ಕರ್ನಾಟಕ ಹಾಲು ಒಕ್ಕೂಟ ಈಗಾಗಲೇ ತನ್ನ ಉತ್ತಮ ಬ್ರ್ಯಾಂಡ್ ಮೂಲಕ ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಕೂಡ ಪ್ರಖ್ಯಾತಿಯನ್ನ ಹೊಂದಿದೆ. ಅಲ್ಲದೆ ಉತ್ತಮ ಹಾಲಿನ ಉತ್ಪನ್ನಗಳ ಮೂಲಕ ಮನೆಮಾತಾಗಿರುವ ಕೆಎಂಎಫ್ ತನ್ನ ಉತ್ಪನ್ನಗಳ ಜೊತೆಗೆ ರೆಡಿಮೇಡ್ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯನವರು ನಂದಿನಿಯ ಈ ಹೊಸ ಉತ್ಪನ್ನವನ್ನ ಬಿಡುಗಡೆ ಮಾಡಿದ್ರು. ಇನ್ಮುಂದೆ ಕೆಎಂಎಫ್ ನಂದಿನಿ ಹಾಲಿನ ಉತ್ಪನ್ನಗಳ ಜೊತೆಗೆ ನಂದಿನಿ ವೇ ಪ್ರೋಟಿನ್ ಇಡ್ಲಿ ಮತ್ತು ದೋಸೆ ಹಿಟ್ಟುಗಳನ್ನು ಜನರಿಗೆ ನೀಡಲಿದೆ.
ರಾಜ್ಯದ ಜನರ ಮನೆ ಬಾಗಿಲೆಗೆ ತನ್ನ ಹಾಲಿನ ಉತ್ಪನ್ನಗಳನ್ನ ನೀಡುತ್ತಿದ್ದ ನಂದಿನಿ ಇನ್ಮೇಲೆ ಪ್ರತಿದಿನ ಬೆಳಿಗ್ಗೆ ತನ್ನ ಉತ್ಪನ್ನಗಳಾದ ವೇ ಪ್ರೋಟೀನ್ ಆಧಾರಿತ ಇಡ್ಲಿ, ದೋಸೆ ಹಿಟ್ಟುಗಳನ್ನ ಕೈಗೆಟುಕುವ ದರದಲ್ಲಿ ಜನರಿಗೆ ನೀಡಲಿದೆ. ಪ್ರತಿದಿನ ತಿಂಡಿ ಮಾಡುವ ಚಿಂತೆ ಕೂಡ ಇನ್ಮುಂದೆ ಇರುವುದಿಲ್ಲ ನಂದಿನಿಯ ರೆಡಿಮೇಡ್ ಇಡ್ಲಿ ದೋಸೆ ಹಿಟ್ಟಿನಿಂದ ನಿಮ್ಮ ಬೆಳೆಗ್ಗಿನ ತಿಂಡಿ ಕೂಡ ಸುಲಭವಾಗಲಿದೆ.

ಕೈಗೆಟುಕುವ ದರದಲ್ಲಿ ದೊರೆಯಲಿದೆ ನಂದಿನಿ ಇಡ್ಲಿ-ದೋಸೆ ಹಿಟ್ಟು
ನಂದಿನಿ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳಾದ ಇಡ್ಲಿ-ದೋಸೆ ಹಿಟ್ಟುಗಳು ಇನ್ಮೇಲೆ ನಿಮಗೆ ಕೈಗೆಟುಕುವ ದರದಲ್ಲಿ ದೊರೆಯಲಿದೆ. ಅಲ್ಲದೆ ಇದು ಇದೇ ತಿಂಗಳಿನಿಂದಲೇ ಎಲ್ಲಾ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇನ್ನು ಈ ಉತ್ಪನ್ನವು ಎರಡು ಗಾತ್ರಗಳಲ್ಲಿ ಲಭ್ಯವಿರಲಿದೆ. 450 ಗ್ರಾಂ ಪ್ಯಾಕ್ ಬೆಲೆ 40 ರೂಪಾಯಿ ಇದ್ದರೆ, 900 ಗ್ರಾಂ ಪ್ಯಾಕ್‌ಗೆ 80 ರೂಪಾಯಿ ಬೆಲೆ ಇರಲಿದೆ. ಜನಸಾಮಾನ್ಯರಿಗಾಗಿ ಅತ್ಯಂತ ಅಗ್ಗದ ಬೆಲೆಯಲ್ಲಿ ಎಲ್ಲರಿಗು ತಲುಪಿಸುವ ಕೆಲಸವನ್ನ ಕೆಎಂಎಫ್ ಮಾಡ್ತಿದೆ.
