ಬೆಂಗಳೂರಿನ ದಟ್ಟಣೆಯನ್ನ ಕಡಿಮೆ ಮಾಡಲು ಬಿಡದಿ, ಹಾರೋಹಳ್ಳಿ ನಡುವೆ ಬೃಹತ್ ಬೆಂಗಳೂರು ಇಂಟಿಗ್ರೇಟೆಡ್ ಸ್ಯಾಟಲೈಟ್ ಟೌನ್ ಶಿಪ್ ನಿರ್ಮಿಸಲು ಕರ್ನಾಟಕ ಸಚಿವ ಸಂಪುಟ ಅನುಮೋದನೆಯನ್ನ ನೀಡಿದೆ. ಜನಸಂದಣಿಯನ್ನ ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ಹೊಸ ಟೌನ್‌ಶಿಪ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕಗಳ ಮೂಲಕ ಸ್ಯಾಟಲೈಟ್ ಟೌನ್‌ಶಿಪ್‌ಗಳಾಗಿ ಅಭಿವೃದ್ಧಿ ಮಾಡಲು ಸಂಪುಟ ಒಪ್ಪಿಗೆಯನ್ನ ನೀಡಿದೆ.
ಹೊಸೂರು, ಕೆ.ಜಿ.ಗೊಲ್ಲರಪಾಳ್ಯ, ಬೈರಮಂಗಲ, ಬನ್ನಿಗೆರೆ, ಕಂಚುಗಾರನಹಳ್ಳಿ, ಅರಳಾಲುಸಂದ್ರ, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ, ಕಂಚುಗಾರಹಳ್ಳಿ ಕಾವಲು ಮತ್ತು ವಡೇರಹಳ್ಳಿ ಹೋಬಳಿಗಳನ್ನ ಒಳಗೊಂಡಂತೆ 10 ಗ್ರಾಮಗಳ ವ್ಯಾಪ್ತಿಯ 8,032 ಎಕರೆ ಪ್ರದೇಶದಲ್ಲಿ ಈ ಹೊಸ ಟೌನ್‌ಶಿಪ್ ನಿರ್ಮಾಣವಾಗಲಿದೆ.

ಇನ್ನು ಈ ಕುರಿತು ಕರ್ನಾಟಕ ಕಾನೂನು ಮತ್ತು ಸಂಸದೀಯ ವಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿದ್ರು. ಈ ಬಗ್ಗೆ ಮತಾಡಿದ ಅವರು ಬೆಂಗಳೂರಿನ ದಟ್ಟಣೆಯನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಇಂಟಿಗ್ರೇಟೆಡ್ ಸ್ಯಾಟಲೈಟ್ ಟೌನ್ ಶಿಪ್ ಅನ್ನು ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳಲ್ಲಿ ನಿರ್ಮಿಸಲು ಮುಂದಾಗಿದೆ. ಸಚಿವ ಸಂಪುಟ ಅನುಮೋದನೆ ನೀಡಿರುವ ಹಲವು ಪ್ರಕಾರಗಳಲ್ಲಿ ಬೃಹತ್ ಬೆಂಗಳೂರು ಸ್ಯಾಟಲೈಟ್ ಟೌನ್‌ಶಿಪ್ ಕೂಡ ಒಂದಾಗಿದೆ ಎಂದು ಹೇಳಿದರು. ಅಲ್ಲದೆ 2024-25ರ ಬಜೆಟ್ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯನವರು ಕೂಡ ಸ್ಯಾಟಲೈಟ್ ಟೌನ್‌ಶಿಪ್ ನಿರ್ಮಾಣದ ಕರಿತು ಘೋಷಣೆ ಮಾಡಿದ್ದರು.
ಸ್ಯಾಟಲೈಟ್ ಟೌನ್‌ಶಿಪ್ ನಿರ್ಮಾಣದ ಕರಿತು ಕರ್ನಾಟಕ ಸರ್ಕಾರ ಈಗಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಒಪ್ಪಿಗೆಯನ್ನ ಸೂಚಿಸಿದೆ. ಇದಕ್ಕಾಗಿ ಸರ್ಕಾರ ಈಗಾಗಲೇ 8,032 ಎಕರೆಗಳನ್ನ ಸ್ವಾಧೀನಪಡಿಸಿಕೊಂಡಿದೆ. ಇನ್ನು ಭೂಮಲೀಕರಿಗೆ 35% ರಿಂದ 50% ವರೆಗೆ ಪರಿಹಾರವನ್ನ ನೀಡಲು ಸರ್ಕಾರ ಮಂದಾಗಿದೆ.
ವರ್ಕ್ ಲೈವ್ ಪ್ಲೇ ಥೀಮ್‌ನ ಆಧಾರದ ಮೇಲೆ ಟೌನ್‌ಶಿಪ್‌ಅನ್ನು ನಿರ್ಮಿಸಲಾಗುವುದು. ಜೊತೆಗೆ ಇದಕ್ಕಾಗಿ ಜಾಗತಿಕ ಟೆಂಡರ್ ಮೂಲಕ ಸೂಕ್ತ ಕಂಪನಿಯನ್ನ ನೇಮಸಲು ಸಚಿವ ಸಂಪುಟ ಈಗಾಗಲೇ ಅನುಮೋನೆಯನ್ನ ನೀಡಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.
