ಚೀನಾದ ಬ್ಯಾಂಕುಗಳಿಗೆ ನಲವತ್ತು ವರ್ಷಗಳಲ್ಲಿಯೇ ಕೆಟ್ಟ ಪರಿಸ್ಥಿತಿ

ಬಿಜಿಂಗ್: ಕೊರೊನಾವೈರಸ್ ಹುಟ್ಟಿಗೆ ಕಾರಣವಾದ ಚೀನಾದಲ್ಲಿ ಸದ್ಯ ಕಳೆದ ನಲವತ್ತು ವರ್ಷಗಳಲ್ಲಿಯೇ ಅತಿದೊಡ್ಡ ಆರ್ಥಿಕ ಹಿಂಜರಿತ ಉಂಟಾಗುತ್ತಿದೆ. ಹಣಕಾಸು ವಲಯ ತೀವ್ರ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ.

ಚೀನಾದಲ್ಲಿ ಸದ್ಯ ಹಣಕಾಸು ಸಂಸ್ಥೆಗಳಿಗೆ ಬ್ಯಾಂಕುಗಳಿಗೆ ಕೆಟ್ಟ ಸಾಲಗಳ ತಲೆನೋವು ವಿಪರೀತವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದರಿಂದ ಎಚ್ಚೆತ್ತುಕೊಂಡಿರುವ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಕೆಟ್ಟ ಸಾಲಗಳಿಗೆ ತಡೆ ಹಾಕಲು ಪ್ರಾಯೋಗಿಕ ಯೋಜನೆಯೊಂದಕ್ಕೆ ಮುಂದಾಗಿದೆ.

ಆತಂಕಗಳ ಮಧ್ಯೆ ದೊಡ್ಡ ವಹಿವಾಟುಗಳನ್ನು ತಡೆಹಿಡಿಯುವ ಕಾರ್ಯಕ್ರಮವನ್ನು ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಈ ತಿಂಗಳು ಹೆಬೀ ಪ್ರಾಂತ್ಯದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿತು. ಚಿಲ್ಲರೆ ಮತ್ತು ಬುಸಿನೆಸ್ ವಲಯದವರು ಯಾವುದೇ ದೊಡ್ಡ ನಗದು ಹಿಂತೆಗೆತ ಅಥವಾ ಠೇವಣಿಗಳನ್ನು ಮೊದಲೇ ವರದಿ ಮಾಡಲು ಹೇಳಿದೆ.

ಚೀನಾದ ಬ್ಯಾಂಕುಗಳಿಗೆ ನಲವತ್ತು ವರ್ಷಗಳಲ್ಲಿಯೇ ಕೆಟ್ಟ ಪರಿಸ್ಥಿತಿ

ಎರಡು ವರ್ಷಗಳ ಈ ಕಾರ್ಯಕ್ರಮವನ್ನು ಅಕ್ಟೋಬರ್‌ನಲ್ಲಿ ಜಿಯಾಂಗ್ ಮತ್ತು ಶೆನ್ ಪ್ರಾಂತ್ಯಕ್ಕೆ ವಿಸ್ತರಿಸಲಾಗುವುದು, ಇದು 70 ದಶಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಳ್ಳುತ್ತದೆ. ಚೀನಾದ ಬ್ಯಾಂಕುಗಳು ನಾಲ್ಕು ದಶಕಗಳಲ್ಲಿ ಕೆಟ್ಟ ಸಾಲದ ಏರಿಕೆಯನ್ನು ಎದುರಿಸುತ್ತಿವೆ ಎಂದು ವರದಿಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+