ಅಲ್ಲದೆ ಈಗಾಗಲೇ ಇಡ್ಲಿ ದೋಸೆ ಹಿಟ್ಟಿನ ಮಾರುಕಟ್ಟೆಯಲ್ಲಿ ಐಡಿ, ಅಸಲ್ ಮತ್ತು ಎಂಟಿಆರ್‌ನಂತಹ ಕಂಪನಿಗಳು ಹೆಚ್ಚಿನ ಪ್ರಾಬಲ್ಯವನ್ನ ಹೊಂದಿವೆ. ಆದ್ರೀಗ ಮಾರುಕಟ್ಟೆಗೆ ಕೆಎಂಎಫ್ ಕೂಡ ಲಗ್ಗೆ ಇಟ್ಟಿದ್ದು, ಮುಂಬರುವ ದಿನಗಳಲ್ಲಿ ಎಲ್ಲಾ ಉತ್ಪನ್ನಗಳಿಗೂ ಇದು ಸ್ಪರ್ಧಿ ಕೂಡ ಆಗಬಹುದು. ಇನ್ನು ಈ ಉತ್ಪನ್ನದಲ್ಲಿ ಬರೀ ಇಡ್ಲಿ ದೋಸೆ ಹಿಟ್ಟಿನ ಜೊತೆಗೆ ವೇ ಪ್ರೋಟೀನ್ ಕೂಡ ಇದ್ದು, ಆರೋಗ್ಯಕರವಾಗಿ ಕೂಡ ಇರಲಿದೆ. ರುಚಿಯ ಜೊತೆಜೊತೆಗೆ ಆರೋಗ್ಯದ ಕಡೆ ಕೂಡ ಕೆಎಂಎಫ್ ಕೇಂದ್ರಿಕರಿಸಲಿದೆ.
ನಂದಿನಿಯ ಹೊಸ ಉತ್ಪನ್ನದ ಬಗ್ಗೆ ಸಿಎಂ ಟ್ವೀಟ್
ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಕೆಎಂಎಫ್‌ನ ಹೊಸ ಉತ್ಪನ್ನ ನಂದಿನಿ ಇಡ್ಲಿ, ದೋಸೆ ಹಿಟ್ಟನ್ನು ಅನಾವರಣ ಮಾಡಿದ್ರು. ಅಷ್ಟಲ್ಲದೆ ಈ ಹೊಸ ಉತ್ಪನ್ನದ ಕುರಿತು ಸಿಎಂ ಟ್ವೀಟ್ ಮಾಡಿದ್ದಾರೆ. ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್‌ನ ನಂದಿನಿ ಉತ್ಪನ್ನಗಳು ದೇಶವ್ಯಾಪಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಗೂ ನಂದಿನಿ ಹಾಲು ತಲುಪುತ್ತಿದೆ. ದೂರದ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಪ್ರಮುಖ ನಗರಗಳಲ್ಲೂ ನಂದಿನಿ ಹಾಲಿಗೆ ಬೇಡಿಕೆ ಬರುತ್ತಿದೆ. ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಸುಪ್ರಸಿದ್ಧ ಲಡ್ಡು ಪ್ರಸಾದವನ್ನು ನಂದಿನಿ ತುಪ್ಪದಿಂದ ಸಿದ್ಧಪಡಿಸಲಾಗುತ್ತಿದೆ. ಹೀಗೆ ನಂದಿನಿಯ ನಾನಾ ಉತ್ಪನ್ನಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದು, ಕನ್ನಡಿಗರ ಬ್ರ್ಯಾಂಡ್ ಹೆಮ್ಮರವಾಗಿ ಬೆಳೆಯುತ್ತಿದೆ.
