ನವದೆಹಲಿ, ಸೆಪ್ಟೆಂಬರ್ 6: ಭಾರತದ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ ( ಸೆಬಿ) ಮೊದಲ ಮಹಿಳಾ ಅಧ್ಯಕ್ಷರಾಗಿರುವ ಮಾಧಬಿ ಪುರಿ ಬುಚ್ ಅವರ ವಿರುದ್ದ ಕೇಳಿಬಂದಿರುವ ಸರಣಿ ಆರೋಪಗಳ ಬಗ್ಗೆ ಸಂಸದೀಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ತನಿಖೆ ನಡೆಸಲು ಮುಂದಾಗಿದೆ. ಅಲ್ಲದೇ ಪಿಎಸಿಯೂ ಈ ತಿಂಗಳ ಅಂತ್ಯದ ವೇಳೆಗೆ ಮಾಧಬಿ ಪುರಿ ಅವರನ್ನು ವಿಚಾರಣೆಗೆ ಕರೆಸಬಹುದು ಎಂದು ತಿಳಿದುಬಂದಿದೆ.
ಮಾಧಬಿ ಪುರಿ ಬುಚ್ ಅದಾನಿ ಪ್ರಕರಣಗಳಲ್ಲಿ ಅವರ ಹೆಸರು ಥಳಕು ಹಾಕಿಕೊಂಡಿರುವುದು, ಸೆಬಿ ಸೇರಿದರೂ ಐಸಿಐಸಿಐನಿಂದ ಸಂಬಳ ಪಡೆಯುತ್ತಿರುವುದು ಮೊದಲಾದ ಗುರುತರ ಆರೋಪಗಳು ಅವರನ್ನು ಮೇಲಿದೆ. ಸೆಬಿ ಉದ್ಯೋಗಿಗಳು, ಸೆಬಿಯಲ್ಲಿ ಬಹಳ ವಿಷಕಾರಿ ಕೆಲಸದ ವಾತಾವರಣ ಇದೆ ಎಂದು ಆರೋಪಿಸಿರುವ ಸಂಗತಿ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಅವರ ರಾಜೀನಾಮೆಗೆ ಒತ್ತಾಯಿಸಿ ಸೆಬಿಯ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಸಂಸ್ಥೆಯಲ್ಲಿನ 'ಅಹಿತರ' ಕೆಲಸದ ವಾತಾವರಣವನ್ನು ಆರೋಪಿಸಿ ಸುಮಾರು 500 ಸೆಬಿ ಉದ್ಯೋಗಿಗಳು ಉನ್ನತ ಆಡಳಿತದ ವಿರುದ್ಧ ಆಗಸ್ಟ್ 6ರಂದು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದ್ದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ತನ್ನ ಮೊದಲ ಸಭೆಯನ್ನು ಆಗಸ್ಟ್ 29 ರಂದು ನಡೆಸಿದ್ದು, ಈ ವೇಳೆ ಸೆಬಿಯ ಕಾರ್ಯಚಟುವಟಿಕೆ ಮತ್ತು ಹಲವು ಆರೋಪಗಳ ಬಗ್ಗೆ ಮಾಧಬಿ ಬಗ್ಗೆ ತನಿಖೆ ನಡೆಸಬೇಕೆಂದು ಹಲವಾರು ಸದಸ್ಯರು ಒತ್ತಾಯಿಸಿದ ನಂತರ ಈ ವಿಷಯವನ್ನು ಪಿಎಸಿಯ ಕಾರ್ಯಸೂಚಿಗೆ ಸೇರಿಸಲಾಗಿತ್ತು. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ನೇತೃತ್ವ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅವರು ವಹಿಸಿಕೊಂಡಿದ್ದು ಆಡಳಿತರೂಢ ಎನ್ ಡಿಎ ಮತ್ತು ವಿರೋಧ ಪಕ್ಷ ಇಂಡಿಯಾ ಬ್ಲಾಕ್ ನ ಸದಸ್ಯರು ಈ ಸಮಿತಿಯಲ್ಲಿದ್ದಾರೆ.
ಪಿಎಸಿಯ ಕಾರ್ಯಸೂಚಿಯಲ್ಲಿ, ಯಾವುದೇ ನಿಯಂತ್ರಕ ಅಥವಾ ನಿಯಂತ್ರಕ ಮುಖ್ಯಸ್ಥರ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸದಿದ್ದರೂ, ಇದನ್ನು "ಸಂಸತ್ತಿನ ಕಾಯಿದೆಯಿಂದ ಸ್ಥಾಪಿಸಲಾದ ನಿಯಂತ್ರಕ ಸಂಸ್ಥೆಗಳ ಕಾರ್ಯಕ್ಷಮತೆ ಪರಿಶೀಲನೆ" ಎಂದು ಪಟ್ಟಿ ಮಾಡಲಾಗಿದೆ.