ಇದಲ್ಲದೆ ಈ ಟೌನ್‌ಶಿಪ್ ನಿರ್ಮಾಣಕ್ಕಾಗಿ ಕಮಿಟಿಯನ್ನ ಕೂಡ ಸರ್ಕಾರ ರಚಿಸಲಿದೆ ಎಂದು ಸಚಿವರು ಹೇಳಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆಗಳು ಮತ್ತು ಸಂಸ್ಥೆಗಳನ್ನ ಒಗೊಂಡಂತೆ ಮೇಲ್ವಿಚಾರಣೆಗಾಗಿ ಕಮಿಟಿಯನ್ನ ರಚಿಸಲಾಗುವುದು ಎಂದು ಹೇಳಿದರು.
ಹಾಗೆ ಇದ ಜೊತೆಗೆ ನಷ್ಟುಂಟು ಮಾಡುತ್ತಿರುವ ಉಧ್ಯಮಗಳನ್ನ ಮುಚ್ಚಲು ಹಾಗೆ ವಿಲೀನಗೊಳಿಸಲು ಸಚಿವ ಸಂಪುಟ ಒಪ್ಪಿಗೆಯನ್ನ ನೀಡಿತು. ಐಗಾಗಲೇ ರಾಜ್ಯದಲ್ಲಿ ಇರುವ 125 ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 34 ಉದ್ಯಮಗಳು ಲಾಭದಲ್ಲಿ ನಡೆಯುತ್ತಿದ್ದರೆ, 33 ನಷ್ಟದಲ್ಲಿ ನಡೆಯುತ್ತಿವೆ. ಇನ್ನು 32 ಸಾಮಾಜಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಹಾಗೆ 16 ಕಾರ್ಯನಿರ್ವಹಿಸುತ್ತಿಲ್ಲ ಅಥವಾ ಮುಚ್ಚಲ್ಪಟ್ಟಿವೆ.
ಸಭೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮ(KWSDRP) ಕ್ಕೆ ಸಂಪುಟ ಅನುಮೋದನೆಯನ್ನ ನೀಡಿತು. ಈ ಕಾರ್ಯಕ್ರಮವು ವಿಶ್ವಬ್ಯಾಂಕ್‌ನಿಂದ 3,500 ಕೋಟಿ ರೂ. ಸಾಲ ಮತ್ತು ರಾಜ್ಯ ಸರಕಾರದಿಂದ 1,500 ಕೋಟಿ ರೂ.ಗಳನ್ನು ಒಳಗೊಂಡಂತೆ 5,000 ಕೋಟಿ ರೂ.ಗಳ ಕಾರ್ಯಕ್ರಮ ಇದಾಗಿದೆ. ಇನ್ನು ಇದರ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನ ಉನ್ನತ ಅಧಿಕಾರಿಗಳ ಸಮಿತಿ ಮಾಡಲಿದೆ.
ಹಾಗೆ ಸಂಪುಟವು ಪರಿಷ್ಕೃತ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ನೀತಿ 2025 ಅನ್ನು ಅನುಮೋದಿಸಿದೆ. ಇನ್ನು ಇದು ಆಸ್ತಿ ಹಣಗಳಿಕೆಯ ಚೌಕಟ್ಟನ್ನು ಒಳಗೊಂಡಿದೆ. ಜಾರಿಗೆ ಬಂದ ಎಲ್ಲಾ ಯೋಜನೆಗಳಿಗೆ ಸಂಬಂಧಿಸಿದ ಸಂಸ್ಥೆಗಳು, ಟೆಂಡರ್ ನೀಡುವುದಕ್ಕೆ ಮುನ್ನ 90% ಅಗತ್ಯವಾದ ಭೂಮಿ ಅನಿಯಂತ್ರಿತವಾಗಿದೆಯಾ ಎಂದು ಖಚಿತಪಡಿಸಿಕೊಳ್ಳಬೇಕು. ಎಲ್ಲಾ PPP ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿ (PPPAC) ಮೂಲಕ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ (IDP) ಮತ್ತು ಒಳನಾಡು ಜಲಮಾರ್ಗಗಳು ಮತ್ತು ಸಾರಿಗೆ ಇಲಾಖೆಯಿಂದ (IWTD) ಪರಿಶೀಲಿಸಲಾಗುತ್ತದೆ ಮತ್ತು ರಾಜ್ಯ-ಮಟ್ಟದ ಏಕಗವಾಕ್ಷಿ ಸಂಸ್ಥೆ (SLSWA)ಯಿಂದ ಶಿಫಾರಸುಗಳನ್ನ ಮಾಡಬೇಕಾಗುತ್ತದೆ ಎಂದು ಪಾಟಿಲ್ ಹೇಳಿದರು.


Click it and Unblock the Notifications