ಬೆಂಗಳೂರಿಗರಿಗೆ ಸಿಹಿ ಸುದ್ದಿ, ಜನವರಿ 25ರೊಳಗೆ ಬರಲಿದೆ ನಮ್ಮ ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು!

ಬೆಂಗಳೂರಿಗರಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿಯನ್ನ ನೀಡಿದೆ. ಬಹುದಿನಗಳಿಂದ ಕಾಯುತ್ತಿದ್ದ ಹಳದಿ ಮೆಟ್ರೋ ಮಾಗ್ರ ಆರಂಭವಾಗಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು, ಆಫಿಸ್‌ಗೆ ಹೋಗುವವರು ಇನ್ಮೇಲೆ ಚಿಂತೆ ಮಾಡುವ ಅಗತ್ಯ ಇಲ್ಲ. ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಮೊದಲ CRTC ರೈಲು 2025 ಜನವರಿ 15ರ ವೇಳೆಗೆ ಹೆಬ್ಬಗೋಡಿ ಡಿಪೋಗೆ ಬಂದು ತಲುಪಲಿದೆ.

ಫೆಬ್ರವರಿ 2024ರಲ್ಲಿ CRRC ಹಳದಿ ಮಾರ್ಗದ ಮೂಲ ಮಾದರಿಯನ್ನು ನೀಡಿತ್ತು. ಅಲ್ಲದೆ ಜನವರಿ 10 2025ರೊಳಗೆ CRRC ಪರ್ಪಲ್‌ ಲೈನ್‌ಗಾಗಿ 6 DTG ಮೂಲ ಮಾದರಿಗಳನ್ನ
ತಲುಪಿಸಲಿದೆ. ಅಲ್ಲದೆ ವರ್ಷಾಂತ್ಯದ ವೇಳೆಗೆ ಚೆನ್ನೈ ಬಂದರಿಗೆ ಬಂದು ತಲುಪಲಿದ್ದು, ಜನವರಿ 10ರಂದು ಪೀಣ್ಯ ಡಿಪೋಗೆ ಆಗಮಿಸುತ್ತದೆ.

ಜನವರಿ 25ರೊಳಗೆ ಬರಲಿದೆ ಹಳದಿ ಮಾರ್ಗ ಮೆಟ್ರೋ ರೈಲು!

ಆರಂಭದಲ್ಲಿ, ನಮ್ಮ ಮೆಟ್ರೋ CRRCಗೆ 216 ಕೋಚ್‌ಗಳಿಗೆ ಎರಡೂ ಮಾರ್ಗಗಳಿಗಾಗಿ 1,578 ಕೋಟಿ ರೂಗಳ 36 ರೈಲು ಸೆಟ್‌ಗಳನ್ನ ನೀಡುವಂತೆ ಒಪ್ಪಂದವನ್ನ ನೀಡಲಾಗಿತ್ತು. ಆದ್ರೆ ಸರಿಯಾದ ಅಮಯಕ್ಕೆ ಈ ಅವಶ್ಯಕತೆಗಳನ್ನ ಪೂರೈಸದ ಕಾರಣ ಉಳಿದ 204 ಕೋಚ್‌ಗಳಿಗಾಗಿ 34 ರೈಲು ಸೆಟ್‌ಗಳನ್ನು ತಯಾರಿಸಲು ಟಿಆರ್‌ಎಸ್‌ಎಲ್‌ನೊಂದಿಗೆ MOUಗೆ ಸಹಿ ಹಾಕಲಾಗಿದೆ. ಇನ್ನು ಈ ಹಳದಿ ಮಾರ್ಗವು 19.143 ಕಿಮೀ ಉದ್ದವಿದ್ದು, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 16 ನಿಲ್ದಾಣಗಳನ್ನ ಒಳಗೊಂಡಿದೆ.