ಅದರೂ, ಸೆಬಿ ಮುಖ್ಯಸ್ಥರ ವಿರುದ್ಧ ಇತ್ತೀಚಿಗೆ ಕೇಳಿಬಂದಿರುವ ಆರೋಪಗಳಿಂದ ತನಿಖೆ ಕೈಗೆತ್ತಿಕೊಳ್ಳವಂತೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಬಂಡವಾಳ ಮಾರುಕಟ್ಟೆ ನಿಯಂತ್ರಕ ಮತ್ತು ಸೆಬಿ ಮುಖ್ಯಸ್ಥರ ವಿರುದ್ಧದ ಗಂಭೀರ ಆರೋಪಗಳ ಬಗ್ಗೆ ಅನೇಕ ಸದಸ್ಯರು ಕಳವಳ ವ್ಯಕ್ತಪಡಿಸಿದ್ದರಿಂದ ಆಗಸ್ಟ್ 29 ರ ಸಭೆಯಲ್ಲಿ ಈ ವಿಷಯವನ್ನು ಸ್ವಯಂ ಮೋಟೋ ಆಧಾರದ ಮೇಲೆ ಸೇರಿಸಲಾಯಿತು. ಇದರ ಅನ್ವಯ ಸಂಬಂಧಿತ ಸಂಸ್ಥೆಯ ಮುಖ್ಯಸ್ಥರನ್ನು ಈ ತಿಂಗಳು ವಿಚಾರಣೆಗೆ ಕರೆಯಬಹುದು ಎಂದು ಮತ್ತೋರ್ವರು ತಿಳಿಸಿದ್ದಾರೆ.
ಮಾಧವಿ ಬುಚ್ ವಿರುದ್ಧ ಸರಣಿ ಆರೋಪ:
ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ಒಂದಾದ ಮೇಲೊಂದು ಆರೋಪಗಳು ಕೇಳಿ ಬರುತ್ತಿವೆ. ಹಿಂದೆ ಮಾಧವಿ ಬುಚ್ ಹಾಗೂ ಆಕೆ ಪತಿ ವಿದೇಶಿ ಹೂಡಿಕೆ ನಿಧಿಗಳಲ್ಲಿ ಹೂಡಿಕೆ ಹೊಂದಿದ್ದರು. ಇದೇ ನಿಧಿ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿತ್ತು. ಇದೇ ಸೆಬಿಯು ಅದಾನಿ ಪ್ರಕರಣವನ್ನು ವಿಚಾರಣೆ ನಡೆಸುವ ಮೂಲಕ 'ಹಿತಾಸಕ್ತಿಯ ಸಂಘರ್ಷ' ಉಂಟಾಗಿದೆ ಎಂದು ಹಿಂಡೆನ್‌ಬರ್ಗ್ ಹೇಳಿತ್ತು.ಈ ಆರೋಪವನ್ನು ಮಾಧವಿ ಪುರಿ ಬುಚ್ ತಳ್ಳಿ ಹಾಕಿದ್ದರು.
ಇದಾದ ನಂತರ, ಸೆಬಿಗೆ ಸೇರುವ ಮುಂಚೆ ತಾವು ಕೆಲಸ ಮಾಡುತ್ತಿದ್ದ ಐಸಿಐಸಿಐ ಬ್ಯಾಂಕ್‌ನಿಂದ ಮಾಧವಿ ಪುರಿ ಬುಚ್ ಈಗಲೂ ವೇತನ ಪಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಗುರುತರ ಆರೋಪ ಮಾಡಿತ್ತು. ಇದಾದ ನಂತರ ಸೆಬಿ ಮುಖ್ಯಸ್ಥೆಯಾಗಿ ಮಾಧಬಿ ಪುರಿ ಬುಚ್ ಸೆಬಿಯಲ್ಲಿ ಅಹಿತಕರ ವಾತವಾರಣ ಇದೆ ಎಂದು ಉದ್ಯೋಗಿಗಳು ಆರೋಪಿಸಿ ಪ್ರತಿಭಟಿಸಿದ್ದಾರೆ


Click it and Unblock the Notifications