ಬೆಂಗಳೂರು, ಜುಲೈ 27: ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿರುವ ಭಾರತದ ಮುಂಚೂಣಿಯ ಕಂಪೆನಿ ಓಲಾ. ಈಗ ಭವಿಷ್ ಅಗರ್‌ವಾಲ್ ನೇತೃತ್ವದ ಓಲಾ ಎಲೆಕ್ಟ್ರಿಕ್ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ(ಐಪಿಒ)ಗೆ ಸಿದ್ಧವಾಗುತ್ತಿದೆ. ಬಹುನಿರೀಕ್ಷಿತ ಈ ಕಂಪೆನಿಯ ಐಪಿಒ ಆಗಸ್ಟ್‌ನಲ್ಲಿ ಚಂದಾದಾರಿಕೆಗೆ ಸಿದ್ಧವಾಗಲಿದೆ ಎಂದು ಮನಿ ಕಂಟ್ರೋಲ್ ಮಾಧ್ಯಮ ವರದಿ ಮಾಡಿದೆ.
ಜಪಾನ್‌ನ ದೈತ್ಯ ಹೂಡಿಕೆ ಸಂಸ್ಥೆಯಾದ ಸಾಫ್ಟ್‌ಬ್ಯಾಂಕ್ ಬೆಂಬಲಿತ ಓಲಾ ಎಲೆಕ್ಟ್ರಿಕ್ ಐಪಿಒ ತೆರೆದರೆ, ಆರಂಭಿಕ ಸಾರ್ವಜನಿಕ ಷೇರು ಕೊಡುಗೆ ಆರಂಭಿಸಿದ ಭಾರತದ ಮೊದಲ ಇವಿ ದಿಚಕ್ರ ವಾಹನ ಕಂಪೆನಿಯಾಗಿ ಓಲಾ ಎಲೆಕ್ಟ್ರಿಕ್ ಗುರುತಿಸಿಕೊಳ್ಳಲಿದೆ. ದೇಶೀಯ ಆಟೋಮೊಬೈಲ್ ವಲಯದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದ್ದು, ಭವಿಷ್ಯದಲ್ಲಿ ಏಥರ್ ಎನರ್ಜಿಯಂಥ ಇತರೆ ಎಲೆಕ್ಟ್ರಿಕ್ ಕಂಪೆನಿಗಳೂ ಈ ಹಾದಿಯಲ್ಲಿ ಹೆಜ್ಜೆ ಇರಿಸಲು ದಾರಿ ಮಾಡಿಕೊಡಲಿದೆ.

ಹೊಸ ಷೇರುಗಳ ಬಿಡುಗಡೆ ಹಾಗೂ ಹಾಲಿ ಷೇರುಗಳ ಮಾರಾಟದೊಂದಿಗೆ ಓಲಾ ಕಂಪೆನಿಯು 740 ಮಿಲಿಯನ್ ಡಾಲರ್ ಅಂದರೆ 6195 ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಿದೆ. 4.5 ಬಿಲಯನ್ ಡಾಲರ್ ಅಂದರೆ 33,500ರಿಂದ 35,600 ಕೋಟಿ ರೂ. ಮಾರುಕಟ್ಟೆ ಮೌಲ್ಯದಲ್ಲಿ ಈ ಬಹುದೊಡ್ಡ ಮೊತ್ತದ ಐಪಿಒ ತೆರೆಯಲು ಉದ್ದೇಶಿಸಲಾಗಿದೆ. ಅಲ್ಲದೆ ಈ ಮಾರುಕಟ್ಟೆ ಮೌಲ್ಯದೊಂದಿಗೆ ಹೂಡಿಕೆದಾರರಿಗೆ ರಿಟರ್ನ್ಸ್‌ಗೆ ಅವಕಾಶ ಕಲ್ಪಿಸಲು ಕಂಪೆನಿ ಉದ್ದೇಶಿಸಿರುವುದಾಗಿ ವರದಿಯಾಗಿದೆ.
ಓಲಾ ಎಲೆಕ್ಟ್ರಿಕ್ ಕಂಪೆನಿಯು ಕರಡು ಹೆರಿಂಗ್ ಪ್ರಾಸ್ಪೆಕ್ಟಸ್(ಡಿಆರ್‌ಪಿಎಚ್)ನ್ನು 2023ರ ಡಿ.22ರಂದು ಸೆಬಿಗೆ ಸಲ್ಲಿಸಿತ್ತು. ಈ ಐಪಿಒಗೆ ಕಂಪೆನಿಯು ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಹಾಗೂ ಗೋಲ್ಡ್‌ಮನ್ ಸ್ಯಾಶ್‌ನ್ನು ಸಲಹೆಗಾರರನ್ನಾಗಿ ನೇಮಕ ಮಾಡಿತ್ತು.
ಓಲಾ ಕ್ಯಾಬ್ಸ್ ಸಹ ಸ್ಥಾಪಕ ಅಗರ್‌ವಾಲ್ ಅವರು ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್ ಐದು ಇವಿ ಮಾದರಿಯ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ದೇಶದ ದ್ವಿಚಕ್ರ ಇವಿ ವಾಹನಗಳ ತಯಾರಿಕಾ ಕಂಪೆನಿಗಳ ಸಾಲಿನಲ್ಲಿ ಅತಿದೊಡ್ಡ ಜಾಲವಾಗಿದೆ. ಈ ಓಲಾ ಎಲೆಕ್ಟ್ರಿಕ್ 935 ಅನುಭವಿ ಕೇದ್ರಗಳು ಹಾಗೂ 414 ಸರ್ವೀಸ್ ಸೆಂಟರ್‌ಗಳೊಂದಿಗೆ ಬಹುದೊಡ್ಡ ವಿತರಣಾ ಜಾಲವನ್ನು ಹೊಂದಿದೆ.