ಚೀನಾದಿಂದ ಮೊದಲ ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆಯ ಮೂಲ ಮಾದರಿ ರೈಲನ್ನ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ (BMRCL) ಈಗಾಗಲೇ ಸ್ವೀಕರಿಸಿದೆ. ಇನ್ನು ಈ ಕುರಿತು BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಮಾತನಾಡಿದ್ದು, ಜನವರಿ 2025 ರಲ್ಲಿ ಹಳದಿ ಮಾರ್ಗದಲ್ಲಿ ಕೇವಲ ಮೂರು ರೈಲುಗಳ ಮೂಲಕ ಕಾರ್ಯಾಚರಣೆಯನ್ನ ಆರಂಭಿಸುವ ಭರವಸೆಯನ್ನ ನೀಡಿದ್ದಾರೆ. ಡಿಸೆಂಬರ್ 2024 ರ ಅಂತ್ಯದ ವೇಳೆಗೆ ರೈಲು ಸೆಟ್‌ಗಳನ್ನು ತಲುಪಿಸುವ ನಿರೀಕ್ಷೆ ಇದೆ. ಹಾಗೆ ರೈಲು ಸೆಟ್‌ಗಳನ್ನು ಸಮಯೋಚಿತವಾಗಿ ತಲುಪಿಸುವ ಸಂದಿಗ್ದತೆ ವ್ಯಕ್ತವಾಗಿರುವುದರಿಂದ ಮೆಟ್ರೋ ಕಾರ್ಯಚರಣೆಗೆ ವಿಳಂಬವಾಗ್ತಿದೆ ಎಂದರು.

ಆದ್ರೆ ಈ ಹಿಂದೆ 2024ರ ಅಕ್ಟೋಬರ್‌ನಲ್ಲಿ ರಾವ್ ಅವರು ಹೇಳಿರುವ ಪ್ರಕಾರ ಟಿಟಾಘರ್‌ನಿಂದ ಬಿಎಂಆರ್‌ಸಿಎಲ್‌ ಡಿಸೆಂಬರ್ ಮೊದಲ ವಾರದ ವೇಳೆಗೆ ಮೊದಲ ರೈಲನ್ನು ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದರು.

ಅಲ್ಲದೆ ಆಗಸ್ಟ್ 2024 ರಲ್ಲಿ ಟಿಟಾಗರ್‌ ತನ್ನ ಮೊದಲ ರೈಲು ಸೆಟ್ ಅನ್ನು ತಲುಪಿಸುವ ನಿರೀಕ್ಷೆಯಿದೆ ಎಂದು ಭರವಸೆ ನೀಡಿದ್ದರು. ಆದ್ರೆ RV ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಮೂಲಕ ಬೊಮ್ಮಸಂದ್ರಕ್ಕೆ ರೈಲು ಜಾಲದ ಹಳದಿ ಮಾರ್ಗವು 18 ಕಿಮೀ ಉದ್ದವಾಗಿದ್ದರಿಂದ ಕೆಲವು ಅವಶ್ಯಕತೆಗಳನ್ನ ಪೂರೈಸುವಲ್ಲಿ ಸಾಕಷ್ಟು ವಿಳಂಬವಾಯಿತು.

