸ್ ನಿಂದ ಎಲ್ಲರನ್ನು ಬೆರಗುಗೊಳಿಸಿದ್ದರು. ಶ್ಲೋಕಾ ಅವರು ಧರಿಸಿದ್ದ ಟಾಪ್ ಗೆ ಅದೇ ಬಣ್ಣದಲ್ಲಿ ಫ್ಲೇರ್ಡ್ ಪ್ಯಾಂಟ್ ತೊಟ್ಟಿದ್ದರು. ಶ್ಲೋಕಾ ಮೆಹ್ತಾ ಅವರ ಉಡುಪನ್ನು ಹೆಸರಾಂತ ಡಿಸೈನರ್ ಆಸ್ಕರ್ ಡಿ ಲಾ ರೆಂಟಾ ಅವರು ಕಸ್ಟಮ್ ಆಗಿ ಶ್ಲೋಕಾ ಅವರಿಗಾಗಿಯೇ ನಿರ್ಮಿಸಿದ್ದಾರೆ. ಆದರೆ ಅವರು ಧರಿಸಿರುವ ದುಬಾರಿ ವಸ್ತ್ರದ ಮೌಲ್ಯದಲ್ಲಿ, ಭಾರತೀಯ ಸಾಮಾನ್ಯ ವರ್ಗದ ಕುಟುಂಬವೊಂದು ಅತ್ಯುತ್ತಮವಾದ ಕಾರೊಂದನ್ನು ಖರೀದಿಸಬಹುದಿತ್ತು. ಯಾಕೆಂದರೆ ಈ ದುಬಾರಿಯಾಗಿರುವ ಈ ಡ್ರೆಸ್‌ನ ಬೆಲೆ 13,24,788 ರೂ. ಆಗಿದೆ.
ಶ್ಲೋಕಾ ಮೆಹ್ತಾ ಅವರು ತಮ್ಮ ಸುಂದರ ಉಡುಪಿನ ಹೊಳಪನ್ನು ಮತ್ತಷ್ಟು ಹೆಚ್ಚಿಸಲು ಹರ್ಮ್ಸ್ ಬ್ರಾಂಡ್ ನ ಬೆರಗುಗೊಳಿಸುವ ಹಸಿರು-ಹ್ಯೂಡ್ ಲೆದರ್ ಬ್ಯಾಗ್ ನ್ನು ತಮ್ಮೊಂದಿಗೆ ಹಿಡಿದುಕೊಂಡಿದ್ದರು. ಅವರ ವಸ್ತ್ರವೇ "ಅಬ್ಬಾ ಅಷ್ಟೊಂದು ದುಬಾರಿಯೇ" ಅಂದುಕೊಂಡಿದ್ದರೆ, ಅವರ ಹ್ಯಾಂಡ್ ಬ್ಯಾಗ್ ಅದಕ್ಕಿಂತಲೂ ದುಬಾರಿಯಾಗಿದ್ದು, ಇದರ ಬೆಲೆ $70,000 ಅಂದರೆ ರೂ. 57,99,965 ರೂ ಆಗಿದೆ.
ಇದರೊಂದಿಗೆ , ದುಬಾರಿ ವಾಚ್ ಧರಿಸಿದ್ದು, 93,60,00 ರೂಪಾಯಿ ಮೌಲ್ಯದ ಪಚ್ಚೆ-ಕೆತ್ತಿದ ಗಿಣಿ-ಮೋಟಿಫ್ ಕಾರ್ಟಿಯರ್ ವಾಚ್‌ನೊಂದಿಗೆ ಶ್ಲೋಕಾ ಮೆಹ್ತಾ ತನ್ನ ಕ್ಲಾಸಿ ಮತ್ತು ಐಷಾರಾಮಿ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದರು.


Click it and Unblock the Notifications