ನಾಗರಿಕರ ಬಹುದಿನಗಳ ಅಪೇಕ್ಷೆಯಂತೆ ಇದೀಗ ನಂದಿನಿ ಉತ್ಪನ್ನಗಳಿಗೆ ಹೊಸ ಸೇರ್ಪಡೆಯಾಗಿ ದೋಸೆ ಹಾಗೂ ಇಡ್ಲಿ ಹಿಟ್ಟು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವೇ ಪ್ರೋಟೀನ್ ಆಧಾರಿತ ಉತ್ಕೃಷ್ಟ ಗುಣಮಟ್ಟದ ಹಿಟ್ಟು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಬೆಳಗ್ಗಿನ ಉಪಾಹಾರವು ಗರಿಗರಿ ದೋಸೆ, ಸವಿಸವಿ ಇಡ್ಲಿಯೊಂದಿಗೆ ರುಚಿ ಮತ್ತು ಆರೋಗ್ಯವನ್ನು ವೃದ್ಧಿಗೊಳಿಸಲಿದೆ ಎಂದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಕೆಎಂಎಫ್‌ನ ಈ ನೂತನ ಉತ್ಪನ್ನವನ್ನ ಜನರು ಯಾವ ರೀತಿ ಸ್ವೀಕಾರ ಮಾಡುತ್ತಾರೆ ಹಾಗೆ ಯಾವ ರೀತಿ ಪ್ರತಿಕ್ರಿಯೆ ಬರಬಹುದು ಎಲ್ಲವನ್ನ ಗಮನಿಸಿ ಕೆಎಂಎಫ್ ತನ್ನ ಉತ್ಪನ್ನವನ್ನ ನಗರದಾದ್ಯಂತ ವಿಸ್ತರಿಸಲು ಮುಂದಾಗಿದೆ. ವಿಶೇಷವಾಗಿ ನಗೆದ ಗ್ರಾಹಕರು ಕೆಲಸದ ಒತ್ತಡದಿಂದಾಗಿ ರೆಡಿಮೇಡ್ ಆಹಾರಗಳನ್ನ ಬಯಸುತ್ತಾರೆ. ಅಂತವರಿಗೆ ಈ ಉತ್ಪನ್ನ ಬಹಳ ಸಹಾಯಕವಾಗಲಿದೆ. ಹಾಗೆ ನಂದಿನಿ ಈಗಾಗಲೇ ಜಾಗತಿಕವಾಗಿ ಪ್ರಖ್ಯತಿಯನ್ನ ಹೊಂದಿದ್ದು, ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಕೂಡ ತನ್ನ ಪ್ರಖ್ಯತಿಯನ್ನ ವಿಸ್ತರಿಸಲು ಮುಂದಾಗಿದೆ. ಈ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ದತಿಯಿಂದಾಗಿ ಮಾರಿಕಟ್ಟೆಯಲ್ಲಿ ನೂತನ ಉತ್ಪನ್ನಗಳ ಬೇಡಿಕೆ ಕೂಡ ಹೆಚ್ಚಾಗಲಿದೆ. ಗ್ರಾಹಕರ ಆದ್ಯತೆಗಳನ್ನ ಪೂರೈಕೆ ಮಾಡಲು ಈ ಹೊಸ ಉತ್ಪನ್ನವನ್ನ ಕೆಂಎಫ್ ಪರಿಚಯ ಮಾಡುತ್ತಿದೆ.
ಈ ಹಿಂದೆಯೆ ಆರಂಭವಾಗಬೇಕಿದ್ದ ನಂದಿನಿ ದೋಸೆ ಮತ್ತು ಇಡ್ಲಿ ಹಿಟ್ಟು ಹಲವು ದಿನಗಳ ವಿಳಂಬದ ನಂತರ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಅಲ್ಲದೆ ಇದರಲ್ಲಿ ವೇ ಪ್ರೋಟೀನ್ ಇರುವುದರಿಂದ ಆರೋಗ್ಯ ದೃಷ್ಟಿಯನ್ನ ಕೂಡ ಇದು ಹೊಂದಿದೆ. ಇನ್ನು ಈ ಉತ್ಪನ್ನ ಬಹುಬೇಗ ಜನರನ್ನ ಕೂಡ ಆಕರ್ಷಿಸಲಿದೆ ಎಂದು ಕೆಎಂಎಫ್ ವಿಶ್ವಾಸ ವ್ಯಕ್ತಪಡಿಸಿದೆ. ಅಲ್ಲದೆ ನಾನಾ ಖಾಸಗಿ ಕಂಪನಿಗಳ ಸ್ಪರ್ಧೆಯ ಮಧ್ಯೆ ಕೆಂಎಫ್ ಮತ್ತೆ ತನ್ನ ಹೊಸ ಉತ್ಪನ್ನಗಳ ಮೂಲಕ ಜನರ ಮುಂದೆ ಬರ್ತಿದೆ.


Click it and Unblock the Notifications