ನಮ್ಮ ಮೆಟ್ರೋ ಹಳದಿ ಮಾರ್ಗದ ವಿವರ

ಬೆಂಗಳೂರಿನ ನಮ್ಮ ಮೆಟ್ರೋದ ಹಳದಿ ಮಾರ್ಗವು ಮಾರ್ಗ 4 ಎಂದೂ ಕರೆಯಲಾಗುತ್ತದೆ. ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ನಗರ ಚಲನಶೀಲತೆಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. ಈ ಮಾರ್ಗವು ಸರಿಸುಮಾರು 18.8 ಕಿಲೋಮೀಟರ್‌ಗಳಷ್ಟು ವ್ಯಾಪಿಸಿದೆ, ಇದು ನಗರದ ಆಗ್ನೇಯ ಮತ್ತು ನೈಋತ್ಯ ಭಾಗಗಳಲ್ಲಿನ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇದು ದಕ್ಷಿಣದ ರಾಗಿಗುಡ್ಡದಿಂದ ಅಂದರೆ ಯೆಲಚೇನಹಳ್ಳಿ ನಗರ ಕೇಂದ್ರದಲ್ಲಿ ಕೆಂಪೇಗೌಡ ನಿಲ್ದಾಣದವರೆಗೆ ಅಂದರೆ ಎಂಜಿ ರಸ್ತೆಗೆ ಸಾಗುತ್ತದೆ. ಜಯನಗರ, ಬನಶಂಕರಿ ಮತ್ತು ಜೆಪಿ ನಗರದಂತಹ ಪ್ರಮುಖ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಹಳದಿ ರೇಖೆಯು ಜನನಿಬಿಡ ನೆರೆಹೊರೆಗಳಲ್ಲಿ ಸಾರಿಗೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಸ್ತೆ ಸಾರಿಗೆಗೆ ವೇಗವಾದ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಪರ್ಯಾಯವನ್ನು ನೀಡುತ್ತದೆ.

ಈ ಮಾರ್ಗವು ಗ್ರೀನ್ ಮತ್ತು ಪರ್ಪಲ್ ಲೈನ್‌ಗಳನ್ನು ಒಳಗೊಂಡಂತೆ ನಮ್ಮ ಮೆಟ್ರೋ ವ್ಯವಸ್ಥೆಯ ಇತರ ಭಾಗಗಳೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ಪ್ರಯಾಣಿಕರಿಗೆ ಸುಲಭ ವರ್ಗಾವಣೆಯನ್ನು ಒದಗಿಸುತ್ತದೆ. ಈ ರೈಲುಗಳು ಹೈಟೆಕ್ ಸೌಲಭ್ಯಗಳೊಂದಿಗೆ ಆಧುನಿಕ ನಿಲ್ದಾಣಗಳು ಮತ್ತು ಸ್ವಯಂಚಾಲಿತ ಟಿಕೆಟಿಂಗ್ ವ್ಯವಸ್ಥೆಗಳು ಹಳದಿ ಮಾರ್ಗದ ಪ್ರಮುಖ ಲಕ್ಷಣಗಳಾಗಿವೆ. ಈ ಮಾರ್ಗವು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೆಂಗಳೂರಿನಲ್ಲಿ ಹೆಚ್ಚು ಸುಸ್ಥಿರ ಸಾರಿಗೆಯನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಅದರ ಪರಿಸರ ಸ್ನೇಹಿ ವಿನ್ಯಾಸ ಮತ್ತು ಹೆಚ್ಚಿನ ಸಾಮರ್ಥ್ಯದೊಂದಿಗೆ, ಹಳದಿ ಮಾರ್ಗವು ಉತ್ತಮ ಸಾರ್ವಜನಿಕ ಸಾರಿಗೆ ಮೂಲಸೌಕರ್ಯಕ್ಕಾಗಿ ನಗರದ ದೃಷ್ಟಿಯ ಅತ್ಯಗತ್ಯ ಭಾಗವಾಗಿದೆ. ಇದು ಬೆಂಗಳೂರಿನ ಮೆಟ್ರೋ ಜಾಲದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ವಿಶ್ವ ದರ್ಜೆಯ ಮೆಟ್ರೋ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಬೆಂಗಳೂರಿನ ವಿಶಾಲ ಗುರಿಯ ಭಾಗವಾಗಿ, ಸಂಪರ್ಕವನ್ನು ಸುಧಾರಿಸುವಲ್ಲಿ, ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವಲ್ಲಿ ಮತ್ತು ನಗರದ ಮಾಲಿನ್ಯದ ಪ್ರಮಾಣವನ್ನ ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+