ಬೆಂಗಳೂರಿನಲ್ಲಿ ಏರಿಕೆಯಾಗಲಿದೆ ಶತ ಮಿಲಿಯನೇರ್​ಗಳ ಸಂಖ್ಯೆ.!

ಬೆಂಗಳೂರು, ಸೆಪ್ಟಂಬರ್ 19: ಭಾರತದ ಸಿಲಿಕಾನ್ ಸಿಟಿ ಎಂದು ಕರೆಯಲ್ಪಡುವ ಬೆಂಗಳೂರು, ಕಳೆದ ದಶಕದಲ್ಲಿ ತನ್ನ ಮಿಲಿಯನೇರ್ ಜನಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ, ಇದು ಇನ್ನಷ್ಟು ಏರಿಕೆ ಕಾಣುವ ನಿರೀಕ್ಷೆ ಇದ್ದು ಮುಂದಿನ 16 ವರ್ಷಗಳಲ್ಲಿ ಜನಸಂಖ್ಯೆಯ ಗಮನಾರ್ಹ ನಾಟಕೀಯ ಬೆಳವಣಿಗೆಗೆ ಸಿದ್ಧವಾಗಿದೆ. ಕೇವಲ ಜನಸಂಖ್ಯೆ ಮಾತ್ರವಲ್ಲದೇ ಇಲ್ಲಿರುವ ಅಗರ್ಭ ಸಿರಿವಂತರ ಸಂಖ್ಯೆಯಲ್ಲೂ ಹೆಚ್ಚಳ ಕಾಣಲಿದೆ.

ಹೆನ್ಲಿ ಮತ್ತು ಪಾರ್ಟನರ್ ಸೆಂಟಿ-ಮಿಲಿಯನೇರ್ ವರದಿ 2024 ರ ಪ್ರಕಾರ, ಬೆಂಗಳೂರು ನಗರವು ಅಂದಾಜು 13,200 ಮಿಲಿಯನೇರ್‌ಗಳಿಗೆ ನೆಲೆಯಾಗಿದೆ. ನಗರದಲ್ಲಿ ಅದರ ಅತಿ ಶ್ರೀಮಂತ ಜನಸಂಖ್ಯೆಯಲ್ಲಿ 150 ಪ್ರತಿಶತದಷ್ಟು ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಎಂದು ಮುನ್ಸೂಚಿಸಲಾಗಿದೆ. ಮಿಲಿಯನೇರ್‌ಗಳ ತವರೂರು, ಬೆಂಗಳೂರು 800 ಕೋಟಿ ರೂಪಾಯಿಗಳ ಸಾಮೂಹಿಕ ಹೂಡಿಕೆಯ ಸಂಪತ್ತನ್ನು ಹೊಂದಿದೆ ಎಂದು ವರದಿ ಮಾಡಿದೆ.

ಹೆಚ್ಚಳವಾಗಲಿದೆ ಬೆಂಗಳೂರಿನ ಮಿಲಿಯನೇರ್ ಗಳ ಸಂಖ್ಯೆ

ಈ ದತ್ತಾಂಶವು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ, "ವರ್ಲ್ಡ್'ಸ್ ವೀಲ್ತಿಯೆಸ್ಟ್ ಸಿಟೀಸ್ ರಿಪೋರ್ಟ್ -2024"ರ ವರದಿಗೆ ಹೊಂದಿಕೆಯಾಗುತ್ತದೆ. ಈ ವರದಿ ಕೂಡಾ ಬೆಂಗಳೂರಿನ ಶ್ರೀಮಂತ ಜನಸಂಖ್ಯೆಯ ಹೆಚ್ಚಳವನ್ನು ಸಹ ಊಹಿಸಿತ್ತು. ಕಳೆದ ಒಂದು ದಶಕದಲ್ಲಿ ಭಾರತದ ಸಿಲಿಕಾನ್ ವ್ಯಾಲಿಯು ತನ್ನ ಮಿಲಿಯನೇರ್ ಜನಸಂಖ್ಯೆಯಲ್ಲಿ ಗಮನಾರ್ಹವಾದ 120 ಶೇಕಡಾ ಹೆಚ್ಚಳವನ್ನು ಕಂಡಿದೆ ಎಂದು ಅದು ಹೇಳಿದೆ. ಹೀಗಾಗಿ ಮುಂದಿನ ವರ್ಷಗಳಲ್ಲಿ ಶತ ಮಿಲಿಯನೇರ್ ಗಳ ಸಂಖ್ಯೆಯಲ್ಲೂ ವ್ಯಾಪಕ ಹೆಚ್ಚಳ ಕಂಡುಬರಲಿದೆ.