ಈ ನಡುವೆ ಓಲಾ ಎಲೆಕ್ಟ್ರಿಕ್ ಐಪಿಓಗೆ ಸಿದ್ಧವಾಗುತ್ತಿದ್ದಂತೆ ತನ್ನ ಕಂಪೆನಿಯ ವೆಚ್ಚಗಳ ಕಡಿತಗೊಳಿಸುವ ಮೂಲಕ ಆರ್ಥಿಕವಾಗಿಯೂ ಕಂಪೆನಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದಕ್ಕೂ ಮುಂದಾಗಿದೆ. ಅದರಂತೆ ತನ್ನ ಕೆಲವೊಂದು ವೆಚ್ಚಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಸುಮಾರು 400ರಿಂದ 500 ಮಂದಿ ಉದ್ಯೋಗಿಗಳ ಸಂಖ್ಯೆಯನ್ನು ಕೂಡ ಕಡಿತಗೊಳಿಸುವುದಾಗಿಯೂ ಹೇಳಿತ್ತು. ಏಕೆಂದರೆ, ಕಂಪೆನಿಯ ನಿವ್ವಳ ನಷ್ಟವು ಹಿಂದಿನ ವರ್ಷದಲ್ಲಿದ್ದ 783.4 ಕೋಟಿ ರೂ.ನಿಂದ 2022-23 (FY23) ಹಣಕಾಸು ವರ್ಷದಲ್ಲಿ ಅದು 88% ಏರಿಕೆಯಾಗುವ ಮೂಲಕ1,471.6 ಕೋಟಿ ರೂ. ಆಗಿತ್ತು.
ಸೆಪ್ಟಂಬರ್ ಕೊನೆಯ ಬಾರಿಗೆ ಓಲಾ ಎಲೆಕ್ಟ್ರಿಕ್ ಹೂಡಿಕೆ ಸಂಗ್ರಹಿಸಿದ್ದು, ಸಿಂಗಾಪುರದ ಹೂಡಿಕೆ ದೈತ್ಯ ಕಂಪೆನಿಯಾದ ಟೆಮಾಸೆಕ್ ನೇತೃತ್ವದಲ್ಲಿ ಈ ಹೂಡಿಕೆ ಸಂಗ್ರಹ ಮಾಡಿತ್ತು. ಆ ವೇಳೆ ಕಂಪೆನಿಯ ಮೌಲ್ಯವನ್ನು 5.4 ಬಿಲಯನ್ ಡಾಲರ್ ಎಂದು ಟೆಮಾಸೆಕ್ ಲೆಕ್ಕ ಹಾಕಿತ್ತು.
ಇನ್ನು ಓಲಾದ ಕರಡು ದಾಖಲೆಗಳ ಪ್ರಕಾರ, ಕಂಪೆನಿಯು ಐಪಿಒದಲ್ಲಿ 5,500 ಕೋಟಿ ರೂ. ಮೌಲ್ಯದ ಹೊಸ ಷೇರುಗಳನ್ನು ವಿತರಣೆ ಮಾಡಲು ಉದ್ದೇಶಿಸಿದ್ದರೆ 1750 ಕೋಟಿ ರೂ. ಮೌಲ್ಯದ ಹಾಲಿ ಷೇರುಗಳ ಮಾರಾಟಕ್ಕೂ ಚಿಂತನೆ ನಡೆಸಿದೆ. ಆ ಮೂಳಕ 7,250 ಕೋಟಿ ರೂ. ಸಂಗ್ರಹಿಸುವುದಕ್ಕೆ ಬಯಸಿದೆ. ಹಾಲಿ ಷೇರುದಾರರು 9.519 ಕೋಟಿ ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡಲು ಉದ್ದೇಶಿಸಿದ್ದಾರೆ. ಕಂಪೆನಿ ಸಂಸ್ಥಾಪಕ ಭವಿಷ್ ಅರ್ಗವಾಲ್ 4.73 ಕೋಟಿ ಷೇರುಗಳನ್ನು ಮಾರಾಟ ಮಾಡಲಿದ್ದರೆ, ಆರಂಭಿಕ ಹೂಡಿಕೆದಾರರಾದ ಆಲ್ಫಾವೇವ್, ಆಲ್ಪೈನ್, ಡಿಐಜಿ ಇನ್ವೆಸ್ಟ್‌ಮೆಂಟ್, ಮ್ಯಾಟ್ರಿಕ್ಸ್ ಹಾಗೂ ಇತರೆ ಹೂಡಿಕೆದಾರರು 4.789 ಕೋಟಿ ಷೇರು ಮಾರಾಟ ಮಾಡಲಿದ್ದಾರೆ ಎಂದು ಡಿಆರ್‌ಪಿಎಚ್‌ನಲ್ಲಿ ಹೇಳಲಾಗಿದೆ.
ಇನ್ನೊಂದೆಡೆ ಓಲಾ ಕ್ಯಾಬ್ಸ್‌ನ ಮಾತೃಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಕೂಡ ಐಪಿಒ ತೆರೆಯಲು ಚಿಂತನೆ ನಡೆಸಿದ್ದು ಈ ಹಿಂದೆ ಹೂಡಿಕೆ ಬ್ಯಾಂಕ್‌ಗಳೊಂದಿಗೆ ಪ್ರಾಥಮಿಕ ಮಾತುಕತೆಯನ್ನು ನಡೆಸಿತ್ತು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!



Click it and Unblock the Notifications