ಸೆಂಟಿ-ಮಿಲಿಯನೇರ್‌ಗಳಲ್ಲಿ ಜಾಗತಿಕ ಏರಿಕೆ

ಶತ ಮಿಲಿಯನೇರ್ ಗಳ ಜಾಗತಿಕ ಜನಸಂಖ್ಯೆಯು ಕಳೆದ ದಶಕದಲ್ಲಿ ಶೇಕಡಾ 54 ರಷ್ಟು ಏರಿಕೆಯಾಗಿದೆ. ಈ ಪೈಕಿ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ಮುನ್ನಡೆ ಸಾಧಿಸಿವೆ. ಈ ಅವಧಿಯಲ್ಲಿ ಚೀನಾ ಶತ ಮಿಲಿಯನೇರ್‌ಗಳಲ್ಲಿ 108 ಪ್ರತಿಶತದಷ್ಟು ಏರಿಕೆಯನ್ನು ಕಂಡಿದೆ, ಆದರೆ ಯುಎಸ್ 81 ಪ್ರತಿಶತದಷ್ಟುಮಾತ್ರ ಏರಿಕೆ ಕಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಯುರೋಪಿನ ಸೆಂಟಿ-ಮಿಲಿಯನೇರ್ ಜನಸಂಖ್ಯೆಯು ಕೇವಲ 26 ಪ್ರತಿಶತದಷ್ಟು ಮಾತ್ರ ಬೆಳೆದಿದೆ. ಪ್ರಸ್ತುತವಾಗಿ ವಿಶ್ವಾದ್ಯಂತ 29,350 ವ್ಯಕ್ತಿಗಳು $100 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆ ಮಾಡಬಹುದಾದ ಆಸ್ತಿಗಳನ್ನು ಹೊಂದಿದ್ದಾರೆ ಎಂದು ವರದಿಯು ಹೇಳುತ್ತದೆ.

ಈ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ 60 ಪ್ರತಿಶತದಷ್ಟು ಜನರು ಉದ್ಯಮಿಗಳು ಮತ್ತು ಕಂಪನಿ ಸಂಸ್ಥಾಪಕರು, ಸಂಪತ್ತು ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಅನೇಕ ಫಾರ್ಚೂನ್ 500, S&P 500, FTSE 100, ಮತ್ತು Nikkei 225 ಕಂಪನಿಗಳು ಈ ಸೆಂಟಿ-ಮಿಲಿಯನೇರ್‌ಗಳಿಂದ ಸ್ಥಾಪಿಸಲ್ಪಟ್ಟಿವೆ.

ವಿಶ್ವದ ಶತ ಮಿಲಿಯನೇರ್‌ಗಳಲ್ಲಿ ಮೂರನೇ ಒಂದು ಭಾಗದಷ್ಟು ಜನರು ಜಾಗತಿಕವಾಗಿ 50 ಪ್ರಮುಖ ನಗರಗಳಲ್ಲಿ ವಾಸಿಸುತ್ತಿದ್ದಾರೆ. ನ್ಯೂಯಾರ್ಕ್ ನಗರವು 744, ನಂತರ ಬೇ ಏರಿಯಾ 675 ಲಾಸ್ ಏಂಜಲೀಸ್ 496 ಶತ ಮಿಲಿಯನೇರ್‌ ಗಳೊಂದಿಗೆ ಮುಂಚೂಣಿಯಲ್ಲಿದೆ. ಇನ್ನೊಂದೆಡೆ ಬೀಜಿಂಗ್, ಸಿಂಗಾಪುರ , ಶಾಂಘೈ, ಹಾಂಗ್ ಕಾಂಗ್‌ನಂತಹ ಏಷ್ಯಾದ ನಗರಗಳು ಮತ್ತು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ಭಾರತೀಯ ನಗರಗಳು ಈ ಅತಿ ಶ್ರೀಮಂತ ವ್ಯಕ್ತಿಗಳ ಹಾಟ್‌ಸ್ಪಾಟ್‌ಗಳಾಗಿ ತ್ವರಿತವಾಗಿ ಶ್ರೇಯಾಂಕದಲ್ಲಿ ಏರುತ್ತಿವೆ.

ಸೆಂಟಿ ಮಿಲಿಯನ್ ಎಂದರೆ ನೂರು ಮಿಲಿಯನ್. ಅಂದರೆ 10 ಕೋಟಿ. ನೂರು ಮಿಲಿಯನ್ ಉಳ್ಳವರು 100 ಮಿಲಿಯನ್ ಡಾಲರ್ ಮೌಲ್ಯದ ಹೂಡಿಕೆಗರ್ಹವಾದ ಆಸ್ತಿ ಹೊಂದಿರುವವರಾಗಿರುತ್ತಾರೆ.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎಲ್ಲಾ ಸೆಂಟಿ-ಮಿಲಿಯನೇರ್‌ಗಳು ಅತಿ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳಾಗಿದ್ದರೂ, ಎಲ್ಲ ಅಲ್ಟ್ರಾ-ಹೈ-ನೆಟ್-ವರ್ತ್ ವ್ಯಕ್ತಿಗಳು ಶತ ಮಿಲಿಯನೇರ್‌ಗಳು ಆಗಿರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+